twitter
    For Quick Alerts
    ALLOW NOTIFICATIONS  
    For Daily Alerts

    ನಟ ದಶಾವರ ಚಂದ್ರು ವಿರುದ್ಧ ಅರೆಸ್ಟ್ ವಾರಂಟ್

    By Rajendra
    |

    Arrest warrant against Dashavara Chandru
    ನಟ ಹಾಗೂ ಸಹಾಯಕ ನಿರ್ದೇಶಕ ದಶಾವರ ಚಂದ್ರು ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ದಶಾವರ ಚಂದ್ರು ತಮಗೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಡಾ.ಕಿರಣ್ ತೋಂಟಬೈಲು ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಚಂದ್ರು ವಿರುದ್ಧ ಕೋರ್ಟ್ ದಸ್ತಗಿರಿಗೆ ಆದೇಶಿಸಿದೆ.

    ಪುನೀತ್ ರಾಜ್‌ಕುಮಾರ್ ಮುಖ್ಯಭೂಮಿಕೆಯಲ್ಲಿದ್ದ 'ರಾಜ್ ದಿ ಶೋಮ್ಯಾನ್' ಚಿತ್ರದ ವಿದೇಶಿ ಬಿಡುಗಡೆಗೆ ಸಂಬಂಧಿಸಿದಂತೆ ಕಿರಣ್‍‌ ಅವರಿಗೆ ಚಂದ್ರು ಪ್ರಾಣಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ. 'ರಾಜ್' ಚಿತ್ರದ ವಿದೇಶಿ ವಿತರಣೆ ಹಕ್ಕುಗಳನ್ನು ಡಾ.ಕಿರಣ್ ಪಡೆದಿದ್ದರು. ಒಪ್ಪಂದದ ಪ್ರಕಾರ 'ರಾಜ್' ಚಿತ್ರವನ್ನು ಏಕಕಾಲಕ್ಕೆ ವಿದೇಶದಲ್ಲೂ ಬಿಡುಗಡೆ ಮಾಡಬೇಕಾಗಿತ್ತು.

    ಆದರೆ ಕಿರಣ್ ಅವರು 'ರಾಜ್' ಚಿತ್ರವನ್ನು ವಿದೇಶದಲ್ಲಿ ಬಿಡುಗಡೆ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಡಾ.ಕಿರಣ್‌ ಅವರಿಗೆ ಚಂದ್ರು ಪ್ರಾಣಬೆದರಿಕೆ ಒಡ್ಡಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಕಿರಣ್ ದೂರು ಸಲ್ಲಿಸಿದ್ದರು. ದಶಾವರ ಚಂದ್ರು ವಿರುದ್ಧ ಕೋರ್ಟ್ ದಸ್ತಗಿರಿಗೆ ಆದೇಶಿಸಿದೆ. (ಏಜೆನ್ಸೀಸ್)

    English summary
    A warrant of arrest has been issued against Kannada actor and assistant director Dashavara Chandru. The complaint was filed by Dr. Kiran Thontabailu against Dashavara Chandru for threatening him about the release of the film Raaj The Showman in abroad.
    Monday, October 3, 2011, 12:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X