»   » ಮಲ್ಲು ನನಗೇನೂ ಮಾಡ್ಲಿಲ್ಲ-ಅನುಪ್ರಭಾಕರ್‌

ಮಲ್ಲು ನನಗೇನೂ ಮಾಡ್ಲಿಲ್ಲ-ಅನುಪ್ರಭಾಕರ್‌

Posted By:
Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

‘ಓಕೆ ಸಾರ್‌ ಓಕೆ’ ಚಿತ್ರದ ನಾಯಕಿಯರಾದ ರಶ್ಮಿ ಹಾಗೂ ಮೋನಿಕಾ ಎನ್ನುವ ನಟಿಯರ ಮುಖಕ್ಕೆ ಆಸಿಡ್‌ ಎರಚುವುದಾಗಿ ಮದನ್‌ ಪಟೇಲ್‌ ಅಲಿಯಾಸ್‌ ಮದನ್‌ ಮಲ್ಲು ಎನ್ನುವ ಸುರ ಸುಂದರಾಂಗ ಹಾಗೂ ನಾಯಕ- ನಿರ್ಮಾಪಕ ಗುಟುರು ಹಾಕಿದ್ದು ಊರುಕೇರಿಗೆಲ್ಲಾ ಹಳೆಯ ಸುದ್ದಿ. ಆದರೆ ‘ಓಕೆ ಸಾರ್‌ ಓಕೆ’ ಚಿತ್ರದ ಇನ್ನೊಬ್ಬ ನಾಯಕಿ ಅನು ಪ್ರಭಾಕರ್‌ಗೆ ಮಾತ್ರ ವಿಷಯದ ಬಗ್ಗೆ ಒಂಚೂರೂ ಗೊತ್ತಿಲ್ಲ . ನಂಬಿದ್ರೆ ನಂಬಿ ಬಿಟ್ರೆ ಬಿಡಿ !

ಮೊನ್ನೆ ಚನ್ನಪಟ್ಟಣ ಸಮೀಪದ ಮಾಲೂರಿನಲ್ಲಿ ‘ಅರ್ಧಾಂಗಿ’ ಚಿತ್ರದ ಶೂಟಿಂಗ್‌ ಸಂದರ್ಭದಲ್ಲಿ ಮಾತಿಗೆ ಸಿಕ್ಕಿದ ಅನು ಪ್ರಭಾಕರ್‌- ಮದನ್‌ ಅವಾಂತರಗಳ ಬಗ್ಗೆ ತಮಗೆ ಏನೇನೂ ಗೊತ್ತಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಮಲ್ಲು ನನ್ನ ಹತ್ತಿರ ಚೆನ್ನಾಗಿಯೇ ನಡೆದುಕೊಂಡಿದ್ದರು. 22 ದಿನ ಶೂಟಿಂಗ್‌ನಲ್ಲಿ ಭಾಗವಹಿಸಿದ್ದೇನೆ. ನನಗೇನೂ ತೊಂದರೆಯಾಗಿಲ್ಲ . ‘ಓಕೆ ಸಾರ್‌ ಓಕೆ’ ಚಿತ್ರೀಕರಣದ ದಿನಗಳನ್ನು ಖುಷಿಯಾಗಿಯೇ ಕಳೆದಿರುವೆ ಎಂದು ಅನು ನಗುನಗುತ್ತಲೇ ಹೇಳಿದರು.ಒಂದು ವೇಳೆ, ಮೋನಿಕಾ ಹಾಗೂ ರಶ್ಮಿ ಎನ್ನುವ ನಾಯಕಿಯರಿಗೆ ಮದನ್‌ ಮಲ್ಲು ಬೆದರಿಕೆ ಒಡ್ಡಿದ್ದರೆ ಅದು ತಪ್ಪು , ಖಂಡನಾರ್ಹ ಎಂದು ಹೇಳಲು ಅನು ಮರೆಯಲಿಲ್ಲ . ಚಿತ್ರರಂಗದಲ್ಲಿ ಶಾಂತಿ ಎನ್ನುವುದು ಬಹಳ ಮುಖ್ಯ ಎಂದು ಈ ಶಾಂತಿದೂತೆ ಹೇಳಿದರು.

ಅಂದಹಾಗೆ, ಅನು ಪ್ರಭಾಕರ್‌ ಇತ್ತೀಚೆಗೆ ಸ್ವಲ್ಪ ದಪ್ಪಗಾಗಿದ್ದಾರೆ.


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada