»   » ಪ್ರೀತ್ಸೆ ಚಿತ್ರದಲ್ಲಿ ಸೋನಾಲಿ ಏನ್ ಕಷ್ಟ ಪಟ್ಟಳು ಶಿವಾ?

ಪ್ರೀತ್ಸೆ ಚಿತ್ರದಲ್ಲಿ ಸೋನಾಲಿ ಏನ್ ಕಷ್ಟ ಪಟ್ಟಳು ಶಿವಾ?

Subscribe to Filmibeat Kannada


ಆಯಮ್ಮನ ಮಾತು ಮುಖದ ಮೇಲೆ ಹೊಡೆದಂತಿತ್ತು! ನೇರ ಮತ್ತು ದಿಟ್ಟ.. ಜೊತೆಗೆ ನಿರಂತರ! ಇಷ್ಟಕ್ಕೂ ಸೋನಾಲಿ ಬೇಂದ್ರೆ ಏನಂದರು?ಪ್ರೀತ್ಸೆಚಿತ್ರದ ಮುಖಾಂತರ ಸ್ಯಾಂಡಲ್ ವುಡ್ ನಲ್ಲಿ ಬಳುಕಿದ ನೀಳ ಕಾಲ್ಗಳ ಕಣ್ಣುಕುಕ್ಕುವ ರೂಪಸಿ ಸೋನಾಲಿ ಬೇಂದ್ರೆ, ಕನ್ನಡ ಚಿತ್ರದಲ್ಲಿ ಇನ್ನೊಮ್ಮೆ ನಟಿಸಲಾರೆ... ಎಂದಿದ್ದಾರೆ.

ಒಮೆಗಾ ಕೈಗಡಿಯಾರ ಮತ್ತು ಆಭರಣಗಳ ಕಂಪನಿಗೆ ಬ್ರಾಂಡ್ ಅಂಬಾಸಿಡರ್ ಆಗಿರುವ ಸೋನಾಲಿ, ಬೆಂಗಳೂರಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಅವರು ಮಾತಿಗೆ ಕುಳಿತರು.

ನಾನು ಅನಂತನಾಗ್ ಅಭಿಮಾನಿ. ಬೆಂಗಳೂರಿನ ಕೇಂದ್ರೀಯ ವಿದ್ಯಾಲಯದಲ್ಲೇ ನಾನು ಓದಿದ್ದು. ಬೆಂಗಳೂರು ಇಷ್ಟ. ಆಗಾಗ ಬರುತ್ತೇನೆ ಎಂದರು. ಬೆಂಗಳೂರನ್ನು ಮಾತಿನ ಮಧ್ಯೆ ಹಾಡಿ ಹೊಗಳಿದ ಸೋನಾಲಿ, ಕನ್ನಡ ಚಿತ್ರದಲ್ಲಿ ಅಭಿನಯಿಸಲಾರೆ. ಆಗ ನಾನು ಪಟ್ಟ ಪಾಡು ಸಾಕಪ್ಪ ಸಾಕು ಎಂದು ಮುಖವನ್ನು ಒಂದು ರೀತಿ ಮಾಡಿದರು.

ಪ್ರೀತ್ಸೆ ಚಿತ್ರೀಕರಣದ ಸಂದರ್ಭದಲ್ಲಿ ಏನಾಯಿತು ಅಂದರೆ, ಸೋನಾಲಿ ಸ್ಪಷ್ಟವಾಗಿ ಹೇಳಲಿಲ್ಲ. ಅದನ್ನೆಲ್ಲ ನೆನಪಿಸಬೇಡಿ. ಅದೊಂದು ಭಯಾನಕ ಅನುಭವ ಎಂದರು. ಇನ್ನೊಂದು ವಿಷಯ ಅಂದ್ರೆ ಕನ್ನಡದಲ್ಲಿ ಅಭಿನಯಿಸಿದ ಚಿತ್ರದ ಹೆಸರು ಪ್ರೀತ್ಸೆ ಎಂಬುದು ಸೋನಾಲಿಗೆ ಮರೆತು ಹೋಗಿದೆ. ಉಪೇಂದ್ರ ಮತ್ತು ಶಿವಣ್ಣ ಸಹಾ ನೆನಪಲ್ಲಿಲ್ಲ.

ಬಾಲಿವುಡ್ ನನ್ನ ಮೊದಲ ಆದ್ಯತೆ. ನನ್ನ ಮಗು ದೊಡ್ಡದಾದ ಮೇಲೆ ಮತ್ತೆ ಅಭಿನಯಿಸುತ್ತೇನೆ. ಪತಿ ಬೆಹ್ಲ್ ಮತ್ತು ಮಗು ರಣ್ ವೀರ್ ಜೊತೆ ನಾನು ಸುಖವಾಗಿದ್ದೇನೆ. ನಮ್ಮದು ಸುಖಿ ಕುಟುಂಬ ಎಂದರು ಸೋನಾಲಿ.

ಸೋನಾಲಿ ಹೇಳಿದ ಎರಡು ಮುತ್ತಿನಂಥ ಮಾತುಗಳು :

1. ನನ್ನ ಸೌಂದರ್ಯದ ಗುಟ್ಟೇನು ಎಂದು ಎಲ್ಲರೂ ಕೇಳುತ್ತಾರೆ. ಅದಕ್ಕಾಗಿ ನಾನು ಏನು ಮಾಡಿಲ್ಲ. ವಂಶ ಪಾರಂಪರ್ಯವಾಗಿ ಅದು ನನಗೆ ಬಂದಿದೆ. ಸೌಂದರ್ಯ ವರ್ಧಕದಿಂದ ಯಾರೂ ಸುಂದರಿಯಾಗಲು ಸಾಧ್ಯವಿಲ್ಲ.

2. ನನ್ನ ಮಗ ಏನಾಗಬೇಕೆಂದು ನಾನು ನಿರ್ಧರಿಸಿಲ್ಲ. ದೊಡ್ಡವನಾದ ಮೇಲೆ ಅವನ ಆಸಕ್ತಿ ಕ್ಷೇತ್ರದಲ್ಲಿ ಅವನು ಮುಂದುವರೆಯಲಿ. ಮಗನ ವೃತ್ತಿಯನ್ನು ಅಪ್ಪ ಅಮ್ಮ ನಿರ್ಧಾರ ಮಾಡೋದು ತಪ್ಪಲ್ವಾ?

ಸೋನಾಲಿ ಮಾತುಗಳ ಕೇಳಿ ನಿಮಗೇನನ್ನಿಸಿತು?

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada