For Quick Alerts
ALLOW NOTIFICATIONS  
For Daily Alerts

  ಪೋಲಿ ಕನ್ನಡ ಸಿನಿಮಾ -2

  By Staff
  |
  • ನಿರಂಜನ ಮೂರ್ತಿ
  ಆ ಹದಿನೈದು ನಿಮಿಷ ಏನಿರುತ್ತದೆ?

  ಸೆನ್ಸಾರ್‌ ಮಂಡಳಿ ಕಣ್ಣಿಗೆ ಬೀಳದ ಅದೇ ಚಿತ್ರದ ತಾರಾಬಳಗದ ಬೆತ್ತಲೆ ದರ್ಶನ ನಡೆಯುವುದು ಈ ಹದಿನೈದು ನಿಮಿಷದಲ್ಲೇ. ಇದೊಂದು ಉದಾಹರಣೆ ಅಷ್ಟೆ. ಇದೇ ರೀತಿ ಚಿತ್ರಪ್ರದರ್ಶನದ ನಡುವೆ ಯಾವುದೋ ಒಂದಷ್ಟು ಕ್ಷಣ ನೀಲಿ ಚಿತ್ರಗಳನ್ನು ತೋರಿಸುವ ಚಿತ್ರಮಂದಿರಗಳೂ ಇಲ್ಲದಿಲ್ಲ.

  ಇಂಥಾ ಚಿತ್ರಗಳನ್ನು ತೋರಲೆಂದೇ ಇರುವ ಚಿತ್ರಮಂದಿರದವರ ಷರತ್ತೇನೆಂದರೆ, ಅದರಲ್ಲಿ ಕನಿಷ್ಠ 10 ನಿಮಿಷದಷ್ಟಾದರೂ ಅತಿ ಕಾಮಕೇಳಿ ಇರಬೇಕು. ಆ ದೃಶ್ಯಗಳಲ್ಲಿ ನಾಯಕಿ ಕನಿಷ್ಠ ಮುಕ್ಕಾಲು ಭಾಗ ಬೆತ್ತಲಾಗಬೇಕು. ಹೀಗಾಗಿ ಚಿತ್ರ ತೆಗೆಯುವವರು ತಮ್ಮ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಸ್ಪಂದಿಸುವ ಚಿತ್ರಮಂದಿರಗಳ ಮಾಲೀಕರ ಕರೆಯನ್ನು ಕಣ್ಣಿಗೊತ್ತಿಕೊಂಡು, ಅಧ್ವಾನದ ಕೆಲಸಗಳಿಗೆ ಕೈಹಾಕುತ್ತಾರೆ.

  ನಾಯಕಿ ಯಾರು ಇಂಥ ಕಥೆಗೆ?

  ಒಂದೊಮ್ಮೆ ಅವಕಾಶಕ್ಕಾಗಿ ಹಪಾಹಪಿಸುತ್ತಿದದ ಕಿರುತೆರೆಯ ಅನೇಕ ಕಲಾವಿದೆಯರನ್ನು ದುರುಪಯೋಗಪಡಿಸಿಕೊಂಡು ಸೆಕ್ಸ್‌ ಚಿತ್ರಗಳನ್ನು ಹೊಸೆದಿರುವ ಉದಾಹರಣೆಗಳಿವೆ. ಇವತ್ತು ಜನಪ್ರಿಯವಾಗಿರುವ ಮಾಧುರಿ, ಮರೀನಾ ತಾರ ಮೊದಲಾದವರು ಚೆಂದದ ಚಿತ್ರದಲ್ಲಿ ತಾವು ನಟಿಸುತ್ತೇವೆ ಎಂಬ ಭ್ರಮೆಯಲ್ಲಿ ಕದ್ದಿಟ್ಟಿದ್ದ ಕ್ಯಾಮರಾ ಕಣ್ಣಿಗೆ ಸಿಲುಕಿ ಮಾನ ಕಳೆದುಕೊಂಡ ಪ್ರಸಂಗಗಳಾಗಿದ್ದವು. ಆದರೆ ಆಮೇಲೆ ಎಚ್ಚೆತ್ತುಕೊಂಡ ಈ ನಟೀಮಣಿಯರು ಇವತ್ತು ಕಿರುತೆರೆಯಲ್ಲಿ ಸಂಭಾವಿತರ ಸ್ವರೂಪವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

  ಸಾಕಷ್ಟು ಚಿತ್ರಗಳಲ್ಲಿ ಹಾಸ್ಯನಟಿ ಹಾಗೂ ಪೋಷಕ ಕಲಾವಿದೆಯಾಗಿ ಅಭಿನಯಿಸಿರುವ ರೇಖಾದಾಸ್‌, ಬದರಿಪ್ರಸಾದ್‌ ಎಂಬ ಇನ್ನೊಬ್ಬ ಕಿರುತೆರೆ ಕುಳವನ್ನು ಮದುವೆಯಾದರು. ಅವರು ಮದುವೆಯಾದ ನಂತರದ ಮಧುಚಂದ್ರ ಅದೇ ಹೆಸರಿನಲ್ಲಿ ಚಿತ್ರವಾಗಿಹೋಯಿತು ! ರೇಖಾದಾಸ್‌ ಸಾಕಷ್ಟು ಹಸಿಬಿಸಿ ಚಿತ್ರಗಳಲ್ಲಿ ನಟಿಸಿದ್ದು, ಅನೇಕ ಚಿತ್ರಗಳು ಈಗ ಬೆಳಕು ಕಾಣುತ್ತಿವೆ.

  ಅಚ್ಚರಿ ಹುಟ್ಟಿಸುವ ಇನ್ನೊಂದು ಸಂಗತಿಯೆಂದರೆ ಅವಿನಾಶ್‌ ಥರದ ಸಂಭಾವಿತರೂ ಇಂತಹ ಚಿತ್ರಗಳ ಜಾಲದಲ್ಲಿ ಗೊತ್ತೇ ಇಲ್ಲದಂತೆ ಸಿಕ್ಕಿರುವುದು. ಒಂದೊಮ್ಮೆ ಅವರ ಗಮನಕ್ಕೆ ಈ ವಿಷಯ ತಂದಾಗ, ‘ಅದೊಂದು ಆ್ಯಕ್ಷನ್‌ ಚಿತ್ರ ಅಂತ ತಮ್ಮ ಕೈಲಿ ಇನ್ಸ್‌ಪೆಕ್ಟರ್‌ ಪಾತ್ರ ಮಾಡಿಸಿದ್ದರು. ಆದರೆ ಅದು ಅಧ್ವಾನದ ಚಿತ್ರ ಅಂತ ಗೊತ್ತಾದದ್ದೇ ಅದು ತೆರೆ ಕಂಡಾಗ’ ಅಂದರು.

