ರಿಮೇಕ್ 'ಅಡ್ಡ' ಕ್ಕಾಗಿ ಪ್ರೇಮ್ ಬಿಕೆಶ್ರೀ ಕಿತ್ತಾಟ
ವಿವಾದಗಳು, ಗಿಮಿಕ್ ಗಳ ನಡುವೆ ಸದಾ ಸಂಚರಿಸುವ ಜೋಗಿ ಖ್ಯಾತಿ ನಿರ್ದೇಶಕ ಪ್ರೇಮ್ ಈಗ ಮತ್ತೊಂದು ವಿವಾದದಲ್ಲಿ ಸಿಕ್ಕಿದ್ದಾರೆ. ಗೆಳೆಯ ನಿರ್ಮಾಪಕ ಬಿಕೆ ಶ್ರೀನಿವಾಸ್ ಜೊತೆ 'ಅಡ್ಡ' ಎಂಬ ರಿಮೇಕ್ ಚಿತ್ರದ ಶೀರ್ಷಿಕೆಗಾಗಿ ಕಿತ್ತಾಡುತ್ತಿದ್ದಾರೆ.
ಬಿಕೆ ಶ್ರೀನಿವಾಸ್ ಅವರು 'ಅಡ್ಡ' ಹೆಸರಿನಲ್ಲಿ ಚಿತ್ರ ನಿರ್ಮಿಸುತ್ತಿದ್ದು, ಸಂತು ಎಂಬುವರು ನಿರ್ದೇಶಕ ಎಂದು ಕೆಲ ಪತ್ರಿಕೆಗಳಲ್ಲಿ ಪ್ರಚಾರ ನೀಡಲಾಗಿತ್ತು.
ಈ ನಡುವೆ ಮಹೇಶ್ ಬಾಬು ನಿರ್ದೇಶನದಲ್ಲಿ ಪ್ರೇಮ್ ಅಂಡ್ ಗ್ಯಾಂಗ್ ತಮಿಳಿನ 'ಸುಬ್ರಮಣ್ಯಪುರಂ' ಚಿತ್ರವನ್ನು 'ಅಡ್ಡ' ಎಂಬ ಹೆಸರಿನಲ್ಲಿ ಭಟ್ಟಿ ಇಳಿಸುತ್ತಿರುವುದು ಎಲ್ಲರಿಗೂ ಗೊತ್ತಿದೆ.
ಪ್ರೇಮ್ ಹೊಸ ಚಿತ್ರ 'ಅಡ್ಡ' ಬಗ್ಗೆ ಖಾಸಗಿ ವಾಹಿನಿಯಲ್ಲಿ ಭರ್ಜರಿ ಪ್ರಚಾರ ಸುದ್ದಿ ನೋಡಿದ ಶ್ರೀನಿವಾಸ್ ಗರಂ ಆಗಿದ್ದಾರೆ. ಅಡ್ಡ ಪ್ರೇಮ್ ಗೆ ಸೇರಿದ್ದು, ಅವರು ಮೊದಲೇ ನೋಂದಣಿ ಮಾಡಿದ್ದರು ಎಂದು ಕಾರ್ಯಕ್ರಮದಲ್ಲಿ ಹೇಳಲಾಗಿತ್ತು.
ಬಿಕೆಶ್ರೀ ಉವಾಚ: ನವೆಂಬರ್ 2010 ರಲ್ಲೇ ನಾನು 'ಅಡ್ಡ' ನೋಂದಾಯಿಸಿದ್ದೇನೆ. ಬೇಕಾದರೆ ಎಲ್ಲಾ ದಾಖಲೆ ಒದಗಿಸುತ್ತೇನೆ. ಸಾರಾ ಗೋವಿಂದು ಅವರು ತನು ಚಿತ್ರ ಬ್ಯಾನರ್ ಅಡಿಯಲ್ಲಿ ನಂತರ ನೋಂದಾಯಿಸಿದ್ದಾರೆ.
ಅಲೆಮಾರಿ ಚಿತ್ರದ ನಂತರ ಸಂತು ಅವರು ಅಡ್ಡದ ಕಡೆ ಬರಲಿದ್ದಾರೆ. ಅಡ್ಡ ಎಂದಿದ್ದರೂ ನಮ್ಮದೇ ಎಂದು ಶ್ರೀನಿವಾಸ್ ಹೇಳುತ್ತಾರೆ. ಪ್ರೇಮ್ ಯಾಕೋ ಏನು ಪ್ರತಿಕ್ರಿಯೆ ನೀಡಿಲ್ಲ.


Click it and Unblock the Notifications











