ಮಾಡೆಲ್ ಕರೋಲಿನ್ ಬೆಲೆ 20 ಲಕ್ಷ ಅಂತೆ!

ಸಿನಿಮಾ ನಟಿಯರು ವೇಶ್ಯಾವಾಟಿಕೆ ಜಾಲದಲ್ಲಿ ಸಿಕ್ಕಿ ಬಿದ್ದಿರುವ ಪ್ರಕರಣಗಳಲ್ಲಿ ಕರೋಲಿನ್ ಮೂವರನೇ ನಟಿ ಎನ್ನಬಹುದು. ಕಳೆದ ನಾಲ್ಕು ತಿಂಗಳಲ್ಲಿ ಪುಣೆಯೊಂದರಲ್ಲೇ ಇಂಥ ನಾಲ್ಕು ಪ್ರಕರಣಗಳು ಬೆಳಕಿಗೆ ಬಂದಿತ್ತು.
ಅವಕಾಶ ಕಮ್ಮಿಯಾಯ್ತೆ?: ಚೆನ್ನೈನ ಸೈದಾಪೇಟ್ ನ ಹುಡುಗಿ ಕರೋಲಿನ್ ಗೆ ಮುಂಬೈನ ಅಂಧೇರಿಯಲ್ಲೂ ಮನೆಯಿದೆ. ಆಕೆ ನಟಿಸಿರುವ ತಮಿಳು ಚಿತ್ರಗಳಲ್ಲಿ ಹೆಚ್ಚಿನವು ತೆರೆ ಕಂಡಿಲ್ಲ. ಬೆಂಗಳೂರು, ಚೆನ್ನೈಗಳಲ್ಲಿ ಆಭರಣ, ವಸ್ತ್ರ ಉಡುಪು ಮಳಿಗೆಗಳಿಗೆ ರೂಪದರ್ಶಿಯಾಗಿ ಹೆಸರು ಗಳಿಸಿದ್ದಾಳೆ.
ಕರೋಲಿನ್ ಮಲಸೋದರ ರಾಜ್ ಕುಮಾರ್ ಛಾಯಾಗ್ರಾಹಕನಾಗಿದ್ದು, ಆಕೆ ಮಲ ತಂದೆ ರಂಜಿತ್ ಸ್ವಂತ ಸ್ಟುಡಿಯೋ ಹೊಂದಿದ್ದಾರೆ.
ಮಾಡೆಲಿಂಗ್ ಹಾಗೂ ಸಿನಿಮಾ ಅವಕಾಶಗಳು ಕಮ್ಮಿಯಾದ ಹಿನ್ನೆಲೆಯಲ್ಲಿ ಮಲಸೋದರನ ಆಕೆ ಮೇಲೆ ಒತ್ತಡ ಹೇರಿ ಮೈಮಾರಿಕೊಳ್ಳುವ ದಂಧೆಗೆ ದೂಡಿರುವ ಸಾಧ್ಯತೆಯಿದೆ ಎನ್ನಲಾಗಿದೆ.
ಫೈವ್ ಸ್ಟಾರ್ ಹೋಟೆಲ್ ಗಳಲ್ಲೇ ವಾಸ್ತವ್ಯ ಹೂಡುವ ಕರೋಲಿನ್ ಹಾಗೂ ಆಕೆ ಗ್ಯಾಂಗ್ ಗ್ರಾಹಕರಿಗೆ 2 ಗಂಟೆಗೆ 2 ಲಕ್ಷ ರೂನಂತೆ ಛಾರ್ಜ್ ಮಾಡುತ್ತಿದ್ದರು. ಎರಡು ರೂಮ್ ಬುಕ್ ಮಾಡಲಾಗುತ್ತಿತ್ತು. ಎಲ್ಲವನ್ನೂ ಕರೋಲಿನ್ ಮಲತಂದೆ ರಾಜ್ ಕುಮಾರ್ ಯೋಜಿಸುತ್ತಿದ್ದ ಎಂದು ಇನ್ಸ್ ಪೆಕ್ಟರ್ ಬರ್ಗೆ ವಿವರಿಸಿದ್ದಾರೆ.


Click it and Unblock the Notifications











