»   » ಪುಟ್ಟಣ್ಣನಿಗೆ ಜೀವದಾನದ ಆಶಾಕಿರಣ

ಪುಟ್ಟಣ್ಣನಿಗೆ ಜೀವದಾನದ ಆಶಾಕಿರಣ

Posted By: Staff
Subscribe to Filmibeat Kannada

ಬೆಂಗಳೂರು : ಪುಟ್ಟಣ್ಣ ಚಿತ್ರಮಂದಿರವನ್ನು ಪುನರುಜ್ಜೀವನಗೊಳಿಸುವ ಕುರಿತು ಬೆಂಗಳೂರು ಮೇಯರ್‌ ಪಿ.ಆರ್‌.ರಮೇಶ್‌ ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

ಜಯನಗರ ಬಡಾವಣೆಯ ನಾಲ್ಕನೇ ಹಂತದಲ್ಲಿರುವ ಪುಟ್ಟಣ್ಣ ಚಿತ್ರಮಂದಿರವನ್ನು ವಾಣಿಜ್ಯ ಸಂಕೀರ್ಣವನ್ನಾಗಿ ಬದಲಿಸುವ ಯಾವುದೇ ಪ್ರಸ್ತಾವನೆ ಬೆಂಗಳೂರು ಮಹಾನಗರ ಪಾಲಿಕೆಯ ಮುಂದಿಲ್ಲ . ಈ ಕುರಿತು ಉಂಟಾಗಿರುವ ಆತಂಕ ಹಾಗೂ ಗೊಂದಲಗಳು ನಿರಾಧಾರ ಎಂದು ಮೇಯರ್‌ ರಮೇಶ್‌ ಮಂಗಳವಾರ (ಮೇ 4) ಸ್ಪಷ್ಟಪಡಿಸಿದರು. ಚಿತ್ರಮಂದಿರವನ್ನು ಮುಚ್ಚದಿರುವಂತೆ ಒತ್ತಾಯಿಸಿದ ಕನ್ನಡ ಚಲನಚಿತ್ರ ಮತ್ತು ಕಿರುತೆರೆ ಕಲಾವಿದರ ನಿಯೋಗಕ್ಕೆ ರಮೇಶ್‌ ಈ ಸ್ಪಷ್ಟನೆ ನೀಡಿದರು.

ಪುಟ್ಟಣ್ಣ ಚಿತ್ರಮಂದಿರವನ್ನು ನಿರ್ವಹಿಸುವ ಬಗ್ಗೆ ಸದ್ಯದಲ್ಲಿಯೇ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಪ್ರಸ್ತುತ ಹಾಳಾಗಿರುವ ಚಿತ್ರಮಂದಿರದ ಒಳಾಂಗಣವನ್ನು ತಜ್ಞರ ಸಲಹೆಯ ಮೇರೆಗೆ ದುರಸ್ಥಿಗೊಳಿಸಲಾಗುವುದು. ದುರಸ್ಥಿಯ ನಂತರವೇ ಚಿತ್ರಮಂದಿರವನ್ನು ಪುನರ್‌ ಪ್ರಾರಂಭಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ರಮೇಶ್‌ ಹೇಳಿದರು.

ವಾಣಿಜ್ಯ ಸಂಕೀರ್ಣಕ್ಕೂ ಪುಟ್ಟಣ್ಣರ ಹೆಸರಿಡಿ

ಪುಟ್ಟಣ್ಣ ಚಿತ್ರಮಂದಿರುವ ಜಯನಗರ ಷಾಪಿಂಗ್‌ ಕಾಂಪ್ಲೆಕ್ಸ್‌ಗೆ ಪುಟ್ಟಣ್ಣ ಕಣಗಾಲರ ಹೆಸರಿಡಬೇಕು ಎಂದು ಪಾಲಿಕೆಯ ಬಿಜೆಪಿ ಸದಸ್ಯ ಬಿ.ಎಂ.ಮಂಗಳಾ ಒತ್ತಾಯಿಸಿದ್ದಾರೆ. ಚಿತ್ರಮಂದಿರವನ್ನು ಯಾವುದೇ ಕಾರಣಕ್ಕೆ ಮುಚ್ಚಬಾರದು. ನವೀಕರಿಸಲು ಪಾಲಿಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮಂಗಳಾ ಹೇಳಿಕೆ ನೀಡಿದ್ದಾರೆ.

Post your views


ಇದನ್ನೂ ಓದಿ-
ಪುಟ್ಟಣ್ಣ ಚಿತ್ರಮಂದಿರದ ಪ್ರಾಣತ್ಯಾಗ
ಸಭ್ಯರ ಜಯನಗರ ಬಡಾವಣೆ ಮತ್ತು ಬಣ್ಣಗೆಟ್ಟ ಪುಟ್ಟಣ್ಣ !

English summary
BMP decision on Puttanna theatre soon
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada