twitter
    For Quick Alerts
    ALLOW NOTIFICATIONS  
    For Daily Alerts

    ಬಸಂತ್ ರಾಜೀನಾಮೆಗೆ ಕೆಎಫ್ ಸಿಸಿ ಸದಸ್ಯರ ಪಟ್ಟು

    By Prasad
    |

    Basant Kumar Patil, KFCC president
    ಬೆಂಗಳೂರು, ನ. 4 : ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್ ರಾಜೀನಾಮೆ ನೀಡಬೇಕೆಂದು ಮಂಡಳಿಯ ಪದಾಧಿಕಾರಿಗಳೇ ಒತ್ತಾಯಿಸುವ ಮೂಲಕ ಮಂಡಳಿಯ ತಕರಾರನ್ನು ಬೀದಿಗೆ ತಂದಿದ್ದಾರೆ. ಅಲ್ಲದೆ ನಿನ್ನೆ (ನ. 3) ತಡರಾತ್ರಿ ನಡೆದ ಅಚ್ಚರಿಯ ಬೆಳವಣಿಗೆಯಲ್ಲಿ ರಾಕ್ ಲೈನ್ ವೆಂಕಟೇಶ್, ಕೆ. ಮಂಜು, ಸಾ.ರಾ.ಗೋವಿಂದು ಸೇರಿ 20 ಮಂದಿ ನಿರ್ಮಾಪಕರು ಮಂಡಳಿಯ ಪದಾಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    ಚಿತ್ರೋದ್ಯಮ ಅನಿರ್ದಿಷ್ಟಾವಧಿಯವರೆಗೆ ಬಂದ್ ಆದರೆ ಕಾರ್ಮಿಕರ ಪಾಡೇನು? ಸಾಲ ಮಾಡಿ ಚಿತ್ರ ನಿರ್ಮಾಣ ಮಾಡುವ ನಿರ್ಮಾಪಕರ ಪಾಡೇನು? ಏಕಾಎಕಿ ಅಧ್ಯಕ್ಷರು ಬಂದ್ ನಿರ್ಧಾರ ಪ್ರಕಟಿಸುವುದು ಸರಿಯಲ್ಲ. ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್ ಗೆ ನಿರ್ಮಾಪಕರ ಕಷ್ಟ ಸುಖದ ಬಗ್ಗೆ ಅರಿವಿಲ್ಲ. ಪಾಟೀಲರು ಅತ್ತ ಪೂರ್ಣ ಪ್ರಮಾಣದ ನಿರ್ಮಾಪಕರೂ ಅಲ್ಲ, ವಿತರಕರೂ ಅಲ್ಲ, ಹಂಚಿಕೆದಾರರೂ ಅಲ್ಲ. ಅವರಿಗೆ ನಿರ್ಮಾಪಕರ ತೊಂದರೆ ಅರ್ಥವಾಗುವುದಿಲ್ಲ ಅವರು ಈ ಕೂಡಲೇ ರಾಜೀನಾಮೆ ನೀಡಲಿ ಎಂದು ರಾಕ್ ಲೈನ್ ವೆಂಕಟೇಶ್ ಆಗ್ರಹಿಸಿದ್ದಾರೆ. ವಾಣಿಜ್ಯ ಮಂಡಳಿಯ ಪದಾಧಿಕಾರಿಗಳ ಸ್ಥಾನಕ್ಕೆ ಪ್ರದರ್ಶಕರು, ವಿತರಕರು ಈಗಾಗಲೇ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.

    ಪಾಟೀಲ್ ರಾಜೀನಾಮೆಗೆ ಒತ್ತಾಯಿಸಿ ದ್ವಾರಕೀಶ್, ಸಂದೇಶ್ ನಾಗರಾಜ್ ಕೂಡಾ ರಾಕ್ ಲೈನ್ ನಿಲುವನ್ನು ಬೆಂಬಲಿಸಿದ್ದಾರೆ. ಬೇರೆಯವರು ಏನಾದರೂ ಮಾಡಿಕೊಳ್ಳಲಿ ಕಲಾವಿದರ ಸಂಘ ಬಂದ್ ಗೆ ಬೆಂಬಲ ನೀಡುವುದಿಲ್ಲ ಎಂದು ಅಂಬರೀಷ್ ಕೂಡ ಹೇಳಿಕೆ ನೀಡಿದ್ದಾರೆ. ಎಸ್. ನಾರಾಯಣ್ ಕೂಡ ಡಬ್ಬಿಂಗ್ ವಿರೋಧಿಸಿ ಡಿಸೆಂಬರ್ 1ರಿಂದ ನಡೆಸಬೇಕೆಂದಿರುವ ಬಂದ್ ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

    ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

    Thursday, November 4, 2010, 10:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X