»   » ಸದಾಗೆ ‘ಅಪ್ಪ’ನೆಂಬ ಮಗ್ಗುಲ ಮುಳ್ಳು?

ಸದಾಗೆ ‘ಅಪ್ಪ’ನೆಂಬ ಮಗ್ಗುಲ ಮುಳ್ಳು?

Subscribe to Filmibeat Kannada
  • ಸಿನಿಡೆಸ್ಕ್‌, ದಟ್ಸ್‌ ಕನ್ನಡ
ಇಂದ್ರಜಿತ್‌ ನಿರ್ದೇಶನದ ‘ಮೊನಾಲಿಸಾ’ ಚಿತ್ರದ ಜನಪ್ರಿಯತೆ ಇನ್ನೂ ಕರಗಿಲ್ಲ . ಐವತ್ತು ದಿನಗಳ ನಂತರವೂ ‘ಮೊನಾಲಿಸಾ’ ನಗೆಗೆ ಹುಡುಗರು ಮುಗಿಬೀಳುತ್ತಿದ್ದಾರೆ. ಕಾಲೇಜು ಹುಡುಗಿಯರೂ ಥಿಯೇಟರ್‌ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ. ‘ಮೊನಾಲಿಸಾ’ ನೋಡಿಬಂದವರ ಮೊಗದಲ್ಲಿ , ಅದೇ ಮುಗುಳ್ನಗೆ !

‘ಮೊನಾಲಿಸಾ’ ಚಿತ್ರದ ಗೆಲುವಿನಲ್ಲೊಂದು ಪಾಲು ನಾಯಕಿ ಸದಾಗೂ ಸಲ್ಲಬೇಕು. ಸೀದಾಸಾದಾ ಸದಾ ಕನ್ನಡಿಗರಿಗೆ ಇಷ್ಟವಾಗಿದ್ದಾಳೆ. ಚೆಲುವು ಮಾತ್ರವಲ್ಲ , ನಟನೆಯಲ್ಲೂ ಓಕೆ ಅನ್ನಿಸಿಕೊಂಡಿದ್ದಾಳೆ. ಮೊನ್ನೆಯಷ್ಟೇ ಬೆಂಗಳೂರಿಗೆ ಬಂದಿದ್ದ ಸದಾ ‘ಮೊನಾಲಿಸಾ’ ಬಗ್ಗೆ ಮೆಚ್ಚಿ ಮಾತಾಡಿದ್ದಳು. ಕನ್ನಡ ಅಂದ್ರೆ ನಂಗಿಷ್ಟ ಎಂದು ಉಸುರಿದ್ದಳು. ಅದೇ ಸದಾ ಈಗ ಹೈದರಾಬಾದಲ್ಲಿ ಸುದ್ದಿಯಲ್ಲಿದ್ದಾಳೆ ; ಅಪ್ಪನ ಕಾರಣದಿಂದಾಗಿ.

ನಾಯಕಿಯರ ಅಮ್ಮಂದಿರು ಸೆಟ್‌ನಲ್ಲಿ ಕಿರಿಕ್ಕು ಮಾಡುವುದು ಮಾಮೂಲು. ಆದರೆ ಸದಾ ವಿಷಯದಲ್ಲಿ ತಿರುಗುಮುರುಗು. ಇಲ್ಲಿ ಅಪ್ಪನೆಂಬ ಪ್ರಾಣಿ ಸಿನಿಮಾ ಮಂದಿಗೆ ವಿಲನ್‌ ಆಗಿ ಕಾಣುತ್ತಿದ್ದಾನೆ. ಸದಾಳ ಅಪ್ಪನ ಅವಾಂತರ ಒಂದೆರಡಲ್ಲ... ಶೂಟಿಂಗ್‌ನ ಪ್ರತಿಯಾಂದು ವಿಷಯದಲ್ಲೂ ಆತ ಮೂಗು ತೂರಿಸುತ್ತಾನೆ ಎನ್ನುವುದು ಆರೋಪ.

ನಿರ್ದೇಶಕರ ಕೆಲಸದಲ್ಲೂ ಸದಾಳ ಅಪ್ಪ ಮಧ್ಯಪ್ರವೇಶಿಸುತ್ತಾನಂತೆ. ಆತ ಓಕೆ ಎಂದಮೇಲೆಯೇ ಕೆಮರಾ ಆ್ಯಂಗಲ್ಲು ಓಕೆಯಂತೆ! ಇದರಿಂದಾಗಿ ನಿರ್ದೇಶಕ ಹಾಗೂ ಛಾಯಾಗ್ರಾಹಕ ಹೈರಾಣು.

ಸದಾಳ ಅಪ್ಪನಿಂದ ಶೋಷಿತರಾದವರ ಸಂಖ್ಯೆ ಸಣ್ಣದಲ್ಲ . ಸಣ್ಣಪುಟ್ಟವರ ಮಾತು ಬಿಡಿ- ಯಶಸ್ವಿ ನಿರ್ದೇಶಕರಾದ ಕೆ.ಎಸ್‌. ರವಿಕುಮಾರ್‌ ಹಾಗೂ ನಿರ್ಮಾತೃ ಶಂಕರ್‌ ಕೂಡ ಪಟ್ಟಿಯಲ್ಲಿದ್ದಾರೆ.

ಅಂದಹಾಗೆ, ಸದ್ಯ ‘ಅಪರಿಚಿತುಡು’ ಎನ್ನುವ ಚಿತ್ರದಲ್ಲಿ ಸದಾ ಅಭಿನಯಿಸುತ್ತಿದ್ದಾಳೆ. ಚಿತ್ರದ ನಾಯಕ ವಿಕ್ರಂ. ಕನ್ನಡದಲ್ಲಿ ಮಾತ್ರ ಸದಾಗೆ ಇನ್ನೊಂದು ‘ಮೊನಾಲಿಸಾ’ ನಂತರ ಇನ್ನೊಂದು ಅವಕಾಶ ಸಿಕ್ಕಂತಿಲ್ಲ ; ಯಾಕೊ ?

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada