For Quick Alerts
  ALLOW NOTIFICATIONS  
  For Daily Alerts

  ಫಣಿಗೆ ಹೆಂಗಸರೆಲ್ಲ ಪೊರಕೇಲಿ ಹೊಡೀಬೇಕು- ವಿಷ್ಣುವರ್ಧನ್‌

  By Staff
  |

  ‘ಫಣಿ ರಾಮಚಂದ್ರನನ್ನು ಕನ್ನಡಿಗರೆಲ್ಲಾ ಒಟ್ಟಾಗಿ ಚಚ್ಚಿ ; ನನಗೇನಾದರೂ ಅವನು ಎದುರಾದರೆ ಹೊಡೆಯುತ್ತೇನೆ’
  - ಅಪ್ಪಟ ಸಾಹಸಸಿಂಹನ ಸ್ಟೈಲ್‌ನಲ್ಲಿ ವಿಷ್ಣು ಘರ್ಜಿಸಿದರು. ಸಿಂಹಕ್ಕೆ ಸಿಟ್ಟು ನೆತ್ತಿಗೇರಿತ್ತು . ಏಕ ವಚನ ಪ್ರಯೋಗ ಧಾರಾಳವಾಗಿತ್ತು . ಅಬ್ಬಯ್ಯನಾಯ್ಡು ಸ್ಟುಡಿಯೋದಲ್ಲಿ ನಡೆಯುತ್ತಿರುವ ‘ರಾಜ ನರಸಿಂಹ’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ - ವಿಷ್ಣುವರ್ಧನ್‌ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಫಣಿ ರಾಮಚಂದ್ರ ಎನ್ನುವ ಮಾಜಿ ಸಿನಿಮಾ ನಿರ್ದೇಶಕ ಹಾಗೂ ಹಾಲಿ ಕಿರುತೆರೆ ನಿರ್ದೇಶಕನ ವಿರುದ್ಧ ವಿಷ್ಣು ಕೆಂಡಾಮಂಡಲವಾಗಿದ್ದರು. ಫಣಿ ಮಾಡಿದ ಮಹಾಪರಾಧವೆಂದರೆ- ‘ದರಿದ್ರ ಲಕ್ಷ್ಮಿಯರು’ ಧಾರಾವಾಹಿ ನಿರ್ದೇಶಿಸುತ್ತಿರುವುದು. ಧಾರಾವಾಹಿಯನ್ನು ಪ್ರಸಾರ ಮಾಡುತ್ತಿರುವ ಉದಯ ಟೀವಿಗೂ ಬೈಗುಳದ ಪಾಲು ಸಂದಾಯವಾಯಿತು.

  ಫಣಿ ರಾಮಚಂದ್ರ ನಮ್ಮ ಸಂಸ್ಕೃತಿಯ ಅವಹೇಳನ ಮಾಡುತ್ತಿದ್ದಾರೆ. ಇದೊಂದು ದೊಡ್ಡ ವಿಕೃತಿ ಎಂದು ವಿಷ್ಣು ವಿಷಾದ ವ್ಯಕ್ತಪಡಿಸಿದರು.ಲಕ್ಷ್ಮಿ , ಗೃಹಲಕ್ಷ್ಮಿ , ಮಹಾಲಕ್ಷ್ಮಿ ಎಂದು ಹೆಣ್ಣನ್ನು ಗೌರವಿಸುತ್ತೇವೆ. ಹೀಗಿರುವಾಗ ಫಣಿ ರಾಮಚಂದ್ರ ನಮ್ಮ ಸಂಸ್ಕೃತಿಯನ್ನು ತಿರುಚಿದ್ದಾರೆ. ‘ದರಿದ್ರ ಲಕ್ಷ್ಮಿಯರು’ ಎಂಬ ಶೀರ್ಷಿಕೆ, ಅದರಲ್ಲಿ ಹೆಣ್ಣನ್ನು ಬಿಂಬಿಸಿರುವ ರೀತಿ ಅಕ್ಷಮ್ಯ ಎಂದು ವಿಷ್ಣು ಕಿಡಿ ಕಾರಿದರು.

