ಸನ್ನಿ ಲಿಯೋನ್ 'ಮದುವೆ', ಮಧುಚಂದ್ರ ಮಾತ್ರ ಬಾಕಿ

By Prasad

ಲೈಂಗಿಕ ತಾರೆಗಿಂತ ವಯಸ್ಕರ ತಾರೆ ಎಂದು ಕರೆಯಿಸಿಕೊಳ್ಳಬಯಸುವ 'ಪೋರ್ನ್' ಸ್ಟಾರ್ ಸನ್ನಿ ಲಿಯೋನ್ ಬಗ್ಗೆ ಸುಮಧುರ ರಾತ್ರಿಗಳಲ್ಲಿ ಸುಂದರ ಕನಸು ಕಾಣುತ್ತಿದ್ದ ಕೋಟ್ಯಂತರ ಪ್ರೇಮಿಗಳ ಹೃದಯಗಳನ್ನು ಛಿದ್ರಛಿದ್ರಛಿದ್ರ ಮಾಡಿದ್ದಾರೆ.

ಬಿಗ್ ಬಾಸ್ 5 ರಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿರುವ ಭಾರತೀಯ ಮೂಲದ ನಟಿ ಸನ್ನಿ ಲಿಯೋನ್ ಬಿಗ್ ಬಾಸ್ ನಲ್ಲಿ ವಿಧ್ಯುಕ್ತವಾಗಿ 'ಮದುವೆ'ಯಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಲ್ಲಿ ನೀಡಲಾಗಿದ್ದ 'ಮದುವೆ' ಟಾಸ್ಕನ್ನು ಯಶಸ್ವಿಯಾಗಿ ಪೂರೈಸಿ ಭೇಷ್ ಅನಿಸಿಕೊಂಡಿದ್ದಾರೆ.

ಟಾಸ್ಕ್ ಭಾಗವಾಗಿ ಆಕೆಯ ಗಂಡ ಹೇಗಿರಬೇಕೆಂದು ಸನ್ನಿ ಸ್ಪಷ್ಟ ಕಲ್ಪನೆ ಹೊಂದಿದ್ದರು. ಆತ ವ್ಯಾಪಾರಿ ಬುದ್ಧಿಯವನಾಗಿರಬೇಕು, ಸುಂದರವಾಗಿರಬೇಕು, ಕಷ್ಟಪಟ್ಟು ಕೆಲಸ ಮಾಡಬೇಕು, ಧನಾತ್ಮಕ ಮನೋಭಾವ ಹೊಂದಿರಬೇಕು. ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ದೈಹಿಕವಾಗಿ ಬಲಿಷ್ಠನಾಗಿರಬೇಕು.

ಆಕೆಗೆ ಸ್ವಾರ್ಥ ಬುದ್ಧಿಯ ಗಂಡ ಬೇಡವೇ ಬೇಡವಂತೆ. ಇಡೀ ಜೀವನ ತನ್ನೊಂದಿಗೆ ಕಳೆಯಬಯಸುವ, ಸದಾಕಾಲ ಪ್ರೀತಿಸುವ ಗಂಡನೇ ಬೇಕಂತೆ. ಪ್ರತಿದಿನ ಬೆಳಿಗ್ಗೆ ಎದ್ದಕೂಡಲೆ 'ಐ ಲವ್ ಯೂ' ಅನ್ನುವ ಗಂಡಸೇ ಆಗಬೇಕಂತೆ. ಅಂತೂ ಬಿಗ್ ಬಾಸ್ ಗಂಡಸರಲ್ಲಿ ಈ ಎಲ್ಲ ಗುಣಗಳನ್ನು ಅಮರ್ ಉಪಾಧ್ಯಾಯನಲ್ಲಿ ಸನ್ನಿ ಕಂಡೇಬಿಟ್ಟಳು.

ಮುಂದೆ ಇನ್ನೇನು? ಇಬ್ಬರಿಗೂ ಬಾಸಿಂಗ ಕಟ್ಟಿ ಧಾಂಧೂಂ ಅಂತ ಬಿಗ್ ಬಾಸ್ ಸೆಟ್ಟಿನಲ್ಲಿಯೇ 'ಮದುವೆ' ಮಾಡೇಬಿಟ್ಟರು. ಉಳಿದವರು ಅಕ್ಷತೆ ಹಾಕಿ 'ವಧು-ವರರನ್ನು' ಹರಿಸಿ ಫೋಟೋ ತೆಗೆದುಕೊಂಡರು. ಮುಂದೆ ಶಾಸ್ತ್ರೋಕ್ತವಾಗಿ ಮೊದಲ ರಾತ್ರಿ ಆಚರಿಸಿ ಇಬ್ಬರೂ ಮಧುಚಂದ್ರಕ್ಕೆ ಹೋಗುತ್ತಾರೇನೋ ತಿಳಿದುಬಂದಿಲ್ಲ. ಅಲ್ಲೇ ಕೇಳಿಬಂದ ಮತ್ತೊಂದು ವಿಷಯವೆಂದರೆ, ಆಕೆಗೀಗಾಗಲೆ ಮದುವೆಯಾಗಿದೆ. ಲಾಸ್ ವೆಗಾಸ್ ನಲ್ಲಿದ್ದ ಗಂಡ ಸನ್ನಿಯ ಫೋನ್ ನಂಬರ್ ಕದ್ದನೆಂದು ಅವನಿಗೆ ವಿಚ್ಛೇದನವನ್ನೂ ನೀಡಿದ್ದಾಳಂತೆ. ಮೈ ಗಾಡ್!

More from Filmibeat

English summary
Adult star Sunny Leone disappointed her male fans by getting ‘married’ in the Bigg Boss 5 house as part of a wedding challenge.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X