»   » ವಿಷ್ಣು ಹೇಳಿದ್ದು ಸರಿ, ಇಲ್ಲಾರೀ ಅದು ಚೂರು ಅತಿ !

ವಿಷ್ಣು ಹೇಳಿದ್ದು ಸರಿ, ಇಲ್ಲಾರೀ ಅದು ಚೂರು ಅತಿ !

Posted By:
Subscribe to Filmibeat Kannada

ಉದಯ ಟೀವಿಯಲ್ಲಿ ಪ್ರಸಾರವಾಗುತ್ತಿರುವ ‘ದರಿದ್ರ ಲಕ್ಷ್ಮಿಯರು’ ಧಾರಾವಾಹಿ ನಿರ್ದೇಶಕ ಫಣಿ ರಾಮಚಂದ್ರರಿಗೆ ಹೆಣ್ಣು ಮಕ್ಕಳು ಪೊರಕೆ ಪೂಜೆ ಮಾಡಬೇಕು ಎಂದು ಹೇಳಿರುವ ನಟ ವಿಷ್ಣು ವರ್ಧನ್‌ ಹೇಳಿಕೆಗೆ ಬೆಂಬಲ ಹಾಗೂ ವಿರೋಧ ಎರಡೂ ವ್ಯಕ್ತವಾಗಿದೆ.

ವಿಷ್ಣು ಹೇಳಿರುವುದರಲ್ಲಿ ಕಿಂಚಿತ್ತೂ ಉತ್ಪ್ರೇಕ್ಷೆಯಿಲ್ಲ . ಇದೊಂದು ಕೀಳು ಅಭಿರುಚಿಯ ಧಾರಾವಾಹಿಯಾಗಿದ್ದು , ಈ ಧಾರಾವಾಹಿಯ ನಿರ್ಮಾಣಕ್ಕೆ ಕಾರಣಕರ್ತರಾದವರೆಲ್ಲರೂ ಶಿಕ್ಷಾರ್ಹರು ಎಂದು ಕರ್ನಾಟಕ ಚಲನಚಿತ್ರ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಕೆ.ಕೆ.ಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಷ್ಣುವರ್ಧನ್‌ ಅವರ ಹೇಳಿಕೆಯನ್ನು ಸ್ವಾಗತಿಸಿರುವ ಬಿಜೆಪಿ ಬೆಂಗಳೂರು ನಗರ ಯುವ ಮೋರ್ಚಾ ಘಟಕ, ಧಾರಾವಾಹಿ ಶೀರ್ಷಿಕೆಯನ್ನು ಬದಲಿಸಬೇಕು ಎಂದು ಆಗ್ರಹಿಸಿದೆ.

ಚಲನಚಿತ್ರ ವಾಣಿಜ್ಯ ಮಂಡಳಿ ತುರ್ತು ಸಭೆ ಕರೆದು ಈ ವಿವಾದವನ್ನು ಪರಿಹರಿಸಬೇಕು. ಯಾವುದೇ ಧರ್ಮದ ಭಾವನೆಗಳಿಗೆ ನೋವುಂಟಾಗುವಂಥ ಹೆಸರುಗಳನ್ನು ಸಿನಿಮಾ ಅಥವಾ ಧಾರಾವಾಹಿಗೆ ಇಡುವುದನ್ನು ನಿಷೇಧಿಸಬೇಕು ಎಂದು ಯುವಮೋರ್ಚಾ ಅಧ್ಯಕ್ಷ ಎಸ್‌.ಅಮರೇಶ್‌ ಸುದ್ದಿ ಹೇಳಿಕೆ ನೀಡಿದ್ದಾರೆ.

ಇದು ಅತಿಯಾಯಿತು ವಿಷ್ಣು
ಫಣಿ ರಾಮಚಂದ್ರ ಅವರಿಗೆ ಪೊರಕೆಯಲ್ಲಿ ಹೊಡೆಯಿರಿ ಎನ್ನುವ ಮಾತು ಮೂಲಭೂತವಾದಿಗಳು ಹೊರಡಿಸಿದ ಆದೇಶದಂತೆ ಕಾಣುತ್ತಿದೆ. ಇದು ಸುಸಂಸ್ಕೃತವಲ್ಲ . ವಿಷ್ಣುವರ್ಧನ್‌ ಮಾತು ಪ್ರಚೋದನಕಾರಿಯಾಗಿದೆ ಎಂದು ಕರ್ನಾಟಕ ಟೆಲಿವಿಷನ್‌ ಅಸೋಸಿಯೇಷನ್‌ ಅಧ್ಯಕ್ಷ ಪಿ.ಶೇಷಾದ್ರಿ ಹಾಗೂ ಕಾರ್ಯದರ್ಶಿ ಬಿ.ಸುರೇಶ್‌ ಖಂಡಿಸಿದ್ದಾರೆ.

ಧಾರಾವಾಹಿ ವಿಮರ್ಶೆ ಮಾಡುವುದು ತಪ್ಪಲ್ಲ . ಆದರೆ, ಧಾರಾವಾಹಿಯನ್ನು ನಿಲ್ಲಿಸಲು ಆಡುತ್ತಿರುವ ಮಾತುಗಳು ಪ್ರಜಾ ಸತ್ತಾತ್ಮಕವಾಗಿಲ್ಲ . ವಿಷ್ಣು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಅಸೋಸಿಯೇಷನ್‌ ಹೇಳಿಕೆ ಮೂಲಕ ತಿಳಿಸಿದೆ.

ವಿಷ್ಣು ಅವರ ಹೇಳಿಕೆ ಅನುಸಾರ ಅವರ ಅಭಿಮಾನಿಗಳು ಫಣಿ ರಾಮಚಂದ್ರರ ಮೇಲೆ ಹಲ್ಲೆ ನಡೆಸಿದರೆ ಅದು ಅಪರಾಧವಾಗುತ್ತದೆ. ನಾಡಿನ ಜನತೆ ವಿಷ್ಣು ಅವರ ಹೇಳಿಕೆಗೆ ಮನ ಕೊಡದೆ ಸಂಯಮ ಹಾಗೂ ಸಜ್ಜನಿಕೆ ಉಳಿಸಿಕೊಳ್ಳಬೇಕೆಂದು ಸಂಸ್ಥೆ ಮನವಿ ಮಾಡಿದೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಫಣಿಗೆ ಹೆಂಗಸರೆಲ್ಲ ಪೊರಕೇಲಿ ಹೊಡೀಬೇಕು- ವಿಷ್ಣುವರ್ಧನ್‌
ಫಣಿ ರಾಮಚಂದ್ರ ಮೇಲೆ ಹೆಂಗಸರ ಫಣಿ !

Post your Views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada