»   » ಬಿಕ್ಕಟ್ಟು ಮುಂದುವರಿಕೆ; ಈವಾರವೂ ಬೆಂಗಳೂರಲ್ಲಿ ಹೊಸ ಚಿತ್ರ ಇಲ್ಲ !

ಬಿಕ್ಕಟ್ಟು ಮುಂದುವರಿಕೆ; ಈವಾರವೂ ಬೆಂಗಳೂರಲ್ಲಿ ಹೊಸ ಚಿತ್ರ ಇಲ್ಲ !

Subscribe to Filmibeat Kannada

ಬೆಂಗಳೂರು : ಹೊಸ ಕನ್ನಡೇತರ ಚಿತ್ರಗಳನ್ನು ಬೆಂಗಳೂರಿನಲ್ಲಿ ಅ.1ರಂದು ತೆರೆ ಕಾಣಿಸಲು ಪಟ್ಟುಹಿಡಿದಿದ್ದ ಪ್ರದರ್ಶಕರು ತಮ್ಮ ಪ್ರಯತ್ನದಲ್ಲಿ ಹೆಚ್ಚೂಕಡಿಮೆ ವಿಫಲರಾಗಿದ್ದಾರೆ.

ಉದ್ದೇಶಿತ ಹಿಂದಿ ಚಿತ್ರಗಳು ಅ.1ರ ಶುಕ್ರವಾರ ತೆರೆ ಕಾಣಲಿಲ್ಲ . ಆದರೆ ಉತ್ತರ ಕರ್ನಾಟಕದ ಕೆಲವೆಡೆ ಹೊಸ ಕನ್ನಡೇತರ ಚಿತ್ರಗಳು ಬಿಡುಗಡೆಯಾಗಿರುವ ವರದಿಗಳು ಬರುತ್ತಿವೆ. ಈ ನಡುವೆ ಶುಕ್ರವಾರ ನಡೆದ ಕನ್ನಡ ಚಿತ್ರೋದ್ಯಮದ ಸಭೆ ಯಾವುದೇ ನಿರ್ಣಯವಿಲ್ಲದೆ ಕೊನೆಗೊಳ್ಳುವುದರೊಂದಿಗೆ ಬಿಕ್ಕಟ್ಟು ಮುಂದಿನ ವಾರಕ್ಕೂ ಮುಂದುವರೆಯಿತು.

ನಟ-ಸಂಸದ ಅಂಬರೀಷ್‌ ಅಧ್ಯಕ್ಷತೆಯಲ್ಲಿ ನಡೆದ ಚಿತ್ರೋದ್ಯಮದ ಸಭೆಯಲ್ಲಿ ಪಾರ್ವತಮ್ಮ ರಾಜ್‌ಕುಮಾರ್‌, ರಾಘವೇಂದ್ರ, ಜಗ್ಗೇಶ್‌, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಚ್‌.ಡಿ.ಗಂಗರಾಜು, ಎಸ್‌.ವಿ.ರಾಜೇಂದ್ರಸಿಂಗ್‌ಬಾಬು, ಸಾ.ರಾ.ಗೋವಿಂದು ಮುಂತಾದವರು ಭಾಗವಹಿಸಿದ್ದರು. ಆದರೆ, ಪರಭಾಷಾ ಚಿತ್ರಗಳ ಪರವಾಗಿ ವಕಾಲತ್ತು ವಹಿಸುತ್ತಿರುವ ಓದುಗೌಡರ್‌ ಸಭೆಗೆ ಗೈರುಹಾಜರಾಗಿದ್ದರು.

ಇನ್ನು ಒಂದೆರಡು ದಿನಗಳಲ್ಲಿ ಚಿತ್ರೋದ್ಯಮದ ಬಿಕ್ಕಟ್ಟು ಬಗೆಹರಿಯುವ ಕುರಿತು ವಾಣಿಜ್ಯ ಮಂಡಳಿ ಅಧ್ಯಕ್ಷ ಗಂಗರಾಜು ಆಶಾವಾದ ವ್ಯಕ್ತಪಡಿಸಿದ್ದಾರೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada