»   »  ಅಮೃತ ಮಹೋತ್ಸವದಲ್ಲಿ ಮಿಡಿದ ಅಪಸ್ವರಗಳು

ಅಮೃತ ಮಹೋತ್ಸವದಲ್ಲಿ ಮಿಡಿದ ಅಪಸ್ವರಗಳು

Posted By:
Subscribe to Filmibeat Kannada
Ramesh Aravind
ಅದ್ದೂರಿ ಅಮೃತ ಮಹೋತ್ಸವಕ್ಕೆ ಆಗಮಿಸಿದ್ದ ನಟ, ನಟಿಯರು ಅನುಭವಿಸಿದ ಪೇಚಾಟ, ಪರದಾಟಗಳು ಇಲ್ಲಿವೆ. ಗಾಬರಿ, ಭಯ, ಆತಂಕಗಳ ನಡುವೆ ಅಮೃತ ಗಳಿಗೆಗಳನ್ನು ಸವಿಯಬೇಕಾಯಿತು. ಒಟ್ಟಿನಲ್ಲಿ ಅಮೃತ ಮಹೋತ್ಸವದಲ್ಲೂ ಅಪಸ್ವರಗಳು ಮಿಡಿದಿವೆ ಎನ್ನುವುದಕ್ಕೆ ಇಲ್ಲಿದೆ ಸಾಕ್ಷಿ.

ರಮೇಶ್ ಅರವಿಂದ್: ಕೆಟ್ಟ ನಿರ್ವಹಣೆಯ ಕಾರಣ ವೇದಿಕೆ ಗೊಂದಲದ ಗೂಡಾಗಿತ್ತು.ಸಾಲದ್ದಕ್ಕೆ ಕಮಲ ಹಾಸನ್ ಅವರ ಸಂಪೂರ್ಣ ಜವಾಬ್ದಾರಿ ನನ್ನ ಹೆಗಲ ಮೇಲಿತ್ತು. ಸೂಕ್ತ ಭದ್ರತೆ ಕಲ್ಪಿಸುವುದು ನಮ್ಮ ಜವಾಬ್ದಾರಿಯಾಗಿತ್ತು. ಕನ್ನಡ ನಟರ ಪರಿಸ್ಥಿತಿ ಇರುವೆ ಮುತ್ತಿದ್ದ ಸಕ್ಕರೆಯಂತಾಗಿತ್ತು.

ಜಯಂತ ಕಾಯ್ಕಿಣಿ: ಅಮೃತ ಮಹೋತ್ಸವ ಸ್ಥಳಕ್ಕೆ ಆಗಮಿಸಿದಾಗ ಅಲ್ಲಿನ ಜನ ಸಂದಣಿ ನೋಡಿ ಗಾಬರಿಯಾಯಿತು. ವೇದಿಕೆ ತಲುಪಲು ಹರ ಸಾಹಸ ಮಾಡಬೇಕಾಯಿತು. ಹೇಗೋ ಕಷ್ಟಪಟ್ಟು ವೇದಿಕೆ ತಲುಪಿದೆನಾದರೂ ಮತ್ತೆ ಹಿಂತಿರುಗಲು ಪರದಾಡುವಂತಾಯಿತು. ಪೊಲೀಸರನ್ನು ದೂಷಿಸುವುದರಲ್ಲಿ ಅರ್ಥವಿಲ್ಲ. ಜನ ಸಂದಣಿಯನ್ನು ನಿಯಂತ್ರಿಸುವುದು ನಿಜಕ್ಕೂ ಸವಾಲಾಗಿತ್ತು.

ಅವಿನಾಶ್: ಜನಜಂಗುಳಿಯಿಂದ ತುಂಬಿದ್ದಅದ್ದೂರಿ ಕಾರ್ಯಕ್ರಮ. ಭದ್ರತಾ ವ್ಯವಸ್ಥೆಗಳು ಸಂಪೂರ್ಣ ವಿಫಲವಾಗಿದ್ದವು. ಸಂಯಮ ವಹಿಸುವಂತೆ ಜನರನ್ನು ನಾನೂ ವಿನಂತಿಸಿಕೊಂಡೆ. ನಿಯಂತ್ರಿಸಲಾಗದಷ್ಟು ಜನಸಂದಣಿ. ಮೂಳೆ ಮುರಿದುಕೊಳ್ಳದಂತೆ ಮನೆಗೆ ಹಿಂತಿರುಗಿದ್ದೇ ಒಂದು ಪವಾಡ!

