»   » ಎರಡು ತಾಸು ಪೊಲೀಸ್ ವಶದಲ್ಲಿದ್ದ ಜೋಗಿ ಪ್ರೇಮ್

ಎರಡು ತಾಸು ಪೊಲೀಸ್ ವಶದಲ್ಲಿದ್ದ ಜೋಗಿ ಪ್ರೇಮ್

Posted By:
Subscribe to Filmibeat Kannada

ಬೈಲ ಹೊಂಗಲ, ಏ.6 : ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ, ಚಿತ್ರ ನಿದೇಶಕ ಪ್ರೇಮ್ ಅವರನ್ನು ಪೊಲೀಸರು ಬಂಧಿಸಿ, ಸ್ಥಳೀಯ ನ್ಯಾಯಾಲಯಕ್ಕೆ ಶನಿವಾರ ಹಾಜರುಪಡಿಸಲಾಯಿತು.

ಸರಿಯಾದ ಸಮಯಕ್ಕೆ ಹಾಜರಾಗದ ಕಾರಣಕೆಲಹೊತ್ತು ಜಾಮೀನು ಅರ್ಜಿಯನ್ನು ಅರ್ಜಿಯನ್ನು ನ್ಯಾಯಾಧೀಶರು ತಿರಸ್ಕರಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ತಾಸು ಪೊಲೀಸ್ ವಶದಲ್ಲಿದ್ದ ಪ್ರೇಮ್ ನ್ಯಾಯಾಲಯಕ್ಕೆ ಮತ್ತೊಮ್ಮೆ ವಕೀಲರ ಮೂಲಕ ಮನವಿ ಸಲ್ಲಿಸಿ, ಜಾಮೀನು ಪಡೆಯುವಲ್ಲಿ ಯಶಸ್ವಿಯಾದರು. ಹತ್ತು ಸಾವಿರ ರೂ ಹಾಗೂ ಅಷ್ಟೇ ಮೌಲ್ಯದ ಭದ್ರತೆ ನೀಡಿ ಜಾಮೀನು ಪಡೆದು ಬಿಡುಗಡೆ ಹೊಂದಿದರು.

ನ್ಯಾಯಾಲಯದ ವಾರೆಂಟ್ ಗಳನ್ನು ನಿರ್ಲಕ್ಷಿಸಿದ ಬಗ್ಗೆ ಕಿರಿಯ ಶ್ರೇಣಿ ನ್ಯಾಯಾಧೀಶ ಎಸ್. ಎಂ. ಕಲ್ಕಣಿಯವರು ಪ್ರೇಮ್ ಅವರನ್ನುತರಾಟೆಗೆ ತೆಗೆದುಕೊಂಡು, ಇನ್ನು ಮುಂದೆ ನಿಗದಿಪಡಿಸಿದ ದಿನಾಂಕದಂದು ಹಾಜರಾಗುವಂತೆ ಸೂಚಿಸಿದರು. ಖ್ಯಾತ ನ್ಯಾಯವಾದು ಅಶೋಕ ಮೂಗಿ ಪ್ರೇಮ್ ಪರ ವಾದಿಸಿದರು.

ಹಿನ್ನೆಲೆ: ತುಂಟ ಚಿತ್ರ ನಿರ್ದೇಶನಕ್ಕಾಗಿ ಸ್ಥಳೀಯ ಉದ್ಯಮಿ, ನಿರ್ಮಾಪಕ ಪ್ರಕಾಶ ಸೊಗಲದ, ಪ್ರೇಮ್ ಅವರಿಗೆ ಮುಂಗಡ ಹಣ ನೀಡಿದ್ದರು. ಎರಡು ಹಾಡುಗಳ ಚಿತ್ರೀಕರಣವೂ ಆಗಿತ್ತು. ಅಷ್ಟರಲ್ಲೇ ಕೆಲ ಕಾರಣಗಳಿಂದಾಗಿ ಮುಂಗಡ ಹಣ ವಾಪಾಸ್ ಕೊಡಬೇಕಾಗಿ ಬಂತು. ಪ್ರೇಮ್ 1ಲಕ್ಷ ರೂ .ಮೊತ್ತದ ಚೆಕ್ಕನ್ನು ಸೊಗಲದವರಿಗೆ ನೀಡಿದ್ದರು. ಆದರೆ ಚೆಕ್ ಬೌನ್ಸ್ ಆಗಿ ನ್ಯಾಯಾಲಯದ ಕಟಕಟೆ ಏರುವಂತಾಯಿತು.

(ದಟ್ಸ್ ಕನ್ನಡಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada