ಸೈಕಲ್ ಚಿತ್ರದಿಂದ ನಿರ್ಮಾಪಕ ಭಕ್ತವತ್ಸಲಂ ಡಿಬಾರ್!
ಸೈಕಲ್ ಚಿತ್ರದ ನಿರ್ಮಾಪಕ ಭಕ್ತವತ್ಸಲಂ ಬಾಬು ಆ ಪ್ರಾಜೆಕ್ಟ್ ಇಂದ ಸಂಪೂರ್ಣ ಹೊರಬಿದ್ದಿದ್ದಾರೆ. ಈ ಹಿಂದೆ ಕರೆದ ಪ್ರೆಸ್‌ಮೀಟ್‌ನಲ್ಲಿ ಭಕ್ತವತ್ಸಲಂ ಬಾಬು ಅವರೇ ಮುಂದೆ ನಿಂತು ಸೈಕಲ್ ಚಿತ್ರ ಬಗ್ಗೆ ಮಾತನಾಡಿದ್ದರು. ಆದರೆ, ಶಿವಾರ್ಜುನ್ ತಿಂಗಳ ಹಿಂದಷ್ಟೇ ಕೊಟ್ಟ ಪೇಪರ್ ಆಡ್‌ನಲ್ಲಿ ಭಕ್ತವತ್ಸಲಂ ಅವರ ಹೆಸರನ್ನು ಕಿತ್ತುಹಾಕಿ, ಅದೇ ಜಾಗದಲ್ಲಿ ರಮೇಶ್ ರೆಡ್ಡಿ ಎನ್ನುವ ಹೆಸರು ಕೂರಿಸಿದ್ದರು.
ಅದು ಗೊತ್ತಾದ ಬಾಬಣ್ಣ ,ಶಿವಾರ್ಜುನ್ ಮೇಲೆ ಕೆಂಡಕಾರಿದ್ದರು. ಈಗ ಅವರು ಪೂರ್ಣಪ್ರಮಾಣದಲ್ಲಿ ಆ ಚಿತ್ರದಿಂದ ಹೊರಬಿದ್ದಿದ್ದಾರೆ. ತಾನು ಇನ್ವೆಸ್ಟ್ ಮಾಡಿದ ಒಂದಷ್ಟು ಲಕ್ಷವನ್ನು ಹಿಂದಕ್ಕೆ ಪಡೆದು, ಕೈಕಾಲು ಮಡಚಿ ಕೂತಿದ್ದಾರೆ ಭಕ್ತ..! ಈ ಹಿಂದೆ ಭಕ್ತವತ್ಸಲಂ ಅವರು ಭಕ್ತ ಚಿತ್ರಕ್ಕೆ ಹಣ ಹೂಡಿ, ಕೂಡಿಟ್ಟ ಒಂದಷ್ಟನ್ನು ಕಳೆದುಕೊಂಡಿದ್ದರು. ಆದರೂ ಅರ್ಜುನ್‌ಗೆ ಸೈಕಲ್ ಚಿತ್ರದ ಮೂಲಕ ಸೆಕೆಂಡ್ ಛಾನ್ಸ್ ಕೊಟ್ಟಿದ್ದರು.
ಈಗ ಅವರೇ ಹಿಂದೆ ಸರಿದಿದ್ದಾರೆ. ಅವರ ಜಾಗಕ್ಕೆ ರಮೇಶ್ ರೆಡ್ಡಿ ಬಂದಿದ್ದಾರೆ. ಮೊನ್ನೆ ನಡೆದ ಆಡಿಯೋ ರಿಲೀಸ್ ಸಮಾರಂಭದಲ್ಲೂ ರೆಡ್ಡಿ ಫ್ಯಾಮಿಲಿಯವರೇ ಹೆಚ್ಚು ಹೈಲೈಟ್ ಆಗಿದ್ದು!ಅದಕ್ಕೇ ಹೇಳೋದು-ಇದು ಗಾಂಧೀನಗರ, ಇಲ್ಲಿ ಏನು ಬೇಕಾದರೂ ಆಗಬಹುದು! ನಿರ್ದೇಶಕ ಅಗ್ನಿ ಈ ಚಿತ್ರದ ನಾಯಕನಟನೂ ಹೌರು. ಹರ್ಷಿಕಾ ಪೂಣಚ್ಚ ಚಿತ್ರದ ನಾಯಕಿ.


Click it and Unblock the Notifications