ಜೆನ್ನಿಫರ್ ಕೊತ್ವಾಲ್: ವೇದಿಕೆ ಸನಿಹದಲ್ಲೇ ಠಿಕಾಣಿ ಹೂಡಿದ್ದ ನಾವು ಕಾರ್ಯಕ್ರಮವನ್ನು ಎಂಜಾಯ್ ಮಾಡಿದೆವು. ಅದ್ದೂರಿ ಕಾರ್ಯಕ್ರಮದಲ್ಲಿ ಗಲಾಟೆ, ಪೊಲೀಸ್ ಲಾಠಿ ಪ್ರಹಾರ ನಡೆಯಬಾರದಿತ್ತು. ಅದೊಂದು ರೀತಿ ಕಾರ್ಯಕ್ರಮಕ್ಕೆ ಕಪ್ಪು ಚುಕ್ಕೆಯಾಯಿತು.

ಸಂಜನಾ: ನನಗಾದ ಭಯದಲ್ಲಿ ಸಮಯಸ್ಫೂರ್ತಿಯನ್ನೇ ಕಳೆದುಕೊಂಡಿದ್ದೆ.ಅಲ್ಲಿನ ಜನ ಜಂಗುಳಿ ನೋಡಿ ಅಂಜಿಕೆಯಾಗಿತ್ತು. ಕಾರ್ಯಕ್ರಮವನ್ನು ಬೆರಗುಗಣ್ಣುಗಳಿಂದ ನೋಡಿದೆನಾದರೂ ಕೊನೆಗೆ ಮಂಕಾಗಿದ್ದೆ.

ಶರ್ಮಿಳಾ ಮಾಂಡ್ರೆ:
ಪಾಸುಗಳಿಲ್ಲದೇನೆ ವಿಐಪಿ ಸೀಟುಗಳೆಲ್ಲಾ ಮಧ್ಯಾಹ್ನ ಒಂದು ಗಂಟೆಯ ಹೊತ್ತಿಗೆಲ್ಲಾ ತುಂಬಿಹೋಗಿದ್ದವು. ಇದೊಂದು ಸಾರ್ವಜನಿಕ ಸಮಾರಂಭ. ಜನಸಂದಣಿ ಸಹಜ. ಅಲ್ಲಿ ಆದದ್ದೇನೆಂದರೆ ನಮ್ಮ ಊಹೆಗೆ ನಿಲುಕಲಿಲ್ಲ.

ರಶ್ಮಿ: ಭದ್ರತೆ ವಿಫಲವಾಗಿತ್ತು. ಡ್ರೆಸ್ಸಿಂಗ್ ಕೊಠಡಿ ತೆರೆದ ಬಯಲಾಗಿತ್ತು. ವೇದಿಕೆ ಮೇಲೆ ಪ್ರದರ್ಶನ ನೀಡಬೇಕಿದ್ದ ನಾವುಗಳು ಆಘಾತ ಅನುಭವಿಸುವಂತಾಯಿತು. ಅಲಂಕಾರ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಅಭಿಮಾನಿಗಳು ಡ್ರೆಸ್ಸಿಂಗ್ ಕೊಠಡಿಗೆಲ್ಲಾ ನುಗ್ಗಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಕನ್ನಡ ಚಿತ್ರದಲ್ಲಿ ನಟಿಸುವ ಆಸೆ: ರಜನಿಕಾಂತ್
ಕನ್ನಡ,ತಮಿಳು ಸಂಬಂಧಕ್ಕೆ ಕಲ್ಲು ಹಾಕಬೇಡಿ:ಕಮಲ್
ಕನ್ನಡ ಚಿತ್ರರಂಗ ಇಂದು ಮತ್ತು ನಾಳೆ ಒಂದು ಚರ್ಚೆ
ರಂಗುರಂಗಿನ ಅಮೃತ ಮಹೋತ್ಸವ ಚಿತ್ರಪಟ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada