ಚಿರಂಜೀವಿ ಪುತ್ರಿ ಶ್ರೀಜಾ ದಾಂಪತ್ಯ ಕಲಹ ಬೆಳ್ಳಿತೆರೆಗೆ?

By Mahesh

ಚಿರಂಜೀವಿ ಮಗಳು ಶ್ರೀಜಾ ಹಾಗೂ ಶಿರೀಶ್ ಪ್ರೇಮ ವಿವಾಹ, ದಾಂಪತ್ಯ ಕಲಹ, ವರದಕ್ಷಿಣೆ ಕಿರುಕುಳ ಹೊಸ ಚಿತ್ರವೊಂದಕ್ಕೆ ಕಥೆ ಒದಗಿಸಿದೆ. ಇದರಲ್ಲಿ ವಿಶೇಷವೇನು? ಕನ್ನಡದಲ್ಲೇ ಹುಡುಕಿದರೆ ವರದಕ್ಷಿಣೆ, ಹೆಣ್ಣಿನ ಗೋಳಿನ ಕಥೆ ಆಧಾರಿಸಿದ ನೂರಾರು ಚಿತ್ರಗಳು ಸಿಗುತ್ತವೆ ಎನ್ನಬಹುದು.

ಆದರೆ, ಟಾಲಿವುಡ್ ಸಿನಿಮಾ ಮಂದಿ ಐಡ್ಯಾ ಕೇಳಿ, ವರದಕ್ಷಿಣೆ ಕಿರುಕುಳದ ಬಗ್ಗೆ ಸಿನಿಮಾ ತೆಗೆದರೂ ಚಿತ್ರದ ಪ್ರಚಾರಕ್ಕೆ ಕಮ್ಮಿಯಂದರೂ 50 ಲಕ್ಷ ರು ಖರ್ಚು ಮಾಡಬೇಕು.ಆದರೆ, ಶಿರೀಶ್ ಹಾಗೂ ಶ್ರೀಜಾ ಕಥೆ ಎಂದು ಸಿನಿಮಾ ಮಾಡಿದರೆ ಬಿಟ್ಟಿಯಾಗಿ ಪ್ರಚಾರ ಸಿಗುತ್ತದೆ. ಟಿವಿ ಮಾಧ್ಯಮಗಳಲ್ಲಿ ಕನಿಷ್ಠ 4 ರಿಂದ 5 ಕೋಟಿ ವರೆಗಿನ ಮೊತ್ತದ ಜಾಹೀರಾತು ಪ್ರಚಾರ ಪುಕ್ಕಟೆಯಾಗಿ ಲಭಿಸುತ್ತದೆ.

ತಮ್ಮ ಚಾನೆಲ್ ನ ಟಿಆರ್ ಪಿ ರೇಟ್ ಹೆಚ್ಚಿಸಿಕೊಳ್ಳಲು ನಮ್ಮ ಚಿತ್ರಕ್ಕೆ ಮಾಧ್ಯಮಗಳು ಪ್ರಚಾರ ನೀಡುತ್ತವೆ ಎಂದು ಅನಾಮಿಕ ಚಿತ್ರ ನಿರ್ಮಾಣಗಾರರು ಹೇಳುತ್ತಿದ್ದಾರೆ. ಮಿಕ್ಕಂತೆ ಚಿತ್ರದ ಬಾಕಿ ಬೆಳವಣಿಗೆ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಶ್ರೀಜಾ ಲವ್ ಸ್ಟೋರಿ :ಚಿರಂಜೀವಿ ಮಗಳು ಶ್ರೀಜಾಳನ್ನು ಚಿರು ವಿರೋಧದ ನಡುವೆಯೂ 2007ರಲ್ಲಿ ಶಿರೀಶ್‌ ಎಂಬ ಅನ್ಯಕೋಮಿಯ ಯುವಕನನ್ನು ಮದುವೆಯಾಗಿದ್ದಳು. ಆದರೆ ಮದುವೆ ನಂತರ ಇಬ್ಬರ ಮಧ್ಯೆಯೂ ಒಡಕುಂಟಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ನಡುವೆ, ಪತಿ ಮತ್ತು ಅತ್ತೆ ತನಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಶ್ರೀಜಾ ಪೊಲೀಸರಿಗೆ ದೂರು ನೀಡಿದ್ದಳು.

ನಾಲ್ಕೈದು ತಿಂಗಳಿಂದ ತಲೆಮರೆಸಿಕೊಂಡು ತಿರುಗುತ್ತಿದ್ದ ಶಿರೀಶ್‌, ಸುಪ್ರೀಂ ಕೋರ್ಟಿಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದ. ಕೊನೆಗೆ ನ್ಯಾಯಾಲಯಕ್ಕೆ ಶರಣಾಗಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಶ್ರೀಜಾಳ ಮೇಲೆ ಹಲ್ಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದ. ವರದಕ್ಷಿಣೆ ಕಿರುಕುಳ ಕೇಸ್ ಅಡಿಯಲ್ಲಿ ಕೌಟುಂಬಿಕ ನ್ಯಾಯಾಲಯದಲ್ಲಿ ಹಾಜರು ಪಡಿಸಿ ಚಂಚಲಗೂಡಾ ಜೈಲಿಗೆ ಶಿರೀಶ್ ಅನ್ನು ತಳ್ಳಲಾಗಿದೆ.

More from Filmibeat

English summary
Chiranjeevi Family Domestic Violance, Srija Sirish Bharadwaj divorce, dowry case is likely to become movie. Tollywood sources say this subject particularly needs no publicity as all media will do it for you without any cost.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X