  ಕನ್ನಡದಲ್ಲಿ ಈ ದಂಧೆ ಹರಳುಗಟ್ಟುವ ಮುನ್ನ ಮಲೆಯಾಳಿ ಹೆಂಗಸು- ಗಂಡಸರನ್ನೇ ಬಳಸಿಕೊಳ್ಳಲಾಗುತ್ತಿತ್ತು. ಆದರೆ ಆಮೇಲೆ ಸ್ಥಳೀಯ ವಾಸನೆ ಬಡಿಯತೊಡಗಿತು. ವೇಶ್ಯಾವಾಟಿಕೆಯಲ್ಲಿ ನಿರತರಾಗಿರುವ ಕೆಲವು ಹೆಂಗಸರಿಗೆ ಹಣ ಮಾಡಿಕೊಳ್ಳಲು ಇಂಥಾ ಚಿತ್ರಗಳು ಇನ್ನೊಂದು ವಾಮಮಾರ್ಗವಾಯಿತು. ಈ ದಂಧೆಯ ಗಾಢತೆ ಎಷ್ಟರಮಟ್ಟಿಗೆ ಇದೆಯೆಂದರೆ, ಬ್ಯಾಂಕ್‌ ಜನಾರ್ದನ್‌ನಂಥಾ ಮೇನ್‌ಸ್ಟ್ರೀಮ್‌ ನಟ ಕೂಡ ಹಾಸಿಗೆ ದೃಶ್ಯದ ಸಿನಿಮಾಗಳಲ್ಲಿ ಪಾಲ್ಗೊಂಡ. ಡಬ್ಬಲ್‌ ಮೀನಿಂಗ್‌ ಸಂಭಾಷಣೆ ಬರೆಯುತ್ತಿದ್ದ ಕುಣಿಗಲ್‌ ನಾಗಭೂಷಣ್‌ ಮಗ ಭರತ್‌ ಭೂಷಣ್‌ ರತಿ ವಿಜ್ಞಾನದ ಸುರತಿ ಕಥೆಯ ನಾಯಕನಾದ ! ಇವರನ್ನೆಲ್ಲ ನೋಡಿಕೊಂಡು ಅಭಿನವ ಕಾಮಣ್ಣ ಮದನ್‌ ಪಟೇಲ್‌ ಸುಮ್ಮನಿರಲಾದೀತೇ ; ತಮ್ಮ ಹಳೆಯ ಗೆಳೆಯರ ಕೈಲಿ ದುಡ್ಡು ಹಾಕಿಸಿ, ಒಂದಷ್ಟು ಹೆಂಗಸರಿಗೆ ಖುದ್ದು ತಾವೇ ಅಮೃತಾಂಜನ ತಿಕ್ಕಿದರು. ಅದನ್ನು ಚಿಕ್ಕಾಸೂ ಅವಮಾನವಿಲ್ಲದೆ ತೆರೆಗೂ ತಂದುಬಿಟ್ಟರು. ಇವತ್ತು ಸಭ್ಯರಂತೆ ತಮ್ಮ ಕುಟುಂಬದ ಕಲಾ ಪರಂಪರೆಯ ಬಗ್ಗೆ ಭಾಷಣ ಹೊಡೆಯುತ್ತಾರೆ. ತಮ್ಮ ತಾತ ಮೈಸೂರು ಅರಮನೆಯಲ್ಲಿ ಸಂಗೀತಗಾರರಾಗಿದ್ದರು ಅಂತ ಕೊಚ್ಚಿಕೊಳ್ಳುತ್ತಾರೆ.

  ಕಡಿಮೆ ಪರಿಕರ, ಶೂಟಿಂಗ್‌ ಸರಸರ

  ಕಥೆ ಇರಲೇಬೇಕು ಅಂತೇನೂ ಇಲ್ಲ. ಒಂದಷ್ಟು ಹುಡುಗಿಯರು, ಒಬ್ಬ ಹುಡುಗ ಸಾಕು. ಒಂದು ಮಂಚ ಇದ್ದರೆ ಚೆನ್ನ. ಇರದಿದ್ದರೆ ಚಾಪೆಯಾದರೂ ಆದೀತು ಎಂಬ ಲೆಕ್ಕಾಚಾರದೊಂದಿಗೆ ಇಂಥಾ ಚಿತ್ರಗಳು ಹುಟ್ಟುತ್ತವೆ. ಎಷ್ಟೋ ಚಿತ್ರಗಳಿಗೆ ನಿರ್ಮಾಪಕರೇ ನಾಯಕರು. ಕೆಲವು ಸಂಗೀತ ಪ್ರಿಯರು ಮಂಜುಳಾ ಗುರುರಾಜ್‌, ಬಿ.ಆರ್‌.ಛಾಯಾ ಅವರಂಥ ಹಾಡುಗಾರ್ತಿಯರಿಂದ ಇಂಥಾ ಚಿತ್ರಗಳಿಗೆ ಹಾಡಿಸಿರುವ ಉದಾಹರಣೆಗಳೂ ಇವೆಯೆಂದರೆ, ಈ ನಿರ್ಮಾಪಕರು ಎಂತೆಂಥವರಿಗೆ ಮೋಸ ಮಾಡಿರಬಹುದೆಂಬುದು ಅಂದಾಜಿಗೆ ಸಿಕ್ಕುತ್ತದೆ.

  ಗೋಪಾಲ್‌ ಚಿತ್ರಮಂದಿರದ ಸಿಬ್ಬಂದಿಯ ಪೈಕಿ ಒಬ್ಬ ಈ ಚಿತ್ರಗಳ ಭರಾಟೆಯಿಂದ ಬೇಸತ್ತಿದ್ದಾರೆ. ಮೊದಲು ಚೆಂದದ ಕನ್ನಡ ಚಿತ್ರಗಳು ಇಲ್ಲಿ ಬಿಡುಗಡೆಯಾಗುತ್ತಿದ್ದವು. ಆಗ ಹಬ್ಬದ ಕಳೆಯಿತ್ತು. ಗೋಪಾಲ್‌ ಚಿತ್ರಮಂದಿರಕ್ಕೆ ಒಂದು ಸಾಂಸ್ಕೃತಿಕ ಮೆರುಗು ಇತ್ತು. ಅದೇ ಕಾರಣಕ್ಕೆ ಅಸುರ ಚಿತ್ರದ ಒಂದೆರಡು ದೃಶ್ಯವನ್ನು ಇಲ್ಲಿ ಶೂಟ್‌ ಮಾಡಿಕೊಂಡಿದ್ದರು. ಆದರೆ ಈಗ ಅಧ್ವಾನದ ಚಿತ್ರಗಳು ಬಂದು ಇಡೀ ವ್ಯವಸ್ಥೆಯ ಆರೋಗ್ಯ ಕೆಟ್ಟುಹೋಗಿದೆ. ಒಂದು ಕಾಲೇಜು, ಒಂದು ಕಲ್ಯಾಣ ಮಂಟಪ, ಮಾರ್ಕೆಟ್ಟು ಇರುವ ಕಡೆಯೆಲ್ಲ ಇಂಥ ಚಿತ್ರಗಳನ್ನು ತೋರಿಸುವ ಟೆಂಟು/ಥಿಯೇಟರುಗಳನ್ನು ಹುಟ್ಟುಹಾಕುವ ದೊಡ್ಡ ಪಡೆಯೇ ನಿರ್ಮಾಣವಾಗಿದೆ. ಮೊದಲು ಮೆಜೆಸ್ಟಿಕ್ಕಿನ ಸುತ್ತಮುತ್ತಲ ಚಿತ್ರಮಂದಿರಗಳಲ್ಲಿ ತೋರಿಸುತ್ತಿದ್ದ ಚಿತ್ರಗಳು ಈ ಪಾಟಿ ಅಧ್ವಾನವಾಗಿರಲಿಲ್ಲ. ಮಲೆಯಾಳಂ ಸಿನಿಮಾಗಳನ್ನು ನೋಡಿ ನೋಡಿ ನಮ್ಮವರೂ ಕೆಟ್ಟು ಹೋದರು ಅಂತ ಆ ವ್ಯಕ್ತಿ ಅಲವತ್ತುಕೊಳ್ಳುತ್ತಾರೆ.

  ಇವತ್ತೂ ಹಳೇ ಸೆಂಟ್ರಲ್‌ ಜೈಲಿನ ಹಿಂಭಾಗದ ಗಾಂಧಿನಗರ ಪ್ರದೇಶದಲ್ಲಿ ಪದೇಪದೇ ಅಡ್ಡಾಡಿದರೆ ಇಂತಹ ಸಿನಿಮಾ ತೆಗೆಯುವ ಅಪಾಯಕಾರಿ ಸ್ನೇಹಿತರನ್ನು ನೀವು ಎಡವುತ್ತೀರಿ. ಇವರು ಸುಂದರ ಹೆಂಗಸರಿಗಷ್ಟೇ ಅಲ್ಲ, ಸ್ಫುರದ್ರೂಪಿ ಹುಡುಗರ ತಲಾಷಿನಲ್ಲೂ ಇರುತ್ತಾರೆ, ಎಚ್ಚರ !

  Post your views

  ಪೂರ್ವಾರ್ಧ
  ಪೋಲಿ ಕನ್ನಡ ಸಿನಿಮಾ -1


  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more