ರಿತೇಶ್ ದೇಶ್‌ಮುಖ್ ಜೊತೆ ಜೆನಿಲಿಯಾ ಮದುವೆ
"ಲವ್ಲಿ ಲವ್ಲಿ ಲವ್ಲಿ ಸಖತ್ತು ಫೇರ್ ಅಂಡ್ ಲವ್ಲಿ..." ಎಂದು ಶಿವಣ್ಣನ ಜೊತೆ ಹೆಜ್ಜೆ ಹಾಕಿದ ಜೆನಿಲಿಯಾ ಡಿಸೋಜಾಗೆ ಕಂಕಣಬಲ ಕೂಡಿಬಂದಿದೆ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶ್ ಮುಖ್ ಅವರ ಪುತ್ರ ರಿತೇಶ್ ದೇಶ್‌ಮುಖ್ ಜೊತೆ ಹಸೆಮಣೆ ಏರಲು ಸಿದ್ಧತೆ ನಡೆಸಿದ್ದಾರೆ.
ಇಸವಿ 2003ರಲ್ಲಿ ತೆರೆಕಂಡ ತುಜೆ ಮೇರಿ ಕಸಮ್ ಚಿತ್ರದಲ್ಲಿ ಇಬರು ಒಟ್ಟಿಗೆ ಅಭಿನಯಿಸಿದ್ದರು. ಅಲ್ಲಿಂದಲೂ ಇವರ ಜೂಟಾಟ ಗುಟ್ಟಾಗಿ ಏನು ಉಳಿದಿಲ್ಲ.2012ರಲ್ಲಿ ಪ್ರಳಯ ಏನೂ ಸಂಭವಿಸಲಿಲ್ಲ ಎಂದರೆ ಜೆನಿಯಾ ಹಾಗೂ ರಿತೇಶ್ ಹಾರ ಬದಲಾಯಿಸಿಕೊಳ್ಳುವುದು ಗ್ಯಾರಂಟಿ ಎನ್ನಲಾಗಿದೆ.
ಈಗಾಗಲೆ ರಿತೇಶ್ ದೇಶ್‌ಮುಖ ತಮ್ಮ ಮದುವೆ ಬಗ್ಗೆ ಊರೆಲ್ಲಾ ಹೇಳಿಕೊಂಡಿದ್ದಾನೆ. ಗೆಳೆಯರು ಹೇ ತೋ ಹೋನಾಹಿ ತಾ ಎಂದು ಹಾಡುತ್ತಿದ್ದಾರೆ. ಜೆನಿಯಾರನ್ನು ರಿತೇಶ್ ಈಗಾಗಲೆ ಮನೆಗೂ ಕರೆದು ತಂದೆತಾಯಿಗೆ ಪರಿಚಯಿಸಿದ್ದಾನೆ. ಆಕಡೆಯಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ಇನ್ನು ತಾಳಿಕಟ್ಟುವುದೊಂದು ಬಾಕಿ ಇದೆ ಎನ್ನುತ್ತಿದ್ದಾರೆ ರಿತೇಶ್ ಗೆಳೆಯರು.
ಇನ್ನೊಂದು ಮುಖ್ಯ ಸಂಗತಿ ಎಂದರೆ ಈಗಾಗಲೆ ಈ ಲವ್ ಬರ್ಡ್ಸ್ ಮುಂಬೈನಲ್ಲಿ ಮನೆಯನ್ನೂ ನೋಡಿದ್ದಾರೆ ಎನ್ನಲಾಗಿದೆ. ಮದುವೆಯಾದ ಕೂಡಲೆ ಗೂಡು ಸೇರಲು ಹಾತೊರೆಯುತ್ತ್ತಿದ್ದಾರೆ ಎಂಬ ಮಾಹಿತಿಯೂ ಬಾಲಿವುಡ್‌ನಲ್ಲಿ ಸ್ಫೋಟಗೊಂಡಿದೆ. (ಏಜೆನ್ಸೀಸ್)


Click it and Unblock the Notifications











