ನಮ್ಮ ಲೂಸ್ ಮಾದನಿಗೆ ಅವಾರ್ಡ್ ಬಂದಿದ್ದೇ ಒಂದು ಪವಾಡ
ನಮ್ಮ ಲೂಸ್ ಮಾದ ಯೋಗೇಶ್‌ಗೆ ಈ ಬಾರಿ (2008-09 ಸಾಲಿನ) ರಾಜ್ಯ ಪ್ರಶಸ್ತಿ ಬಂದಿದ್ದು ಹಲವರ ಹುಬ್ಬೇರಿಸಿತ್ತು. ಆದರೆ ಈ ಯಲ್ಲಮ್ಮನ ಪವಾಡ ಹೇಗೆ ನಡೆಯಿತು ಎಂಬ ಅಂಶ ತಡವಾಗಿ ಬೆಳಕಿಗೆ ಬಂದಿದೆ. 'ಅಂಬಾರಿ' ಚಿತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ಯೋಗೇಶ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ಒಲಿದಿತ್ತು.
ಕೆಲವರಂತೂ ಯೋಗೇಶ್‌ಗೆ ಪ್ರಶಸ್ತಿ ಬಂದದ್ದನ್ನು ಎರಡೆರಡು ಬಾರಿ ಖಚಿತಪಡಿಸಿಕೊಂಡದ್ದೂ ಇದೆ. 'ಅಂಬಾರಿ' ಚಿತ್ರದಲ್ಲಿ ಯೋಗಿ ಅಭಿನಯ ಅಷ್ಟೇನು ಕೆಟ್ಟದಾಗಿರಲಿಲ್ಲ. ಆದರೆ ಪ್ರಶಸ್ತಿ ಗಿಟ್ಟಿಸುವ ಮಟ್ಟಕ್ಕೆ ಅಭಿನಯಿಸಿರಲಿಲ್ಲ. ಆದರೂ ಪ್ರಶಸ್ತಿ ಹೇಗೆ ಬಂತಪ್ಪ ಎಂಬುದು ಗಾಂಧಿನಗರದ ಅನುಮಾನ.
'ಕಬಡ್ಡಿ' ಚಿತ್ರದ ಪ್ರವೀಣ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಲು ಕೆವಿ ರಾಜು ಸೂಚಿಸಿದ್ದರಂತೆ.ಆದರೆ ಪ್ರಶಸ್ತಿ ಆಯ್ಕೆ ಸಮಿತಿಯ ನೇತೃತ್ವ ವಹಿಸಿದ್ದ ಹಿರಿಯ ನಿರ್ದೇಶಕ ಎಚ್ ಆರ್ ಭಾರ್ಗವ ಅವರ 'ಪಿಳಾನೇ' ಬೇರೆ ಇತ್ತು. ಅದು ಏನಪ್ಪಾ ಅಂದ್ರೆ...
ಹೊಸಬ ಪ್ರವೀಣ್‌ಗೆ ಪ್ರಶಸ್ತಿ ಕೊಟ್ಟರೆ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಯಾರ್ ಬರ್ತಾರಿ. ನಮ್ಮ ಲೂಸ್ ಮಾದನಿಗೆ ಕೊಟ್ಟರೆ ಕ್ರೌಡ್ ಜಾಸ್ತಿಯಾಗುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭ ಸೂಪರ್ ಹಿಟ್. ಹೇಗಿದೆ ನನ್ನ ಐಡಿಯಾ ಎಂದರಂತೆ ಭಾರ್ಗವ. ಒಂದೇ ಏಟಿಗೆ ಎರಡು ಹಕ್ಕಿಹೊಡೆದ ಇವರ ಐಡಿಯಾಗೆ ಪ್ರಶಸ್ತಿ ಆಕೆಯ ಸಮಿತಿ ಸದಸ್ಯರು ತಲೆದೂಗಿದರಂತೆ.
ರಾಜ್ಯ ಪ್ರಶಸ್ತಿ ಪಡೆದ ಖುಷಿಯಲ್ಲಿರುವ ನಮ್ಮ ಯೋಗೇಶ್ ಪ್ರಶಸ್ತಿ ಬಂದಕ್ಕೆ ಥ್ಯಾಂಕ್ಸ್ ಎನ್ನುತ್ತಿದ್ದರೆ ಎಲ್ಲಾ ಆ ಭಗವಂತನ ಲೀಲೆ ಎನ್ನುತ್ತಾರೆ. ಆದರೆ ಪ್ರಶಸ್ತಿಯನ್ನು ಲಂಚ ಕೊಟ್ಟು ಪಡೆದಿಲ್ಲ. ತಮ್ಮ ಕೃಷಿಗೆ ಸಿಕ್ಕ ಪ್ರತಿಫಲ ಎನ್ನುತ್ತಾರೆ ಸೌಮ್ಯವಾಗಿ. ಆದರೆ ತೆರೆಯ ಹಿಂದಿನ ಒರಿಜಿನಲ್ ಕತೆ ಮಾತ್ರ ಹೀಗಿದೆ. (ಏಜೆನ್ಸೀಸ್)


Click it and Unblock the Notifications











