ನಟ ದಶಾವರ ಚಂದ್ರು ವಿರುದ್ಧ ಅರೆಸ್ಟ್ ವಾರಂಟ್

ಪುನೀತ್ ರಾಜ್‌ಕುಮಾರ್ ಮುಖ್ಯಭೂಮಿಕೆಯಲ್ಲಿದ್ದ 'ರಾಜ್ ದಿ ಶೋಮ್ಯಾನ್' ಚಿತ್ರದ ವಿದೇಶಿ ಬಿಡುಗಡೆಗೆ ಸಂಬಂಧಿಸಿದಂತೆ ಕಿರಣ್ ಅವರಿಗೆ ಚಂದ್ರು ಪ್ರಾಣಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ. 'ರಾಜ್' ಚಿತ್ರದ ವಿದೇಶಿ ವಿತರಣೆ ಹಕ್ಕುಗಳನ್ನು ಡಾ.ಕಿರಣ್ ಪಡೆದಿದ್ದರು. ಒಪ್ಪಂದದ ಪ್ರಕಾರ 'ರಾಜ್' ಚಿತ್ರವನ್ನು ಏಕಕಾಲಕ್ಕೆ ವಿದೇಶದಲ್ಲೂ ಬಿಡುಗಡೆ ಮಾಡಬೇಕಾಗಿತ್ತು.
ಆದರೆ ಕಿರಣ್ ಅವರು 'ರಾಜ್' ಚಿತ್ರವನ್ನು ವಿದೇಶದಲ್ಲಿ ಬಿಡುಗಡೆ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಡಾ.ಕಿರಣ್ ಅವರಿಗೆ ಚಂದ್ರು ಪ್ರಾಣಬೆದರಿಕೆ ಒಡ್ಡಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಕಿರಣ್ ದೂರು ಸಲ್ಲಿಸಿದ್ದರು. ದಶಾವರ ಚಂದ್ರು ವಿರುದ್ಧ ಕೋರ್ಟ್ ದಸ್ತಗಿರಿಗೆ ಆದೇಶಿಸಿದೆ. (ಏಜೆನ್ಸೀಸ್)
More from Filmibeat
English summary
A warrant of arrest has been issued against Kannada actor and assistant director Dashavara Chandru. The complaint was filed by Dr. Kiran Thontabailu against Dashavara Chandru for threatening him about the release of the film Raaj The Showman in abroad.
ವಿವಾದ ವಾರಂಟ್ ಬಂಧನ ದಶಾವರ ಚಂದ್ರು ಜೋಗಯ್ಯ ರಾಜ್ ಪ್ರೇಮ್ warrant arrest dashavara chandru jogaiah raaj prem


Click it and Unblock the Notifications











