»   » ನಿರ್ಮಾಪಕರ ಸಂಘ ಇಬ್ಭಾಗ : ಹೊಸ ವೇದಿಕೆ ರಚನೆ!!

ನಿರ್ಮಾಪಕರ ಸಂಘ ಇಬ್ಭಾಗ : ಹೊಸ ವೇದಿಕೆ ರಚನೆ!!

Posted By:
Subscribe to Filmibeat Kannada


ಬೆಂಗಳೂರು : ನಿರ್ಮಾಪಕರ ಸಂಘ ಇಬ್ಭಾಗವಾಗಿದ್ದು, ಕರ್ನಾಟಕ ಚಲನಚಿತ್ರ ನಿರ್ಮಾಪಕ ವೇದಿಕೆ ನೂತನವಾಗಿ ಅಸ್ತಿತ್ವಕ್ಕೆ ಬಂದಿದೆ.

ಸುದ್ದಿಗಾರರೊಂದಿಗೆ ಸೋಮವಾರ ಈ ಬಗ್ಗೆ ಮಾತನಾಡುತ್ತಿದ್ದ ವೇದಿಕೆ ಅಧ್ಯಕ್ಷ ಭಾ.ಮ.ಹರೀಶ್‌, ನಿರ್ಮಾಪಕರು ಮತ್ತು ಕನ್ನಡ ಚಿತ್ರೋದ್ಯಮದ ಹಿತಕಾಯುವುದು ನಮ್ಮ ಗುರಿ ಎಂದರು.

ಹಾಲಿ ಇರುವ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ, ಕಾರ್ಮಿಕರ ವಿರೋಧಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಕನ್ನಡ ಚಿತ್ರಗಳಿಗೆ ಯಾವುದೇ ಚಿತ್ರಮಂದಿರಗಳು ಸಿಗುವುದಿಲ್ಲ. ಕಳೆದ ಒಂದೂವರೆ ತಿಂಗಳಿಂದ ನಿರ್ಮಾಪಕರು ಚಿತ್ರ ನಿರ್ಮಾಣ ಸ್ಥಗಿತಗೊಳಿಸಿರುವುದು ಖಂಡನೀಯ ಎಂದು ಅಭಿಪ್ರಾಯಪಟ್ಟರು.

ಡಿ.10ರಂದು ಚಿತ್ರೋದ್ಯಮದ ಬಿಕ್ಕಟ್ಟು ಇತ್ಯರ್ಥಕ್ಕೆ ಸಭೆ ಕರೆಯಲಾಗಿದೆ. ಸಭೆಯಲ್ಲಿ ಒಮ್ಮತ ಮೂಡದಿದ್ದರೆ, ನಮ್ಮ ನಿರ್ಮಾಪಕರ ವೇದಿಕೆ ಚಿತ್ರ ನಿರ್ಮಾಣಕ್ಕೆ ಮುಂದಾಗಲಿದೆ. 50ನಿರ್ಮಾಪಕರು ಚಿತ್ರಗಳನ್ನು ಆರಂಭಿಸಲು ಸಜ್ಜಾಗಿದ್ದಾರೆ ಎಂದು ಭಾ.ಮ.ಹರೀಶ್‌ ಹೇಳಿದರು.

(ಯುಎನ್‌ಐ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada