ನಿರ್ಮಾಪಕರ ಮೇಲೆ ಗುಂಡು ಹಾರಿಸಿದ ತೆಲುಗು ಚಿತ್ರ ನಟ ಬಾಲಕೃಷ್ಣ
ಹೈದರಾಬಾದ್: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್‌ಟಿಆರ್‌ಪುತ್ರ, ಖ್ಯಾತ ಚಿತ್ರ ನಟ ಬಾಲಕೃಷ್ಣ ಇರ್ವರು ತೆಲುಗು ಚಿತ್ರ ನಿರ್ಮಾಪಕರ ಮೇಲೆ ಗುಂಡುಹಾರಿಸಿದ್ದಾರೆ.
ಹೈದರಾಬಾದ್‌ನ ಜುಬಿಲಿ ಹಿಲ್‌ನಲ್ಲಿರುವ ಬಾಲಕೃಷ್ಣ ನಿವಾಸದಲ್ಲಿ ಈ ಘಟನೆ ಸಂಭವಿಸಿದೆ.
ಚಿತ್ರ ನಿರ್ಮಾಪಕ ಬಿ.ಸುರೇಶ್ ಮತ್ತು ಸತ್ಯನಾರಾಯಣ ಚೌಧರಿ ಜೊತೆ ನಡೆಯುತ್ತಿದ್ದ ಮಾತುಕತೆ ತೀವ್ರ ಸ್ವರೂಪಕ್ಕೆ ತಲುಪಿದಾಗ ಬಾಲಕೃಷ್ಣ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.
ಕೇಸು ದಾಖಲಿಸಿಕೊಂಡ ಪೊಲೀಸರು ಎರಡು ಬಂದೂಕುಗಳನ್ನು ವಶಪಡಿಸಿಕೊಂಡಿದ್ದಾರೆ. ಘಟನೆಯ ಬಳಿಕ ಎದೆ ನೋವಿನ ಕಾರಣ ನೀಡಿ ಬಾಲಕೃಷ್ಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗುಂಡಿನದಾಳಿಯಲ್ಲಿ ತೀವ್ರ ಸ್ವರೂಪದ ಗಾಯಗೊಂಡ ನಿರ್ಮಾಪಕರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
(ಪಿಟಿಐ)
Post your views
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications