»   » ಸತ್ಯು ವಾಗ್ದಾಳಿ: ಭಾಗ-2

ಸತ್ಯು ವಾಗ್ದಾಳಿ: ಭಾಗ-2

Posted By:
Subscribe to Filmibeat Kannada

ಮೈಸೂರು : ಯಾವ ಭಾಷೆಯಲ್ಲೂ ಇಲ್ಲದ ಸಬ್ಸಿಡಿ ವ್ಯವಸ್ಥೆ ಕನ್ನಡದಲ್ಲಿ ಯಾಕೆ? ಸರಕಾರ ಈ ಪದ್ಧತಿಯನ್ನು ಕೈಬಿಟ್ಟರೆ ಸೂಕ್ತ ಎಂದು ನಿರ್ದೇಶಕ ಎಂ.ಎಸ್‌.ಸತ್ಯು ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲಾ ಪತ್ರಕರ್ತರು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಕನ್ನಡ ಚಿತ್ರಗಳಿಗೆ ಸಬ್ಸಿಡಿ ನೀಡುವ ಅಗತ್ಯವಿಲ್ಲ. ಸರಕಾರ ಕೆಟ್ಟ ಚಿತ್ರಗಳಿಗೆ ಸಹಕಾರ ನೀಡಬಾರದು. ಕಷ್ಟದಲ್ಲಿರೋ ರೈತರಿಗೆ ಹಾಗೂ ಕುಶಲಕರ್ಮಿಗಳಿಗೆ ಪ್ರಸ್ತುತ ಸಬ್ಸಿಡಿ ನೀಡದ ಸರಕಾರ, ಚಿತ್ರರಂಗದ ಮೇಲೆ ಕರುಣೆ ತೋರಿಸುವ ಅಗತ್ಯವಿಲ್ಲ ಎಂದರು.

ವಿಚಾರ ಸಂಕೀರ್ಣದಲ್ಲಿ ಸತ್ಯು ಹೇಳಿದ್ದು ಇಷ್ಟು :

  • ‘ಯಾರ್ರೀ ಅಣ್ಣ ’ಅಂತ ಆವೇಶದಲ್ಲಿ ಹೇಳಿರಬಹುದು ಅದನ್ನು ಪತ್ರಿಕೆಗಳೂ ರೋಚಕವಾಗಿ ವರದಿ ಮಾಡಿವೆ. ನಾನು ರಾಜ್‌ ಮತ್ತು ಕನ್ನಡ ಚಿತ್ರರಂಗದ ಕ್ಷಮೆ ಕೇಳಿಲ್ಲ, ಕೇಳುವುದೂ ಇಲ್ಲ.
  • ಕನ್ನಡದಲ್ಲಿ ಒಂದು ಗುಂಪು ಸಾರ್ವಭೌಮತ್ವವನ್ನು ಸಾಧಿಸಿದೆ. ಆ ಮೂಲಕ ಬೇರೆಯವರಿಗೆ ಅವಕಾಶ ಸಿಗದಂತೆ ಮಾಡಿದೆ. ಹಿಂದಿಯಲ್ಲಿ ಲತಾಮಂಗೇಶ್ಕರ್‌ ಹೀಗೆಯೇ ಮಾಡಿದ್ದರು.
  • ಕನ್ನಡ ಚಳವಳಿ ಮಾಡೋರೆಲ್ಲ ಪುಂಡರು. ಅವರಿಗೆ ಕಲ್ಲು ಹೊಡೆಯೋದಕ್ಕಷ್ಟೇ ಬರೋದು. ಅಮಿತಾಬ್‌ ಬಚ್ಚನ್‌, ದಿಲೀಪ್‌ಕುಮಾರ್‌ಗಿಲ್ಲದ ಅಭಿಮಾನಿ ಸಂಘಗಳು ಇವರಿಗೇಕೆ?
  • ರಾಜ್‌ಕುಮಾರ್‌ ಪುತ್ರ ನಟಿಸಿದ ‘ಅಪ್ಪು’ಚಿತ್ರ ಅತ್ಯಂತ ಕೆಟ್ಟದಾಗಿದೆ. ಅದು ಅಪ್ಪು ಅಲ್ಲ ತಪ್ಪು!
  • ಉಪೇಂದ್ರ ಯಾವ ದೇಶದ ಪ್ರಾಣಿಯೋ ಗೊತ್ತಿಲ್ಲ. ಆತನ ಜುಟ್ಟೋ, ಫುಲ್‌ಸ್ಟಾಫ್‌ ಮತ್ತು ಕಾಮ ಇಲ್ಲದೇ ಆತ ಅದೇನ್‌ ಮಾತಾಡ್ತಾನೋ ದೇವರಿಗೆ ಗೊತ್ತು? ಉಪೇಂದ್ರನ ಸಿನಿಮಾ ಪ್ರದರ್ಶನಗೊಳ್ಳುವ ಚಿತ್ರಮಂದಿರದ ಮುಂದೆ ಬರೋದಕ್ಕೆ ಸಹ ನನಗೆ ನಾಚಿಕೆಯಾಗುತ್ತೆ...
  • ಸುದೀಪ್‌ ಮತ್ತು ದರ್ಶನ್‌ರ ಒಂದು ಸಿನಿಮಾ ನೋಡಿದ್ರೆ ಸಾಕು. ಅದೇ ಎಲ್ಲಾ ಚಿತ್ರಗಳಲ್ಲೂ ಮುಂದುವರೆದಿರುತ್ತೆ.
(ಇನ್ಫೋ ವಾರ್ತೆ)
Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada