»   » ರಕ್ಷಿತಾ-ಪ್ರೇಮ್‌ರ ಕಿರಿಕ್‌ : ನಾರಾಯಣ್‌ ಗುರ್‌ಗುರ್‌!

ರಕ್ಷಿತಾ-ಪ್ರೇಮ್‌ರ ಕಿರಿಕ್‌ : ನಾರಾಯಣ್‌ ಗುರ್‌ಗುರ್‌!

Posted By:
Subscribe to Filmibeat Kannada


ವಿಷ್ಣುವರ್ಧನ್‌ ಅವರ ನಿವಾಸದಲ್ಲಿ ನಡೆದ ಕಲಾವಿದರ ಸಭೆಯಲ್ಲಿ, ರಕ್ಷಿತಾ ವರ್ತನೆಗೆ ವಿರೋಧ ವ್ಯಕ್ತವಾಗಿದೆ. ನಿರ್ಮಾಪಕರಿಗೆ ತೊಂದರೆ ನೀಡದೆ, ಚಿತ್ರೀಕರಣದಲ್ಲಿ ಪಾಲ್ಗೊಳ್ಳಬೇಕೆಂದು ಸಭೆಯಲ್ಲಿದ್ದ ಬಿ.ಸರೋಜದೇವಿ, ಜಯಂತಿ ಮತ್ತಿತರರು ಅಭಿಪ್ರಾಯಪಟ್ಟಿದ್ದಾರೆ.

ರಕ್ಷಿತಾ ಮೊದಲು ಹೀಗೆಲ್ಲ ಇರಲಿಲ್ಲ. ನಿರ್ಮಾಪಕರಿಗೆ ಎಂದೂ ತೊಂದರೆ ಕೊಟ್ಟಿರಲಿಲ್ಲ. ಒಂದು ರೀತಿಯಲ್ಲಿ ರಕ್ಷಿತಾ ನಿರ್ಮಾಪಕರ ಡಾರ್ಲಿಂಗ್‌. ಆದರೆ ಮದುವೆ ಫಿಕ್ಸ್‌ ಆದ ಮೇಲೆ ವರಸೆ ಬದಲಿಸಿದ್ದಾರೆ. ಈ ಹುಡುಗೀರು ಯಾಕೆ ಹೀಗೆ?

ರಕ್ಷಿತಾ ಕಿರಿಕ್‌ನಿಂದ ರೋಸಿ ಹೋಗಿರುವ ನಿರ್ದೇಶಕ ಎಸ್‌.ನಾರಾಯಣ್‌, ಕಲಾವಿದರ ಸಂಘಕ್ಕೆ ದೂರು ನೀಡಿದ್ದಾರೆ. ರಕ್ಷಿತಾಗೆ ಬುದ್ಧಿ ಹೇಳಿ ಎಂದು ಮನವಿ ಸಲ್ಲಿಸಿದ್ದಾರೆ.

ಗ್ರೀಸ್‌ನಲ್ಲಿ ನಡೆಯಲಿರುವ‘ ತಾಯಿಯ ಮಡಿಲು’ ಚಿತ್ರದ ಚಿತ್ರೀಕರಣಕ್ಕೆ ಬರುವುದಿಲ್ಲ ಎಂದು ರಕ್ಷಿತಾ ಕೈ ಎತ್ತಿದ್ದಾರೆ. ಅಲ್ಲಿ ನಟ ಶಿವರಾಜ್‌ ಕುಮಾರ್‌, ರಕ್ಷಿತಾ ಅಭಿನಯದ ಹಾಡುಗಳ ಚಿತ್ರೀಕರಣವಿದೆ. ಈ ಸಂಬಂಧ ಪೂರಕ ವ್ಯವಸ್ಥೆಗಳನ್ನು ಮಾಡಲಾಗಿದೆ. ಈಗ ಆಕೆ ಆಸಹಕಾರದಿಂದ ನಷ್ಟವಾಗುತ್ತಿದೆ ಎನ್ನುತ್ತಾರೆ ನಾರಾಯಣ್‌. ಅವರು ಈ ಚಿತ್ರದ ನಿರ್ಮಾಪಕರು ಹೌದು, ನಿರ್ದೇಶಕರು ಹೌದು.

