»   » ‘ಮೌನಿ’ : ಅನಂತಮೂರ್ತಿ ಪ್ರಶಸ್ತಿ ನಿರಾಕರಣೆ

‘ಮೌನಿ’ : ಅನಂತಮೂರ್ತಿ ಪ್ರಶಸ್ತಿ ನಿರಾಕರಣೆ

Subscribe to Filmibeat Kannada

‘ಮೌನಿ’ ಚಿತ್ರದ ಕತೆಗಾಗಿ ರಾಜ್ಯ ಸರಕಾರ ಪ್ರಕಟಸಿರುವ ಅತ್ಯುತ್ತಮ ಕಥಾ ಲೇಖಕ ಪ್ರಶಸ್ತಿಯನ್ನು ಸ್ವೀಕರಿಸಲು ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ.ಯು.ಆರ್‌.ಅನಂತಮೂರ್ತಿ ನಿರಾಕರಿಸಿದ್ದಾರೆ.

ಪ್ರಸಕ್ತ ಸಾಲಿನ ರಾಜ್ಯ ಪ್ರಶಸ್ತಿಗಳ ಬಗೆಗೆ ಅಸಮಾಧಾನದ ಗುಸುಗುಸು ವ್ಯಾಪಕವಾಗುತ್ತಿದ್ದು , ಅನಂತಮೂರ್ತಿಯವರ ಪ್ರಶಸ್ತಿ ನಿರಾಕರಣೆಯಿಂದಾಗಿ ಈ ಅಸಮಾಧಾನ ಬಹಿರಂಗಗೊಂಡಂತಾಗಿದೆ.

ರಾಜ್ಯ ಸರ್ಕಾರ ಪ್ರಕಟಿಸಿರುವ ಪ್ರಶಸ್ತಿ ನನ್ನ ಕತೆ ಓದಿ ಕೊಡುವ ಪ್ರಶಸ್ತಿ ಅಲ್ಲ. ಬದಲಿಗೆ ನೋಡಿ ಕೊಡುವ ಪ್ರಶಸ್ತಿ. ಈ ಪ್ರಶಸ್ತಿಯನ್ನು ಸ್ವೀಕರಿಸಲು ಸಂಕೋಚವಾಗುತ್ತದೆ. ‘ಮೌನಿ’ ಕಥೆಯನ್ನು 60ರ ದಶಕದಲ್ಲೇ ಬರೆದೆ. ಈಗ ಆ ಕಥೆಯನ್ನು ಸಿನಿಮಾ ರೂಪದಲ್ಲಿ ಗ್ರಹಿಸಿ ನೀಡುವ ಪ್ರಶಸ್ತಿ ತಮಗೆ ಬೇಡ ಎಂದು ಸೋಮವಾರ ಕೇರಳದಿಂದ ಬೆಂಗಳೂರಿಗೆ ಆಗಮಿಸಿದ ಅನಂತಮೂರ್ತಿ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ತಿಳಿಸಿದರು.

‘ಮೌನಿ’ ಚಿತ್ರಕ್ಕೆ ಇತರ ಯಾವುದೇ ಪ್ರಶಸ್ತಿ ಬರದಿರುವ ಕುರಿತು ಅನಂತಮೂರ್ತಿ ಬೇಸರ ವ್ಯಕ್ತಪಡಿಸಿದರು. ಪ್ರತಿಯಾಂದೂ ಕಮರ್ಷಿಯಲ್‌ ಆಗುತ್ತಿರುವ ಸಂದರ್ಭದಲ್ಲಿ ಯುವಪ್ರತಿಭೆಗಳು ಸೇರಿ ನಿರ್ಮಿಸಿರುವ ಕಲಾತ್ಮಕ ಚಿತ್ರವನ್ನು ಸರ್ಕಾರ ಪ್ರೋತ್ಸಾಹಿಸಬೇಕಾಗಿತ್ತು ಎಂದು ಅನಂತಮೂರ್ತಿ ಅಭಿಪ್ರಾಯಪಟ್ಟರು.

(ಇನ್ಫೋ ವಾರ್ತೆ)

Post your views

ಪ್ರಶಸ್ತಿಗಳ ವಿವರ
ಸುದೀಪ್‌-ಭಾವನಾ ಉತ್ತಮ ನಟ-ನಟಿ


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada