»   » ನಿತ್ಯಾನಂದ ಕಾಮಕೇಳಿಯಲ್ಲಿದ್ದ ನಟಿ ಯಾರು?

ನಿತ್ಯಾನಂದ ಕಾಮಕೇಳಿಯಲ್ಲಿದ್ದ ನಟಿ ಯಾರು?

Posted By:
Subscribe to Filmibeat Kannada

ಸ್ವಾಮಿ ನಿತ್ಯಾನಂದ ರಾಸಲೀಲೆ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ನಟಿ ಯಾರು? ಎಂಬ ಬಗ್ಗೆ ಕೆಲವರು ರಂಜಿತಾ ಅಂತಲೂ ಮತ್ತೆ ಕೆಲವರು ರಾಗಸುಧಾ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಆಕೆ ರಾಗಸುಧಾ ಅಲ್ಲ ನಿತ್ಯಾನಂದನೊಂದಿಗೆ ಲೈಂಗಿಕ ಹಗರಣದಲ್ಲಿ ತೊಡಗಿಕೊಂಡಿದ್ದದ್ದು ತಮಿಳು ನಟಿ ರಂಜಿತಾ ಎಂದು ಇದೀಗ ಗುರುತಿಸಲಾಗಿದೆ.

ಇಪ್ಪತ್ತೆರಡು ನಿಮಿಷಗಳ ಕಾಲವಧಿಯ ವಿಡಿಯೋದಲ್ಲಿ ನಟಿಯ ಮುಖವನ್ನು ಮಾಸ್ಕ್ ಮಾಡಿ ತೋರಿಸಲಾಗಿತ್ತು. ವಿಡಿಯೋ ಪ್ರಸಾರ ಮಾಡಿದ ಸನ್ ನ್ಯ್ಯೂಸ್ ಸಹ ನಟಿಯ ಹೆಸರನ್ನು ಬಹಿರಂಗಪಡಿಸದೆ, ಇಂಗ್ಲಿಷ್ ವರ್ಣಮಾಲೆಯ 'R' ಅಕ್ಷರದಿಂದ ನಟಿಯ ಹೆಸರು ಆರಂಭವಾಗುತ್ತದೆ ಎಂದು ಸುಳಿವು ನೀಡಿತ್ತು.

ನಿತ್ಯಾನಂದ ಸ್ವಾಮಿಯ ಜೊತೆ ನಟಿ ರಂಜಿತಾ ಸಹ ನಾಪತ್ತೆಯಾಗಿದ್ದು, ಅನುಮಾನಗಳನ್ನು ಮತ್ತಷ್ಟು ಬಲಪಡಿಸಿವೆ. ಏತನ್ಮಧ್ಯೆ ನಿತ್ಯಾನಂದ ಸ್ವಾಮಿ ಆಶ್ರಮ ಇದೊಂದು ಪಿತೂರಿ, ಗ್ರಾಫಿಕ್ಸ್ ಬಳಸಿ ವಿಡಿಯೋವನ್ನು ಸೃಷ್ಟಿ ಸಲಾಗಿದೆ ಎಂದು ಆರೋಪಿಸಿದೆ. ಸ್ವಾಮೀಜಿಗಳ ಬಗ್ಗೆ ಹಬ್ಬಿಸಿರುವ ಸುಳ್ಳು ವದಂತಿ ಇದಾಗಿದೆ ಎಂದು ಆಶ್ರಮ ಲೈಂಗಿಕ ಹಗರಣದ ವಿಡಿಯೋವನ್ನು ತಳ್ಳಿಹಾಕಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada