»   » ಸಾಲ ತೀರಿದರೆ ಸಾಕು’- ಧನರಾಜ್‌ ಕಣ್ಣಲ್ಲಿ ಎಚ್‌ಟುಒ !

ಸಾಲ ತೀರಿದರೆ ಸಾಕು’- ಧನರಾಜ್‌ ಕಣ್ಣಲ್ಲಿ ಎಚ್‌ಟುಒ !

Posted By:
Subscribe to Filmibeat Kannada

ಎಚ್‌ಟುಒ ಚಿತ್ರದಿಂದ ನಾನು ಲಾಭ ನಿರೀಕ್ಷಿಸುತ್ತಿಲ್ಲ . ಚಿತ್ರಕ್ಕಾಗಿ ಮಾಡಿದ ಸಾಲ ತೀರಿದರೆ ಸಾಕು, ಇನ್ನೆಂದೂ ಚಿತ್ರ ನಿರ್ಮಾಣವನ್ನೇ ಮಾಡುವುದಿಲ್ಲ . ಅಷ್ಟೊಂದು ನೋವುಗಳನ್ನು ನಾನು ಅನುಭವಿಸಿದ್ದೇನೆ.
- ಇಷ್ಟು ಹೇಳುವ ಹೊತ್ತಿಗೆ ಧನರಾಜ್‌ ಅವರ ಕಣ್ಣಲ್ಲಿ ಎಚ್‌ಟುಒ. ಅವರು ಬಿಕ್ಕುತ್ತಲೇ ಮಾತು ಮುಂದುವರಿಸಿದರು. ಕನ್ನಡ ಚಳವಳಿಕಾರರು ಎಚ್‌ಟುಒ ಚಿತ್ರದ ವಿರುದ್ಧ ವ್ಯಕ್ತಪಡಿಸುತ್ತಿರುವ ಪ್ರತಿಭಟನೆಯಿಂದ ಧನರಾಜ್‌ ಹತಾಶರಾಗಿದ್ದರು.

ತುಮಕೂರು, ಕೋಲಾರ ಮುಂತಾದ ಕಡೆ ನಡೆದ ಪ್ರತಿಭಟನೆಯಿಂದ ನಾನು ನೊಂದಿದ್ದೇನೆ. ತಮಿಳು ಸಂಭಾಷಣೆಯ ಕುರಿತು ಕನ್ನಡ ಪ್ರೇಮಿಗಳಿಗೆ ನೋವಾಗಿದೆ. ಅವರ ಭಾವನೆಗಳಿಗೆ ಸ್ಪಂದಿಸಿ 15 ದಿನಗಳಲ್ಲಿ ಚಿತ್ರದಲ್ಲಿ ತಮಿಳು ಸಂಭಾಷಣೆಗೆ ಕತ್ತರಿ ಹಾಕುವುದಾಗಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಧನರಾಜ್‌ ಹೇಳಿದರು.

ಪ್ರಸ್ತುತ ವಿದೇಶದಲ್ಲಿ ನಡೆಯುತ್ತಿರುವ ಹಾಲಿವುಡ್‌ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿರುವ ಉಪೇಂದ್ರ ಇನ್ನೆರಡು ದಿನಗಳಲ್ಲಿ ವಾಪಸ್ಸಾಗುತ್ತಾರೆ. ಅವರು ಬಂದ ನಂತರ ಚಿತ್ರದಿಂದ ತಮಿಳು ಸಂಭಾಷಣೆ ತೆಗೆಯಲಾಗುವುದು. ಆವರೆಗೂ ಕನ್ನಡ ಅಭಿಮಾನಿಗಳು ಸಹಕರಿಸಬೇಕು ಎಂದು ಧನರಾಜ್‌ ಕನ್ನಡ ಪ್ರೇಮಿಗಳಲ್ಲಿ ಮನವಿ ಮಾಡಿಕೊಂಡರು.

ಎಚ್‌ಟುಒ ಚಿತ್ರೀಕರಣದಲ್ಲಿ ಎರಡು ತಾಸು ಮಾತ್ರ ನಾನು ಹಾಜರಿದ್ದೆ. ನನ್ನ ಅನುಪಸ್ಥಿತಿಯಲ್ಲಿ ಚಿತ್ರೀಕರಣ ನಡೆದಿದೆ. ಈಗ ನನ್ನ ವಿರುದ್ಧ ಯಾರೂ ಬೆಟ್ಟು ಮಾಡುವಂತಿಲ್ಲ . ಈ ಮುನ್ನ ಕೂಡ ಹಲವಾರು ಚಿತ್ರಗಳಲ್ಲಿ ಇತರ ಭಾಷೆಯ ಸಂಭಾಷಣೆ ಕಾಣಿಸಿಕೊಂಡಿದೆ. ಆದರೆ ಆ ಚಿತ್ರಗಳ ಕುರಿತು ನಾನು ಮಾತನಾಡುವುದಿಲ್ಲ . ಪ್ರಸ್ತುತ ನನ್ನ ಸಮಸ್ಯೆ ಬಗೆಹರಿದರಷ್ಟೇ ಸಾಕು ಎಂದರು.

ಸಬ್‌ ಟೈಟಲ್‌ಗಳ ಮೂಲಕ ಚಿತ್ರ ಪ್ರದರ್ಶಿಸುವುದು ತಮಗೆ ಇಷ್ಟವಿಲ್ಲ . ಪೊಲೀಸರ ಸರ್ಪ ಕಾವಲಿನಲ್ಲಿ ಚಿತ್ರ ಪ್ರದರ್ಶನ ಮಾಡಬಹುದು. ಆದರೆ, ಇದರಿಂದ ಹೆಣ್ಣು ಮಕ್ಕಳು ಚಿತ್ರಕ್ಕೆ ಬರುವುದಿಲ್ಲ . ತಮಿಳು ಸಂಭಾಷಣೆಯನ್ನು ತೆಗೆಯುವವರೆಗೂ ಹೊಸ ಕೇಂದ್ರಗಳಲ್ಲಿ ಸಿನಿಮಾ ಬಿಡುಗಡೆ ಮಾಡುವುದಿಲ್ಲ . ಆದರೆ ಯಾವುದಕ್ಕೂ ಉಪೇಂದ್ರ ಬರುವವರೆಗೂ ಕಾಯಬೇಕು ಎಂದು ಧನರಾಜ್‌ ಹೇಳಿದರು.

Post Your Views?

ವಾರ್ತಾ ಸಂಚಯ
ಉಪ್ಪಿ ಅಭಿಮಾನಿಗಳ ಅಲೆಯ ಉಂಗುರ !
ಉಪೇಂದ್ರ ಹುಚ್ಚು ಸೃಷ್ಟಿ ಎಚ್‌ಟುಒ ಚಿತ್ರವ ಸರ್ಕಾರ ನಿಷೇಧಿಸಲಿ- ವಾಟಾಳ್‌
ಎಚ್‌ಟುಒ: ಒತ್ತಡಕ್ಕೆ ಮಣಿದ ಧನರಾಜ್‌, ಡಿಎಂಕೆ ಬಾವುಟಕ್ಕೆ ಕತ್ತರಿ!

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada