ಪೋನಿ ವರ್ಮಾ ಕೈಹಿಡಿಯಲಿದ್ದಾರೆ ಪ್ರಕಾಶ್ ರೈ
ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರೈ ಎರಡನೆ ಮದುವೆ ಮಾಡಿಕೊಳ್ಳಲಿದ್ದಾರೆಯೇ? ಹೌದು ಎನ್ನುತ್ತವೆ ಮೂಲಗಳು. ಪ್ರಕಾಶ್ ರೈ ಮತ್ತು ಲಲಿತಾ ಕುಮಾರಿ (ಡಿಸ್ಕೋ ಶಾಂತಿ ಸಹೋದರಿ ) ವಿವಾಹ ವಿಚ್ಛೇದನಕ್ಕೆ ಚೆನ್ನೈನ ಕೌಟುಂಬಿಕ ನ್ಯಾಯಾಲಯ ಈಗಾಗಲೇ ಅನುಮತಿ ನೀಡಿದೆ. ಪ್ರಕಾಶ್ ರೈ ಈಗಾಗಲೇ ಎರಡನೇ ಮದುವೆಯಾಗಲು ಸಿದ್ಧತೆ ನಡೆಸಿದ್ದಾರೆ ಎನ್ನುತ್ತವೆ ಸುದ್ದಿ ಮೂಲಗಳು.
ಬಾಲಿವುಡ್ ನ ನೃತ್ಯ ನಿರ್ದೇಶಕಿ ಪೋನಿ ವರ್ಮಾ ಅವರ ಕೈ ಹಿಡಿಯಲಿದ್ದಾರೆ ಪ್ರಕಾಶ್ ರೈ. ಕಳೆದ ಎರಡು ವರ್ಷಗಳಿಂದಲೂ ಪೋನಿ ವರ್ಮಾ ಅವರೊಂದಿಗೆ ಪ್ರಕಾಶ್ ರೈಆಪ್ತ ಸಂಬಂಧವನ್ನು ಹೊಂದಿದ್ದರು. ವೃತ್ತಿ ಜೀವನದಲ್ಲಿ ಉನ್ನತ ಮಟ್ಟಕ್ಕೇರಬೇಕೆಂಬ ಆಕಾಂಕ್ಷೆ ಇದ್ದ ಕಾರಣ ಪೋನಿ ಮದುವೆಯನ್ನು ಮುಂದೂಡಿದ್ದರು. ಈಗ ಕಾಲ ಕೂಡಿಬಂದಿದ್ದು ಇಬ್ಬರೂ ಹಸೆಮಣೆ ಏರಲು ಸಿದ್ದಹ್ತೆ ನಡೆಸಿದ್ದಾರಂತೆ.
ಪೋನಿ ವರ್ಮಾ ಅವರು ಬಾಲಿವುಡ್ ನ ಹಲವಾರು ಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಚಾಂದನಿ ಚೌಕ್ ಟು ಚೈನಾ, ಭೂಲ್ ಭೂಲಯ್ಯ, ನಮಸ್ತೆ ಲಂಡನ್, ಚುಪ್ ಚುಪ್ ಕೆ, ಪದ್ಮಶ್ರೀ ಲಾಲು ಪ್ರಸಾದ್ ಯಾದವ್, ಹಂಗಾಮ ಸೇರಿದಂತೆ ಹಲವು ಯಶಸ್ವಿ ಚಿತ್ರಗಳಿಗೆ ಪೋನಿ ನೃತ್ಯ ನಿರ್ದೇಶನ ಮಾಡಿದ್ದಾರೆ.


Click it and Unblock the Notifications











