»   » ಅಳಿಯ ಅಲ್ಲ ಮಗಳ ಗಂಡ ಎಂದು ಬಣ್ಣಿಸಿದ ಜಗ್ಗೇಶ!

ಅಳಿಯ ಅಲ್ಲ ಮಗಳ ಗಂಡ ಎಂದು ಬಣ್ಣಿಸಿದ ಜಗ್ಗೇಶ!

Posted By:
Subscribe to Filmibeat Kannada


ಸಿಐಡಿ ಈಶಚಿತ್ರವನ್ನು ರೀಮೇಕ್ ಚಿತ್ರವೆಂದು ಕರೆದು ಅವಮಾನ ಮಾಡಬೇಡಿ ಎಂದು ನಟ ಜಗ್ಗೇಶ್ ಪತ್ರಕರ್ತರನ್ನು ಕೇಳಿಕೊಂಡಿದ್ದಾರೆ.

ಇದು ಮಲಯಾಳಂ ಚಿತ್ರ ಸಿಐಡಿ ಮೂಸದ ರೀಮೇಕ್ ಎಂದು ದಯವಿಟ್ಟು ಹುಯಿಲೆಬ್ಬಿಸಬೇಡಿ. ಒಂದು ನಾಲ್ಕೈದು ಚಿತ್ರಗಳನ್ನು ನೋಡಿ ಸ್ಪೂರ್ತಿ ಪಡೆದು ಈ ಚಿತ್ರ ತಯಾರಾಗುತ್ತಿದೆ. ಮಿಸ್ಟರ್ ಬೀನ್ ಸಹಾ ನಮಗೆ ಸ್ಪೂರ್ತಿ ನೀಡಿದ್ದಾನೆ. ಇದನ್ನು ಬೇಕಿದ್ದರೆ ರೀಮಿಕ್ಸ್ ಚಿತ್ರವೆಂದು ಕರೆಯಬಹುದು ಎನ್ನುತ್ತಾರೆ ಜಗ್ಗೇಶ್. ಅಳಿಯ ಅಲ್ಲ ಮಗಳು ಗಂಡ ಅಂದರೆ ಇದೆ ಏನೋ ಅಲ್ವಾ ಜಗ್ಗೇಶ್?

ಮನ್ಮಥ ಚಿತ್ರದ ನಿರ್ದೇಶಕ ರಾಜೇಂದ್ರ ಫರ್ನಾಂಡಿಸ್, ಈ ಸಿಐಡಿ ಈಶಚಿತ್ರದ ರೀಲ್ ಸುತ್ತಲು ಮುಂದಾಗಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಈ ಚಿತ್ರಕ್ಕೆ ಕ್ಲಾಪ್ ಮಾಡಿದ್ದು ರೀಮೇಕ್ ಕಿಂಗ್ ಎಸ್.ನಾರಾಯಣ್ ಎಂಬುದು ಇನ್ನೊಂದು ವಿಶೇಷ!

ರೀಮೇಕೋ, ಮಣ್ಣು ಮಸಿಯೋ ಜೇಬಿಗೆ ದುಡ್ಡು ಬಂದರೆ ಸಾಕು ಎಂಬ ಧೋರಣೆ ಹೊಂದಿರುವ ಜಗ್ಗೇಶ್, ತಮ್ಮ ಸಂಭಾವನೆಯನ್ನು ಏಕಾಏಕಿ ಹೆಚ್ಚಿಸಿಕೊಂಡಿದ್ದಾರೆ. ಅಭಿನಯದ ಜೊತೆಗೆ ಚಿತ್ರಮಂದಿರ ಕೊಡಿಸೋದು, ಚಿತ್ರಕ್ಕೆ ಸಂಬಂಧಿಸಿದ ತರ್ಲೆಗಳ ಬಗೆ ಹರಿಸೋ ಕೆಲಸಗಳನ್ನು ಸಹಾ ಜಗ್ಗೇಶ್ ಮಾಡುತ್ತಿದ್ದಾರೆ. ಹೀಗೆಂದು ಅವರೇ ಹೇಳಿಕೊಂಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada