»   » ಸಿನಿ ಬಿಕ್ಕಟ್ಟು : ಕಾಸರವಳ್ಳಿ ಹೇಳ್ತಾರೆ....

ಸಿನಿ ಬಿಕ್ಕಟ್ಟು : ಕಾಸರವಳ್ಳಿ ಹೇಳ್ತಾರೆ....

Posted By:
Subscribe to Filmibeat Kannada
  • ವಿಘ್ನೕಶ್ವರ ಕುಂದಾಪುರ
ಕಳೆದ ಮೂರು ದಶಕಗಳಿಂದ ಕನ್ನಡ ಚಿತ್ರೋದ್ಯಮವನ್ನು ಹೊರಗಿನ ಶಕ್ತಿಗಳು ನಿಯಂತ್ರಿಸುತ್ತಿದ್ದು , ಈ ನಿಯಂತ್ರಣಕ್ಕೆ ಕೊನೆ ಹೇಳಲು ಇದು ಸಕಾಲವಾಗಿದೆ ಅಂದು ಖ್ಯಾತ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅಭಿಪ್ರಾಯಪಟ್ಟಿದ್ದಾರೆ.

ತಮ್ಮ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ‘ದ್ವೀಪ’ ತೆರೆ ಕಾಣಲು ಉಂಟಾದ ಅಡಚಣೆಗಳನ್ನು ನೆನಪಿಸಿಕೊಂಡ ಕಾಸರವಳ್ಳಿ, ಇನ್ನು ಮುಂದಾದರೂ ಕನ್ನಡ ಚಿತ್ರೋದ್ಯಮ ಸ್ವಾವಲಂಬನೆ ಸಾಧಿಸಬೇಕು ಎಂದರು. ಮಂಗಳೂರಿನಲ್ಲಿ ತಮ್ಮ ನೂತನ ಚಿತ್ರ ‘ಅಚಲ’ದ ಚಿತ್ರೀಕರಣದ ಸಂದರ್ಭದಲ್ಲಿ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಕನ್ನಡ ಚಿತ್ರೋದ್ಯಮದ ಬಿಕ್ಕಟ್ಟಿನ ಕುರಿತು ತಮ್ಮ ನಿಲುವನ್ನು ಕಾಸರವಳ್ಳಿ ಹಂಚಿಕೊಂಡರು.

ಕನ್ನಡ ಚಿತ್ರೋದ್ಯಮದಲ್ಲಿ ಪ್ರಾಬಲ್ಯ ಹೊಂದಿರುವವರು ಲಾಭದ ಕುರಿತು ಮಾತ್ರ ಯೋಚಿಸುತ್ತಾರೆ. ಕನ್ನಡ ಭಾಷೆ, ಸಂಸ್ಕೃತಿ ಕುರಿತು ಅವರು ಯೋಚಿಸುವುದಿಲ್ಲ ಎಂದ ಕಾಸರವಳ್ಳಿ- ಕನ್ನಡ ಚಿತ್ರೋದ್ಯಮದ ತಪ್ಪು ನೀತಿಯಿಂದಾಗಿಯೇ ್ಫಕರ್ನಾಟಕದಲ್ಲಿ ಕನ್ನಡೇತರ ಚಿತ್ರಗಳು ವಿಜೃಂಭಿಸುವಂತಾಗಿದೆ ಎಂದರು.

ಇಂಥ ದುಸ್ಥಿತಿ ಕರ್ನಾಟಕದಲ್ಲಿ ಮಾತ್ರ. ಕನ್ನಡನಾಡಿನಲ್ಲಿ ಇತರ ಐದು ಭಾಷೆಯ (ಹಿಂದಿ, ಇಂಗ್ಲಿಷ್‌,ತಮಿಳು, ಮಲಯಾಳಂ ಹಾಗೂ ತೆಲುಗು) ಚಿತ್ರಗಳೊಂದಿಗೆ ಕನ್ನಡ ಚಿತ್ರಗಳು ಸ್ಪರ್ಧಿಸುವಂತಾಗಿದೆ. ಆದರೆ ತಮಿಳುನಾಡು, ಮಹಾರಾಷ್ಟ್ರ, ಆಂಧ್ರಗಳಲ್ಲಿ ಸ್ಪರ್ಧೆಯಿರುವುದು ಸ್ಥಳೀಯ ಭಾಷೆ ಚಿತ್ರಗಳು ಹಾಗೂ ಹಿಂದಿ ಮತ್ತು ಇಂಗ್ಲಿಷ್‌ ಚಿತ್ರಗಳ ನಡುವೆ ಮಾತ್ರ ಎಂದು ಕಾಸರವಳ್ಳಿ ಹೇಳಿದರು.

ಗುಣಮಟ್ಟದ ಚಿತ್ರಗಳು ಕರ್ನಾಟಕದಲ್ಲಿ ನಿರ್ಮಾಣವಾಗುತ್ತಿಲ್ಲ ಎನ್ನುವ ಆಪಾದನೆಗಳ ಕುರಿತು ಕೆರಳಿದ ಕಾಸರವಳ್ಳಿ- ಪ್ರಶಂಸೆ ಹಾಗೂ ಪ್ರಶಸ್ತಿಗೆ ಪಾತ್ರವಾದ ತಮ್ಮ ‘ದ್ವೀಪ’ ಚಿತ್ರದ ಬಿಡುಗಡೆಗೆ ಉಂಟಾದ ಅಡಚಣೆಗಳನ್ನು ನೆನಪಿಸಿಕೊಂಡರು.

ಶ್ಯಾಮ್‌ ಬೆನಗಲ್‌ರ 15 ಚಿತ್ರಗಳು ಯಾಕೆ ಬಿಡುಗಡೆಯಾಗಲಿಲ್ಲ ಎಂದು ಪ್ರಶ್ನಿಸಿದ ಕಾಸರವಳ್ಳಿ - ‘ಗರ್ಲ್‌ಫ್ರೆಂಡ್‌’, ‘ಜಿಸ್ಮ್‌’ನಂಥ ಚಿತ್ರಗಳೊಂದಿಗೆ ಕನ್ನಡದ ಗುಣಾತ್ಮಕ ಚಿತ್ರಗಳು ಸ್ಪರ್ಧಿಸುವುದು ಹೇಗೆ ಎಂದು ಪ್ರಶ್ನಿಸಿದರು.

ಏಳುವಾರಗಳ ನಂತರವೇ ಪರಭಾಷಾ ಚಿತ್ರಗಳು ಕರ್ನಾಟಕದಲ್ಲಿ ತೆರೆ ಕಾಣಬೇಕೆಂಬ ಚಿತ್ರೋದ್ಯಮದ ನಿಲುವಿಗೆ ಗಿರೀಶ್‌ ಕಾಸರವಳ್ಳಿ ಪೂರ್ಣ ಬೆಂಬಲ ವ್ಯಕ್ತಪಡಿಸಿದರು.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada