»   » ಜಗ್ಗೇಶ್‌ಗೆ ಕೊಲೆ ಬೆದರಿಕೆ ಕರೆ

ಜಗ್ಗೇಶ್‌ಗೆ ಕೊಲೆ ಬೆದರಿಕೆ ಕರೆ

Subscribe to Filmibeat Kannada

ಮಲ್ಲೇಶ್ವರಂ ಪೊಲೀಸ್‌ ಠಾಣೆಯಲ್ಲಿ ಜಗ್ಗೇಶ್‌ಗೆ ಬೆದರಿಕೆ ಫೋನ್‌ ಕರೆಗಳು ಬರುತ್ತಿವೆ ಎಂದು ದೂರು ದಾಖಲಾಗಿದೆ. ಪ್ರದೇಶ ಕಾಂಗ್ರೆಸ್‌ ಸಮಿತಿ ಕಾರ್ಯದರ್ಶಿಯೂ ಆಗಿರುವ ಜಗ್ಗೇಶ್‌ ಅವರ ಮೊಬೈಲು ಹಾಗೂ ಮನೆ ಫೋನ್‌ ನಂಬರಿಗೆ ಬುಧವಾರ (ಸೆ.03) ಬೆದರಿಕೆ ಕರೆಗಳು ಬಂದಿವೆ. ತಡ ಮಾಡದೆ ಜಗ್ಗೇಶ್‌ ಪೊಲೀಸ್‌ ಠಾಣೆಗೆ ದೂರಿತ್ತಿದ್ದಾರೆ.

ದುಷ್ಕರ್ಮಿಗಳು ಬೆದರಿಕೆ ಕರೆಗಳನ್ನು ಮಾಡಲು ಉಪಯೋಗಿಸಿರುವ ಮೊಬೈಲ್‌ ನಂಬರನ್ನು ಗುರ್ತಿಸಲಾಗಿದೆ. ಆದರೆ ಈ ಮೊಬೈಲ್‌ ಕಳುವಾಗಿದೆ ಎಂದು ಅದರ ಮಾಲಿಕರು ಈಗಾಗಲೇ ದೂರು ನೀಡಿದ್ದು , ಕಳುವಾಗಿರುವ ಮೊಬೈಲ್‌ ಯಾರ ಬಳಿಯಿದೆ, ಯಾರು ಬೆದರಿಕೆ ಕರೆ ಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಕನ್ನಡ ಚಿತ್ರಗಳಿಗೆ ಸಬ್ಸಿಡಿ ಕೊಡುವ ಸಮಿತಿಯಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ. 2 ಲಕ್ಷ ರುಪಾಯಿ ಲಂಚ ಕೊಟ್ಟರೆ, 10 ಲಕ್ಷ ರುಪಾಯಿ ಸಹಾಯ ಧನ ಸುಲಭವಾಗಿ ಸಿಗುತ್ತಿದೆ ಎಂದು ಇತ್ತೀಚೆಗೆ ಜಗ್ಗೇಶ್‌ ಆರೋಪಿಸಿದ್ದರು. ಈ ಬಗ್ಗೆ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರಿಗೂ ದೂರು ಸಲ್ಲಿಸಿದ್ದರು. ಬೆದರಿಕೆ ಕರೆಗೂ, ಜಗ್ಗೇಶ್‌ ಹೀಗೆ ಮಾತಾಡಿದ್ದಕ್ಕೂ ಸಂಬಂಧವಿದೆಯಾ ಎಂಬ ಅನುಮಾನವೂ ಪೊಲೀಸರಲ್ಲಿ ಇದೆ.

(ಇನ್ಫೋ ವಾರ್ತೆ)

Post your views

ಪೂರಕ ಓದಿಗೆ
ಸಿನಿಮಾ ಸಬ್ಸಿಡಿ ಕಮಿಟಿಯ ಲಂಚಾವತಾರ


ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada