twitter
    For Quick Alerts
    ALLOW NOTIFICATIONS  
    For Daily Alerts

    ವಿಷ್ಣುವರ್ಧನ ವೀಕ್ಷಿಸಿದ ವಿವೇಕ್ ಒಬೆರಾಯ್

    |

    Sudeep And Vivek Oberoi
    ಕರ್ನಾಟಕದ ಅಳಿಯ, ಬಾಲಿವುಡ್ ನಟ ವಿವೇಕ್ ಒಬೆರಾಯ್ ಕರ್ನಾಟಕಕ್ಕೆ ಬಂದರೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಯಾಕೆಂದರೆ ಇದು ಅವರ ಮಾವನಮನೆ. ಆದರೆ ಇಲ್ಲಿ ಬಂದು ಕನ್ನಡ ಚಿತ್ರವನ್ನು ನೋಡಿದ್ದಾರೆ ಎನ್ನುವ ಸುದ್ದಿಯೊಂದು ಹಬ್ಬಿದೆ.

    ಡಿಸೆಂಬರ್ 3ರಂದು ಸಂಜೆ ವಿವೇಕ್ ಒಬೆರಾಯ್ ಕರ್ನಾಟಕಕ್ಕೆ ಬಂದಿದ್ದರು. ಕಿಚ್ಚ ಸುದೀಪ್ ಅಭಿನಯದ 'ವಿಷ್ಣುವರ್ಧನ' ಚಿತ್ರ ವೀಕ್ಷಿಸಿದ್ದಾರೆ ಎನ್ನುತ್ತವೆ ಗಾಂಧಿನಗರದ ಮೂಲಗಳು. ಯಾವ ಥಿಯೇಟರ್, ಯಾರ ಜೊತೆ ಮತ್ತು ಸುದೀಪ್ ಇವರ ಜೊತೆಗಿದ್ರಾ ಎನ್ನುವ ಪ್ರಶ್ತ್ನೆಗೆ ಸದ್ಯ ಉತ್ತರವಿಲ್ಲ.

    ರಾಮಗೋಪಾಲ್ ವರ್ಮಾ ನಿರ್ದೇಶನದ ರಕ್ತಚರಿತೆ ಚಿತ್ರದಲ್ಲಿ ಸುದೀಪ್ ಮತ್ತು ವಿವೇಕ್ ಇಬ್ಬರೂ ಒಟ್ಟಾಗಿ ನಟಿಸಿದ್ದರು. ಹೀಗೆ ಸ್ನೇಹಿತರಾಗಿರುವ ಇವರು ಸದ್ಯ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿರುವ ವಿಷ್ಣುವರ್ಧನ ಚಿತ್ರವನ್ನು ನೋಡಿದ್ದಾರೆ. ಚಿತ್ರದಲ್ಲಿ ಬಾಲಿವುಡ್ ನಟ ಸೋನುಸೂದ್ ಸಹ ಖಳನಟನಾಗಿ ನಟಿಸಿರುವುದರಿಂದ ವಿವೇಕ್ ಅಪಾರ ನಿರೀಕ್ಷೆ ಇಟ್ಟು ಚಿತ್ರ ವೀಕ್ಷಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    English summary
    Gandhinagara sources saays, Bollywood actor Vivek Oberoi watched Kannada movie Vishnuvardhana starring Sudeep on December 3rd.
    Wednesday, January 4, 2012, 14:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X