ಶೈನಿಯ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

By Staff

ಮುಂಬೈ, ಜು. 2 : ಮನೆಗೆಲಸದ ಯುವತಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಬಾಲಿವುಡ್ ನಟ ಶೈನಿ ಅಹುಜಾ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಜುಲೈ 16ರ ವರೆಗೆ ವಿಸ್ತರಿಸಲಾಗಿದೆ.

ನಗರದ ಅಂಧೇರಿಯಲ್ಲಿರುವ ಮೆಟ್ರೋಪಾಲಿಟಿನ್ ಕೋರ್ಟ್ಗೆ ಹಾಜರಾದ ಶೈನಿ ಅವರ ನ್ಯಾಯಾಂಗ ಬಂಧನವನ್ನು ವಿಸ್ತರಿಸುವಂತೆ ಪಬ್ಲಿಕ್ ಪ್ರಾಸಿಕ್ಯೂಟರ್ ಮಾಡಿಕೊಂಡು ಮನವಿಯನ್ನು ಪುರಷ್ಕರಿಸಿ ನ್ಯಾಯಾಲಯ ಅವರ ಬಂಧನ ಅವಧಿಯನ್ನು ಜುಲೈ 16ರ ವರಗೆ ವಿಸ್ತರಿಸಿ ಆದೇಶ ನೀಡಿದೆ. ಜೂನ್ 13 ರಂದು ಮನೆಗೆಲಸದ ಯುವತಿ ಮೇಲೆ ಶೈನಿ ಅತ್ಯಾಚಾರ ಎಸಗಿದ್ದರು. ನಂತರ ಅವರನ್ನು ಬಂಧಿಸಿದ್ದ ಪೊಲೀಸರು ಜೂನ್ 18ರ ವರೆಗೆ ನ್ಯಾಯಾಂಗ ಬಂಧನದಲ್ಲಿಟ್ಟಿದ್ದರು.

ತದನಂತರ ಜುಲೈ 2ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಲಾಗಿತ್ತು. ಇದೀಗ ಈ ಅವಧಿ ಮುಗಿದ್ದು, ಜುಲೈ 16ರ ವರೆಗೆ ವಿಸ್ತರಣೆ ಮಾಡಲಾಗಿದೆ. ಅತ್ಯಾಚಾರ ಮಾಡಿರುವುದನ್ನು ಶೈನಿ ಒಪ್ಪಿಕೊಂಡಿಡಿದ್ದಾರೆ. ಡಿಎನ್ಎ ಪರೀಕ್ಷೆ ಮತ್ತಪು ವೈದ್ಯಕೀಯ ತಪಾಸಣೆಯಿಂದಲೂ ಅತ್ಯಾಚಾರ ಮಾಡಿದ್ದು ದೃಢಪಟ್ಟಿದೆ.

(ಏಜನ್ಸೀಸ್)

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X