»   » ಕಾಮೋನ್ಮತ್ತ ಡ್ಯಾನ್ಸ್ ಮಾಸ್ಟರ್ ಲಾರೆನ್ಸ್ ತೆಕ್ಕೆಗೆ ಲಕ್ಷ್ಮಿ ರೈ

ಕಾಮೋನ್ಮತ್ತ ಡ್ಯಾನ್ಸ್ ಮಾಸ್ಟರ್ ಲಾರೆನ್ಸ್ ತೆಕ್ಕೆಗೆ ಲಕ್ಷ್ಮಿ ರೈ

Posted By:
Subscribe to Filmibeat Kannada

ಡ್ಯಾನ್ಸ್ ಮಾಸ್ಟರ್ ಗಳು ನಟನೆ, ನಿರ್ದೇಶಕಕ್ಕೆ ಇಳಿಯುವುದು ಸಾಮಾನ್ಯ, ಪ್ರಭುದೇವನಂತೆ ಕುಣಿಯಬಲ್ಲೆ ಎಂಬ ವಿಶ್ವಾಸ ಇಟ್ಟು, ಕೈ ಇದೆ ಕಾಲಿದೆ ಸುಮ್ಮನೆ ಡ್ಯಾನ್ಸ್ ಮಾಡು ಎಂಬಂತೆ ಸುಮ್ಮನೆ ಇದ್ದರೆ ಆಗುತ್ತಿತ್ತು. ಆದರೆ, ಮಂಗನಂತೆ ಜಿಗಿಯುವ ನೃತ್ಯ ನಿರ್ದೇಶಕ ಲಾರೆನ್ಸ್ ರಾಘವನಿಗೆ ಇತ್ತೀಚೆಗೆ ಸಿನಿಮಾ ಮಂದಿ ಬೇರೆಯದೆ ರೀತಿಯಲ್ಲಿ ನೋಡುತ್ತಿದ್ದಾರೆ, ಕಾರಣ, ಕಾಮೋನ್ಮತ್ತ ಹಸಿ ಬಿಸಿ ದೃಶ್ಯಗಳಲ್ಲೇ ಸುಖ ಕಾಣುವ ಈತನ ಚಾಳಿ ಹಲವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ.

ಡ್ಯಾನ್ಸ್ ಮಾಡಿಕೊಂಡಿರುವುದನ್ನು ಬಿಟ್ಟು ನಟನೆ ಇಳಿದು ಹೇಗಿದೆ ಸಾರ್ ನನ್ನ ಆಕ್ಟಿಂಗ್ ಎಂದು ಬಾಲಚಂದರ್ ಹತ್ರಾ ಕೇಳಿ ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡಿದ್ದ ಭೂಪತಿ ಲಾರೆನ್ಸ್, ಬುದ್ಧಿ ಕಲಿಯಲೇ ಇಲ್ಲ. ರಾಜಾಧಿರಾಜ ಚಿತ್ರದಲ್ಲಿ ಮೀನಾಕ್ಷಿ ಸರ್ಕಾರ್ ಅಂಗಾಂಗಳನ್ನು ಇಂಚಿಂಚಾಗಿ ತನ್ನ ಕೈ ಬೆರಳಲ್ಲೇ ಅಳೆದ ಈತ, ಮುಂದೆ ಬೆಳಗಾವಿ ಬೆಡಗಿಲಕ್ಷ್ಮಿ ರೈ ಹಿಂದೆ ಬಿದ್ದ.

ಕಾಂಚನಾ ಚಿತ್ರದಲ್ಲಿ ಲಕ್ಷ್ಮಿ ರೈ ಜೊತೆ ಸ್ವಲ್ಪ ಜಾಸ್ತಿಗೆ ಕುಚ್ ಕುಚ್ ನಡೆಸಿಬಿಟ್ಟ. ಮಾಸ್ ಅಪೀಲ್, ಈ ರೀತಿ ಸ್ಟೆಪ್ಸ್ ಬೇಕಾಗುತ್ತದೆ ಎನ್ನುತ್ತಾ, ಟೇಕ್ ಮೇಲೆ ಟೇಕ್ ತೆಗೆದುಕೊಳ್ಳುತ್ತಾ ಮನೋ ಕಾಮನೆ ತೃಪ್ತಿ ಪಡಿಸಿಕೊಂಡುಬಿಟ್ಟ.

ಹೆಸರು ಹೇಳಲು ಇಚ್ಛಿಸದ ತಮಿಳಿನ ಹೆಸರಾಂತ ನಿರ್ದೇಶಕರು ಈತನ ಕಾಮ ಕುಣಿತದ ಪರಿ ವರ್ಣಿಸುತ್ತಾರೆ. ಲಾರೆನ್ಸ್ ಸೆಕ್ಸ್ ಮೆನಿಯಾ ಪ್ರದರ್ಶನಕ್ಕೆ ಬೇಕಂತಲೇ ಕೆಲವು ಮುಜುಗರವಾಗುವಂಥ ಕುಣಿತದ ಸ್ಟೆಪ್ಸ್ ಹಾಕಿಸುತ್ತಾನೆ. ಲಕ್ಷ್ಮಿ ರೈ ಜೊತೆ ಇದು ಸ್ವಲ್ಪ ಜೋರಾಗೆ ನಡೆಯುತ್ತದೆ. ಇಬ್ಬರು ಪರಸ್ಪರ ಎಷ್ಟೇ ಆಪ್ತರಿದ್ದರೂ ಅನಗತ್ಯವಾಗಿ ಮೈಕೈ ಮುಟ್ಟುವ...ಅದರಲ್ಲೂ ಬಿಡಿ... ಅವನ ಕೈ ನಿಮಿಷ ಕೂಡಾ ಸುಮ್ಮನಿರುವುದಿಲ್ಲ. ಯೋಜನಾಯುತವಾಗಿ ಸ್ಪರ್ಶ ಸುಖಪಡೆವ ಚತುರ ನೃತ್ಯಗಾರ ಎಂದಿದ್ದಾರೆ.

English summary
Choreographer Lawrence Raghava's moves in Kanchana movie with Lakshmi Rai is disgusting and Industry is asking is he maniac. He repeated his lewd steps with other heroines in past

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada