»   » ಶಂಕರಾಚಾರ್ಯ... ಕೂಡದು ಕೂಡದು!

ಶಂಕರಾಚಾರ್ಯ... ಕೂಡದು ಕೂಡದು!

Posted By:
Subscribe to Filmibeat Kannada
G Murthy
ನಿರ್ದೇಶಕ ಜಿ.ಮೂರ್ತಿ ತಮ್ಮ ಹೊಸ ಚಿತ್ರಕ್ಕೆ ಶಂಕರಾಚಾರ್ಯ ಅಂತ ಹೆಸರಿಟ್ಟಿದ್ದರು. ಇದು ಆದಿ ಶಂಕರಾಚಾರ್ಯ ಅವರನ್ನು ಕುರಿತ ಸಿನಿಮಾ ಅಲ್ಲ ಅಂತಲೂ ಮುಹೂರ್ತಕ್ಕೆ ಮೊದಲೇ ಸ್ಪಷ್ಟಪಡಿಸಿದ್ದರು. ಆದರೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಂದಿಯನ್ನು ಈ ಹೆಸರು ಕೆರಳಿಸಿದೆ. ಶಂಕರಾಚಾರ್ಯ ಅಂದರೆ ಆದಿ ಶಂಕರಾಚಾರ್ಯರೆಂದೇ ಎಲ್ಲರೂ ಭಾವಿಸುವುದು ಅನ್ನೋದು ಅವರ ವಾದ.

ಬ್ರಾಹ್ಮಣ ಮಹಾಸಭಾ ಸುಮ್ಮನಿರದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರಿತ್ತಿದೆ. ಶಂಕರಾಚಾರ್ಯ ಅನ್ನುವ ಹೆಸರನ್ನು ಬದಲಿಸಿ ಎಂಬ ಸೂಚನೆ ಬಂದಿದ್ದೇ, ಮೂರ್ತಿ ಶಂಕರ ಪುಣ್ಯಕೋಟಿ ಅಂತ ಬದಲಿಸಿದ್ದಾರೆ. ಇದು ಅನಿವಾರ್ಯ ಬದಲಾವಣೆಯಾದರೂ ಮೂರ್ತಿ ಅದನ್ನು ಮೆಚ್ಚಿಯೇ ಇಟ್ಟಿದ್ದಾರೆ.

ಸುಮ್ಮನೆ ವಿವಾದವಾಗಿ ಈ ಸಂಗತಿಯನ್ನು ಜಗ್ಗುವುದು ಅವರಿಗೆ ಇಷ್ಟವಿರಲಿಲ್ಲವಂತೆ. ಹೆಸರು ಬದಲಿಸಿದರೇನು, ಸಿನಿಮಾ ಉದ್ದೇಶ ಹಾಗೇ ಇರುತ್ತದಲ್ಲ ಎಂಬ ಸಮಾಧಾನ ಮೂರ್ತಿಯವರಿಗೆ. ಮೇಲಾಗಿ ಈ ಹೆಸರು ಚಿತ್ರಕ್ಕೆ ಇನ್ನೂ ಚೆನ್ನಾಗಿ ಒಪ್ಪುತ್ತದೆ ಎಂದು ನಾಯಕ ಶರತ್‌ಬಾಬು ಸಮರ್ಥನೆಯ ಮುದ್ರೆ ಒತ್ತಿದರು. ಈಗಾಗಲೇ ಚಿತ್ರೀಕರಣ ಮುಗಿಸಿರುವ ಶಂಕರ ಪುಣ್ಯಕೋಟಿ ಡಬಿಂಗ್ ಕೆಲಸವನ್ನೂ ಮುಗಿಸುವ ಹಂತದಲ್ಲಿದೆ. ಎಲ್ಲಾ ಅಂದುಕೊಂಡಂತೆ ಆದರೆ, ಮುಂದಿನ ತಿಂಗಳ ಹೊತ್ತಿಗೆ ಮೊದಲ ಪ್ರತಿ ಕೈಗೆ ಸಿಗಲಿದೆ. ಅರ್ಚಕನೊಬ್ಬನ ಗೋಪ್ರೀತಿಯನ್ನು ಸಿನಿಮಾ ಸಾರುತ್ತದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada