»   » ನಟಿ ಜಯಮಾಲಾರನ್ನು ‘ಸುಳ್ಳಿ’ ಎಂದ ಕೇರಳ ಸರ್ಕಾರ!

ನಟಿ ಜಯಮಾಲಾರನ್ನು ‘ಸುಳ್ಳಿ’ ಎಂದ ಕೇರಳ ಸರ್ಕಾರ!

Posted By:
Subscribe to Filmibeat Kannada


ತಿರುವನಂತಪುರ : ಮತ್ತೆ ಕೇರಳ ಸರ್ಕಾರ ಅಯ್ಯಪ್ಪ ಪಾದಸ್ಪರ್ಶ ಪ್ರಕರಣವನ್ನು ಕೆದಕಿದೆ. ‘ಈಗಲಾದರೂ ನಟಿ ಜಯಮಾಲಾ ಸತ್ಯ ಹೇಳಿ, ಕ್ಷಮೆ ಪಡೆಯಲಿ’ ಎಂದು ಕೇರಳದ ಧಾರ್ಮಿಕ ಸಚಿವ ಜಿ.ಸುಧಾಕರ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಜಯಮಾಲಾರನ್ನು ಹಿಂಸಿಸುವ ಉದ್ದೇಶ ನಮ್ಮ ಸರ್ಕಾರಕ್ಕಿಲ್ಲ. ತನಿಖಾ ಸಂಸ್ಥೆ ಮುಂದೆ ಅವರು ತಮ್ಮ ಹೇಳಿಕೆ ನೀಡಲಿ. ಆ ಮೂಲಕ ಲಕ್ಷಾಂತರ ಭಕ್ತರಲ್ಲಿ ಮೂಡಿರುವ ಸಂಶಯ ತೀರಲಿ ಎಂದರು.

ಶಬರಿ ಮಲೆಗೆ ಮಸಿ ಹಚ್ಚುವ ಹುನ್ನಾರ ಕೆಲವರಿಂದ ನಡೆಯುತ್ತಿದೆ. ಈ ಹುನ್ನಾರದಲ್ಲಿ ಜಯಮಾಲಾ ಭಾಗಿಯಾಗಿರಬಹುದು. ತಮ್ಮ ತಾರುಣ್ಯದಲ್ಲಿ ಶಬರಿಮಲೆಗೆ ಬಂದಿದ್ದೆ ಎನ್ನುವ ಜಯಮಾಲಾ ಹೇಳಿಕೆಯನ್ನು ನಂಬಲು ಸಾಧ್ಯವಿಲ್ಲ ಎಂದು ಜಿ.ಸುಧಾಕರ್‌ ಹೇಳಿದರು.

ಈ ಬಗ್ಗೆ ಜಯಮಾಲಾ ಅವರಿಗೆ ಸುಧಾಕರ್‌ ಪತ್ರ ಬರೆದಿದ್ದಾರೆ.

(ಏಜನ್ಸೀಸ್‌)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada