ಉಪ್ಪಿ, ಪ್ರೇಮ್ ಚಿತ್ರಕ್ಕೆ ಮಂಗಳ ಹಾಡಿದ ಮುನಿರತ್ನ
ಉಪೇಂದ್ರ ಮತ್ತು ಜೋಗಯ್ಯ ಪ್ರೇಮ್ ಒಂದೇ ಚಿತ್ರದಲ್ಲಿ ನಟಿಸುವ ಚಿತ್ರ ಆರಂಭದಲ್ಲೇ ಮುಗ್ಗರಿಸಿದೆ. ಉಪ್ಪಿ ಪ್ರೇಮ್ ಅವರನ್ನು ಹಾಕಿಕೊಂಡು ಮಾಡುವ ಚಿತ್ರಕ್ಕೆ ನಿರ್ಮಾಪಕ ಮುನಿರತ್ನ ಎಳ್ಳು ನೀರು ಬಿಟ್ಟಿದ್ದಾರೆ. ಎಲ್ಲ ಸರಿಹೋಗಿದ್ದರೆ ಫೆಬ್ರವರಿ 9ರಂದು ಚಿತ್ರಅದ್ದೂರಿಯಾಗಿ ಸೆಟ್ಟೇರಬೇಕಾಗಿತ್ತು.
ಇಬ್ಬರು ನಾಯಕರೊಂದಿಗೆ ಸುದೀರ್ಘವಾಗಿ ಚರ್ಚಿಸಿರುವ ಮುನಿರತ್ನ, ಕಾಲ್‌ಶೀಟ್ ಹಾಗೂ ತಾಂತ್ರಿಕ ಬಳಗದಆಯ್ಕೆ ಸಮಸ್ಯೆ ತಲೆಎತ್ತಿದಕಾರಣ ಚಿತ್ರಕ್ಕೆ ಮಂಗಳ ಹಾಡಿದ್ದಾರೆ. ಇದು ಮಲಯಾಳಂನ ಯಶಸ್ವಿ ಚಿತ್ರ ಉದಯನಾನು ಥರಂ' (2005) ಚಿತ್ರದ ರೀಮೇಕ್ ಆಗಿತ್ತು.
ಆದರೆ ಉಪೇಂದ್ರ ನಾಯಕ ನಟನಾಗಿ ಚಿತ್ರವೊಂದನ್ನು ಆರಂಭಿಸಲಿದ್ದೇನೆ. ಅದರ ವಿವರಗಳನ್ನು ಶೀಘ್ರದಲ್ಲೆ ತಿಳಿಸುವುದಾಗಿ ಮುನಿರತ್ನ ಹೇಳಿದ್ದಾರೆ. ಈ ಹಿಂದೆಯೂ ಮುನಿರತ್ನ ತೆಲುಗಿನಲ್ಲಿ ಉಪೇಂದ್ರ ಜತೆ ಆರಂಭಿಸಿದ ಚಿತ್ರವನ್ನು ಅರ್ಧದಲ್ಲೇ ಕೈಬಿಟ್ಟಿದ್ದರು. ಈಗ ಪ್ರೇಮ್ ಉಪ್ಪಿ ಚಿತ್ರವನ್ನು ಆರಂಭದಲ್ಲೇ ಕೈಬಿಟ್ಟಿದ್ದಾರೆ.
ಉಪೇಂದ್ರ, ದರ್ಶನ್ ಅವರೊಂದಿಗೆ ಮಾಡಿದ್ದ ಬಹುತಾರಾಗಣದ ಅನಾಥರು ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈಗ ಮತ್ತೊಂದು ಬಹುತಾರಾಗಣದ ಚಿತ್ರವನ್ನು ಮಾಡುವುದು ಕಷ್ಟದ ಕೆಲಸವೇನಲ್ಲ ಎನ್ನುತ್ತಾರೆ ಮುನಿರತ್ನ. ಉಪೇಂದ್ರ ಜೊತೆಗಿನ ಮುನಿರತ್ನ ಚಿತ್ರಕ್ಕೆ ಅನೀಸ್ ವರ್ಮ ಆಕ್ಷನ್,ಕಟ್ ಹೇಳಲಿದ್ದಾರೆ.
ಜಾಕಿ ಬೆಡಗಿ ಭಾವನಾ ಚಿತ್ರದ ನಾಯಕಿ. ಎಂ ಎಸ್ ರಮೇಶ್ ಅವರ ಸಂಭಾಷಣೆ ಚಿತ್ರಕ್ಕಿರುತ್ತದೆ. ಆಕ್ಷನ್ ಪ್ರಧಾನ ಈ ಚಿತ್ರದಲ್ಲಿ ಎಲ್ಲ ಮಸಾಲೆ ಅಂಶಗಳು ಇರುತ್ತವಂತೆ. ಸದ್ಯಕ್ಕೆ ಉಳಿದ ಪಾತ್ರವರ್ಗದ ಹುಡುಕಾಟದಲ್ಲಿ ಚಿತ್ರದ ನಿರ್ದೇಶಕ ಅನೀಸ್ ವರ್ಮ ಮಗ್ನರಾಗಿದ್ದಾರೆ.


Click it and Unblock the Notifications