ನಟ ವಿಷ್ಣುವರ್ಧನ್‌ ಅವರ ನಿವಾಸದಲ್ಲಿ ನಡೆದ ಕಲಾವಿದರ ಸಭೆಯಲ್ಲಿ, ರಕ್ಷಿತಾ ವರ್ತನೆಗೆ ವಿರೋಧ ವ್ಯಕ್ತವಾಗಿದೆ. ನಿರ್ಮಾಪಕರಿಗೆ ತೊಂದರೆ ನೀಡದೇ, ಚಿತ್ರೀಕರಣದಲ್ಲಿ ಪಾಲ್ಗೊಳ್ಳಬೇಕೆಂದು ಸಭೆಯಲ್ಲಿದ್ದ ಬಿ.ಸರೋಜದೇವಿ, ಜಯಂತಿ, ದೊಡ್ಡಣ್ಣ, ಸುಂದರರಾಜ್‌ ಮತ್ತಿತರರು ಅಭಿಪ್ರಾಯಪಟ್ಟಿದ್ದಾರೆ. ರಕ್ಷಿತಾ ಮನವೊಲಿಸುವ ಪ್ರಯತ್ನವೂ ನಡೆದಿದೆ. ಈ ಮಧ್ಯೆ ನಿರ್ದೇಶಕ ಪ್ರೇಮ್‌, ರಕ್ಷಿತಾ ಪರವಾಗಿ ಧ್ವನಿ ಎತ್ತಿದ್ದಾರೆ. ತಮ್ಮ ಭಾವಿ ಪತ್ನಿಯ ರಕ್ಷಣೆಗೆ ಧಾವಿಸಿದ್ದಾರೆ.

ರಕ್ಷಿತಾಗೆ ವಿದೇಶ ಪ್ರವಾಸ ಹೊಸತೇನಲ್ಲ. ತಮ್ಮ ಹಿಂದಿನ ‘ಲವ್‌’, ‘ಕಲಾಸಿಪಾಳ್ಯ’, ‘ಡೆಡ್ಲಿ ಸೋಮ’, ‘ಸುಂಟರಗಾಳಿ’, ‘ಮಂಡ್ಯ’ ಚಿತ್ರಗಳಿಗಾಗಿ ಈ ಹಿಂದೆ ವಿದೇಶ ಸುತ್ತಿದ್ದಾರೆ. ಇಷ್ಟಕ್ಕೂ ರಕ್ಷಿತಾ, ಗ್ರೀಸ್‌ಗೆ ಹೋಗಲು ಈಗ ಯಾಕೆ ನಕರಾ ಮಾಡುತ್ತಿದ್ದಾರೆ ಎಂದು ನೀವು ಪ್ರಶ್ನಿಸಬಹುದು.

‘ಸದ್ಯದಲ್ಲಿಯೇ ನನ್ನ ಮತ್ತು ಪ್ರೇಮ್‌ ವಿವಾಹ ನಡೆಯಲಿದೆ. ಹೀಗಾಗಿ ಗ್ರೀಸ್‌ಗೆ ಬರಲು ಸಾಧ್ಯವಿಲ್ಲ’ ಎಂದು ರಕ್ಷಿತಾ ನೆಪ ಹೇಳುತ್ತಿದ್ದಾರೆ. ಆದರೆ ನಂಬಲರ್ಹ ಸಿನಿ ಮೂಲಗಳ ಪ್ರಕಾರ ರಕ್ಷಿತಾ, ತಮ್ಮ ಭಾವಿ ಅತ್ತೆ ಮತ್ತು ಗಂಡನ ಜೊತೆ ನ.9ರಂದು ಸ್ವಿಟ್ಜರ್‌ ಲ್ಯಾಂಡ್‌ ವಿಮಾನ ಹತ್ತಲಿದ್ದಾರೆ. ‘ಪ್ರೀತಿ ಏಕೆ ಭೂಮಿ ಮೇಲಿದೆ’ ಚಿತ್ರ ತಂಡದೊಂದಿಗೆ ರಕ್ಷಿತಾ ತೆರಳಲಿದ್ದು, ಅಲ್ಲಿ 15ದಿನ ತಂಗುವರು. ಆಕೆ ಈ ಚಿತ್ರದ ನಾಯಕಿಯಲ್ಲ. ಆದರೆ ಚಿತ್ರದ ನಟ-ನಿರ್ದೇಶಕ ಪ್ರೇಮ್‌ರ ಭಾವಿ ಪತ್ನಿ ಅನ್ನೋದು ಮುಖ್ಯ ಸಂಗತಿ.

ಸುಂದರ ಮೊಗದ ಹಿಂದಿರುವ ಭಾವವಾದರೂ ಏನು?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada