»   » ಪ್ಯಾರ್‌ ಮೆ ಟ್ವಿಸ್ಟ್‌ : ಕನ್ನಡ ಚಿತ್ರದ ಕಥೆ ಕದ್ದರಪ್ಪೋ...

ಪ್ಯಾರ್‌ ಮೆ ಟ್ವಿಸ್ಟ್‌ : ಕನ್ನಡ ಚಿತ್ರದ ಕಥೆ ಕದ್ದರಪ್ಪೋ...

Subscribe to Filmibeat Kannada

ಬೆಂಗಳೂರು : ಕನ್ನಡ ಚಿತ್ರ ನಿರ್ದೇಶಕಿ ಕವಿತಾ ಲಂಕೇಶ್‌ ಮನವಿಗೆ ಸ್ಪಂದಿಸಿದ ನಗರ ನ್ಯಾಯಾಲಯ, ಶುಕ್ರವಾರ ತೆರೆ ಕಾಣಬೇಕಿದ್ದ ಹಿಂದಿ ಚಲನಚಿತ್ರ ‘ಪ್ಯಾರ್‌ ಮೆ ಟ್ವಿಸ್ಟ್‌ ’ ಪ್ರದರ್ಶನಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.

‘ಪ್ಯಾರ್‌ ಮೆ ಟ್ವಿಸ್ಟ್‌ ’ ಚಲನಚಿತ್ರವು, ನಾನು ಈ ಹಿಂದೆ ನಿರ್ದೇಶಿಸಿದ್ದ ‘ಪ್ರೀತಿ ಪ್ರೇಮ ಪ್ರಣಯ’ ಚಿತ್ರದ ನಕಲಾಗಿದೆ. ಈ ಚಲನಚಿತ್ರದ ಹಕ್ಕುಗಳನ್ನು ಪಡೆಯದೇ ಹಿಂದಿಯಲ್ಲಿ ತಯಾರು ಮಾಡಲಾಗಿದೆ. ಹೀಗಾಗಿ ಚಿತ್ರ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡ ಬೇಕು ಎಂದು ಕವಿತಾ ಲಂಕೇಶ್‌ ನಗರದ 13ನೇ ಸಿವಿಲ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ವಿಚಾರಣೆಯನ್ನು ಸೆ.30ಕ್ಕೆ ಮುಂದೂಡಿದ ನ್ಯಾಯಾಲಯ ಚಿತ್ರ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡಿದೆ. ಅನಂತನಾಗ್‌, ಭಾರತಿ, ಅನುಪ್ರಭಾಕರ್‌ ಮತ್ತಿತರರು ನಟಿಸಿದ್ದ ‘ಪ್ರೀತಿ ಪ್ರೇಮ ಪ್ರಣಯ’ ಚಿತ್ರವು ಅಪಾರ ಜನಮನ್ನಣೆ ಗಳಿಸಿತ್ತು.

ಕನ್ನಡ ಚಿತ್ರದ ನಕಲು ಎನ್ನಲಾಗಿರುವ ‘ಪ್ಯಾರ್‌ ಮೆ ಟ್ವಿಸ್ಟ್‌’ನಲ್ಲಿ ರಿಶಿಕಪೂರ್‌-ಡಿಂಪಲ್‌ ಕಪಾಡಿಯಾ, ಸೋಹಾ ಆಲಿ ಖಾನ್‌ ಮುಂತಾದವರು ಅಭಿನಯಿಸಿದ್ದಾರೆ.

(ಪಿಟಿಐ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada