'ಆಪ್ತರಕ್ಷಕ' ರಜತ ಸಂಭ್ರಮಕ್ಕೆ ಬರೊಲ್ಲ ಎಂದರು ಭಾರತಿ

By Rajendra

ಸಾಹಸಸಿಂಹ ವಿಷ್ಣುವರ್ಧನ್ ಅವರ 200ನೇ ಚಿತ್ರ 'ಆಪ್ತರಕ್ಷಕ' 25 ವಾರಗಳನ್ನು ಪೂರೈಸಿದೆ. ಈ ಚಿತ್ರದ ರಜತ ಮಹೋತ್ಸವ ಕಾರ್ಯಕ್ರಮ ವಿಷ್ಣುವರ್ಧನ್ ಅವರ ಹುಟ್ಟುಹಬ್ಬದಂದೇ(ಸೆ.18) ನಡೆಯುತ್ತಿದೆ. ಆದರೆ ಈ ಸಮಾರಂಭದಲ್ಲಿ ಭಾರತಿ ವಿಷ್ಣುವರ್ಧನ್ ಅವರು ಭಾಗವಹಿಸುತ್ತಿಲ್ಲ.

ವಿಷ್ಣು ಚಿತ್ರೋತ್ಸವ ಕುರಿತು ಅವರು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದರು. ಚಿತ್ರದ ನಿರ್ಮಾಪಕ ಕೃಷ್ಣ ಪ್ರಜ್ವಲ್ ಅವರು 'ಆಪ್ತರಕ್ಷಕ' ರಜತ ಮಹೋತ್ಸವ ಕಾರ್ಯಕ್ರಮ ಕ್ಕೆ ತಮ್ಮನ್ನು ಆಹ್ವಾನಿಸಿದರು. ಆದರೆ ಅಂದು ತಮಗೆ ಬಿಡುವಿಲ್ಲದಕೆಲಸ ಕಾರ್ಯಗಳಿವೆ. ಮತ್ತೊಂದು ದಿನ ಸಮಾರಂಭವನ್ನು ಆಯೋಜಿಸಿ ಎಂದು ಹೇಳಿದೆ.

ಆದರೆ ಅವರು ಕೇಳಲಿಲ್ಲ. ಸೆಪ್ಟೆಂಬರ್ 18ರಂದೇ ಆಯೋಜಿಸುತ್ತಿರುವುದಾಗಿ ತಿಳಿಸಿದರು. ಕಾರ್ಯಕ್ರಮಕ್ಕೆ ಪರಭಾಷಾ ನಟರನ್ನು ಆಹ್ವಾನಿಸಿದ್ದೇನೆ. ಅವರಿಗೆಲ್ಲಾ ಮತ್ತೆ ಸಮಯ ಸಿಗುವುದಿಲ್ಲ ಎಂದರು. ಕಾರ್ಯಕ್ರಮಕ್ಕೆ ನಮಗಿಂತಲೂ ಬೇರೆಯವರೆ ಮುಖ್ಯವಾಗಿರಬೇಕಾದರೆ ನಾವು ಹೋಗುವುದರಲ್ಲಿ ಯಾವ ಅರ್ಥವಿದೆ ಎಂದು ಬೇಸರಿಕೊಂಡರು.

ನಮ್ಮ ಮಾತಿಗೆ ಬೆಲೆ ಇಲ್ಲ ಎಂದ ಮೇಲೆ ಅಲ್ಲಿಗೆ ಹೋಗಲು ನಮಗೆ ಯಾವ ಹಕ್ಕು ಇಲ್ಲ. ನಮ್ಮ ಯಜಮಾನರು ಇದೇ ಮಾತನ್ನು ಹೇಳುತ್ತಿದ್ದರು. ಅವರ ಪಾಡಿಗೆ ಅವರು 'ಆಪ್ತ್ತರಕ್ಷಕ' ಕಾರ್ಯಕ್ರಮ ನಡೆಸಲಿ. ನಮ್ಮ ಅಭ್ಯಂತರವೇನು ಇಲ್ಲ. ಆದರೆ ಅಂದು ನಮಗೆ ತುಂಬ ಕೆಲಸ ಕಾರ್ಯಗಳಿವೆ ಹಾಗಾಗಿ 'ಆಪ್ತರಕ್ಷಕ' ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X