ವಿವಾದದಲ್ಲಿ ರಮ್ಯಾ ಅಭಿನಯದ ಸಂಜು ವೆಡ್ಸ್ ಗೀತಾ ಹಾಡು

By Rajendra

ಗೋಲ್ಡನ್ ಗರ್ಲ್ ರಮ್ಯಾ ಹಾಗೂ ಶ್ರೀನಗರ ಕಿಟ್ಟಿ ಅಭಿನಯದ 'ಸಂಜು ವೆಡ್ಸ್ ಗೀತಾ' ಚಿತ್ರದ ಜನಪ್ರಿಯ ಗೀತೆ ಈಗ ಹೊಸ ವಿವಾದದಲ್ಲಿ ಸಿಕ್ಕಿಕೊಂಡಿದೆ. "ಗಗನವೆ ಬಾಗಿ ಭುವಿಯನು ಕೇಳಿದ ಹಾಗೆ..." ಹಾಡು ಮಲಯಾಳಂನ 'ಚೈನಾ ಟೌನ್' ಚಿತ್ರದ ಹಾಡಿನ ಟ್ಯೂನ್‌ ಹೋಲುತ್ತಿರುವುದೇ ಈ ವಿವಾದಕ್ಕೆ ಕಾರಣ.

ವಿಶೇಷ ಎಂದರೆ ಈ ಎರಡು ಚಿತ್ರಗಳಿಗೆ ಸಂಗೀತ ನೀಡಿರುವವರು ಜೆಸ್ಸಿ ಗಿಫ್ಟ್. ಮಲಯಾಳಂನಿಂದ ಕನ್ನಡಕ್ಕೆ ಈ ಟ್ಯೂನನ್ನು ಕದಿಯಲಾಯಿತೋ ಅಥವಾ ಕನ್ನಡದಿಂದ ಮಲಯಾಳಂಗೆ ಈ ಟ್ಯೂನ್ ಮಕ್ಕಿಕಾ ಮಕ್ಕಿ ಮಾಡಲಾಗಿದೆಯೋ ಎಂಬ ಚರ್ಚೆ ಮೊದಲಾಗಿದೆ. ಆದರೆ ಈ ಗೊಂದಲವನ್ನು ನಿವಾರಿಸುವ ಪ್ರಯತ್ನಕ್ಕೆ ಯಾರೂ ಕೈಹಾಕದೆ ಇರುವುದು ವಿಚಿತ್ರವಾಗಿದೆ.

ಎರಡು ಹಾಡುಗಳ ಟ್ಯೂನ್ ಒಂದೇ ತೆರನಾಗಿದ್ದು ಸಾಹಿತ್ಯದಲ್ಲಿ ಮಾತ್ರ ಭಿನ್ನತೆ ಇದೆ. ಎರಡೂ ಹಾಡುಗಳು ರೊಮ್ಯಾಂಟಿಕ್ ಆಗಿದ್ದು ಬೇರೆ ಬೇರೆ ಸಂದರ್ಭಗಳಲ್ಲಿ ಬಳಸಿಕೊಳ್ಳಲಾಗಿದೆ. ಕವಿರಾಜ್ ಬರೆದಿರುವ ಸಾಹಿತ್ಯಕ್ಕೆ ಕನ್ನಡದಲ್ಲಿ ಶ್ರೇಯಾ ಘೋಷಾಲ್ ಸುಮಧುರವಾಗಿ ಹಾಡಿದ್ದು ಮಲಯಾಳಂನಲ್ಲಿ ಕೆ ಜಿ ಚಿತ್ರಾ ಹಾಗೂ ಎಂ ಜಿ ಶ್ರೀಕುಮಾರ್ ಹಾಡಿದ್ದಾರೆ.

ಮತ್ತೊಂದು ವಿಶೇಷ ಎಂದರೆ ಮೊದಲು 'ಸಂಜು ವೆಡ್ಸ್ ಗೀತಾ' ಚಿತ್ರ ಬಿಡುಗಡೆಯಾಯಿತು. ಬಳಿಕ ಮಲಯಾಳಂನ 'ಚೈನಾ ಟೌನ್' ಚಿತ್ರ ತೆರೆಗೆ ಬಂತು. ಹಾಗಾಗಿ ಕನ್ನಡ ಚಿತ್ರ ಒರಿಜಿನಲ್ಲು ಮಲಯಾಳಂ ಚಿತ್ರದ ಹಾಡು ಡೂಪ್ಲಿಕೇಟ್ ಎಂಬ ಮಾತುಗಳು ಕೇಳಿಬರುತ್ತಿವೆ. ಈ ವಿವಾದಕ್ಕೆ ಸ್ವತಃ ಜೆಸ್ಸಿ ಗಿಫ್ಟ್ ಅವರೇ ತೆರೆ ಎಳೆಯಬೇಕಾಗಿದೆ.

More from Filmibeat

English summary
Ramya starrer ‘Gaganave baagi, bhuviyanu’ from Sanju Weds Geetha (Kannada) song creates new controversy in Kannada film land. Because the tune of Malayalam's China Town matches same. Only the lyrics are different. Both are romantic but the situations are different.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X