  ವಿಷ್ಣು ಮಾತಿನ ಮುಖ್ಯಾಂಶಗಳನ್ನು ಪಟ್ಟಿ ಮಾಡುವುದಾದರೆ-

  • ಉದಯ ಚಾನೆಲ್‌ನವರೊಂದಿಗೆ ನಾನು ಮಾತಾಡಿದೆ. ಧಾರಾವಾಹಿಯ ಹೆಸರು ಬದಲಿಸಿ ಎಂದು ಮನವಿ ಮಾಡಿದೆ. ಆದರೆ ಅವರು ಒಪ್ಪಲಿಲ್ಲ . ನಿರ್ದೇಶಕರ ಪರಿಕಲ್ಪನೆ ಬೇರೆಯೇ ಇದೆ ಎಂದು ವಿಷಯ ತೇಲಿಸಿದರು.
  • ಇದು ಸಂಸ್ಕಾರ ಉಳ್ಳವರು ಮಾಡುವ ಕೆಲಸ ಅಲ್ಲ ಎಂದು ಫಣಿ ರಾಮಚಂದ್ರನಿಗೂ ಹೇಳಿದ್ದೇನೆ.
  • ದರಿದ್ರ ಲಕ್ಷ್ಮಿಯರು ಎನ್ನುವ ಶೀರ್ಷಿಕೆ ಬದಲಿಸದಿದ್ದಲ್ಲಿ ಆತನನ್ನು ಕಂಡಲ್ಲಿ ಹೊಡೆಯಿರಿ ಎಂದು ಜನರಿಗೆ ಹೇಳುತ್ತೇನೆ. ಹಿಂದೂ ಧರ್ಮವಲ್ಲದೆ ಬೇರಾವುದೇ ಧರ್ಮದಲ್ಲಿ ದೇವರನ್ನು ಹೀಗೆಲ್ಲಾ ಬಳಸಿಕೊಂಡಿದ್ದರೆ ದೊಡ್ಡ ಗಲಭೆಯೇ ಆಗುತ್ತಿತ್ತು .
  • ಬೇಕಾದರೆ ಧಾರಾವಾಹಿಯಲ್ಲಿ ‘ಫಣಿ ರಾಮಚಂದ್ರನ ದರಿದ್ರಲಕ್ಷ್ಮಿ’ ಎಂದು ಹಾಕಿಕೊಳ್ಳಲಿ.
  • ಹೆಣ್ಣನ್ನು ದರಿದ್ರಲಕ್ಷ್ಮಿ ಎಂದು ಜರಿಯುವುದಕ್ಕೆ ಅವನ್ಯಾರು. ಅವನೇನು ವ್ಯಾಸನೋ, ವಾಲ್ಮೀಕಿಯೋ?
  • ಜನರು ಇಂಥದ್ದೆಲ್ಲ ಪ್ರತಿಭಟಿಸಬೇಕು. ಮಹಿಳೆಯರು ಫಣಿ ಮನೆ ಮುಂದೆ ಹೋಗಿ ಧರಣಿ ಕೂರಬೇಕು. ಆ ಪ್ರತಿಭಟನೆಗೆ ನಾನು ಬೆಂಬಲ ನೀಡುತ್ತೇನೆ. ಆತನಿಗೆ ಪೊರಕೆಯಿಂದ ಹೊಡೆಯಬೇಕು.
  • ಏನು ಮಾಡಿದರೂ ನಡೆಯುತ್ತದೆ ಎಂದು ಫಣಿ ಭಾವಿಸಿದಂತಿದೆ. ಜನ ಅವನಿಗೆ ಬುದ್ಧಿ ಕಲಿಸಬೇಕು.
  • ಫಣಿ ರಾಮಚಂದ್ರರನ್ನು ಪ್ರೆಸ್‌ಕ್ಲಬ್‌ಗೆ ಕರೆಸಿ ಪತ್ರಕರ್ತರು ಪ್ರಶ್ನಿಸಬೇಕು. ಸಭೆ ನಡೆಸುವುದಾದರೆ ಆ ಸಭೆಗೆ ನಾನೂ ಬರಲು ಸಿದ್ಧ.
  ಸಿಂಹ ಘರ್ಜನೆ ಮುಂದುವರಿಯುತ್ತಿತ್ತು .

  Post your Views

  ಪೂರಕ ಓದಿಗೆ
  ಫಣಿ ರಾಮಚಂದ್ರ ಮೇಲೆ ಹೆಂಗಸರ ಫಣಿ !?

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X