ಅಯ್ಯಪ್ಪನ ಪಾದಸ್ಪರ್ಶ ಪ್ರಕರಣಕ್ಕೆ ಹೈಕೋರ್ಟ್ ತೆರೆ!
ವಿವಾದದಿಂದ ಕಂಗೆಟ್ಟಿದ ನಟಿ ಜಯಮಾಲಾಗೀಗ ಸಮಾಧಾನ
ಈ ಹಿನ್ನೆಲೆಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ನ್ಯಾಯಾಲಯ ಕಡೆಗೂ ನನಗೆ ನ್ಯಾಯ ನೀಡಿದೆ. ನನ್ನನ್ನು ಕೆಲವರು ಈ ಪ್ರಕರಣದಲ್ಲಿ ಬಲಿಪಶು ಮಾಡಲು ಹುನ್ನಾರ ನಡೆಸಿದ್ದರು. ಸತ್ಯ ಹೇಳಿದ್ದೇ ತಪ್ಪೇ ಎಂದು ಅವರು ಈ ಸಂದರ್ಭದಲ್ಲಿ ಪ್ರಶ್ನಿಸಿದರು.
ದೇವಸ್ಥಾನ ಸಮಿತಿ ಮತ್ತು ತಮ್ಮ ನಡುವಿನ ಪತ್ರ ವ್ಯವಹಾರದ ದಾಖಲೆಗಳನ್ನು ಸುದ್ದಿಗಾರರ ಮುಂದಿಟ್ಟ ಜಯಮಾಲಾ, ನಾನು ಸುಳ್ಳಿಯಲ್ಲ ಎಂದು ಒತ್ತಿಒತ್ತಿ ಹೇಳಿದರು.
ಕೇರಳ ಕೋರ್ಟ್‌ನಲ್ಲಿ ನೆಮ್ಮದಿ : ಅಯ್ಯಪ್ಪ ದೇವಸ್ಥಾನವನ್ನು ಜಯಮಾಲಾ ಪ್ರವೇಶ ಮಾಡಿದ್ದರ ಬಗ್ಗೆ ಜಾಗೃತದಳದಿಂದ ತನಿಖೆ ನಡೆಸಬೇಕು. ಹೊಸದಾಗಿ ದೇವಪ್ರಶ್ನೆ ನಡೆಸಬೇಕು ಎಂದು ಸಲ್ಲಿಸಲಾಗಿದ್ದ ಆರು ಅರ್ಜಿಗಳನ್ನು , ಹೈಕೋರ್ಟ್ ತಳ್ಳಿಹಾಕಿದೆ. ದೇವಪ್ರಶ್ನೆ ಕಾನೂನು ಬದ್ಧವಾಗಿಯೇ ನಡೆದಿದೆ ಎಂದು ಅದು ಅಭಿಪ್ರಾಯಪಟ್ಟಿದೆ.
‘ನಟಿ ಜಯಮಾಲಾ ಅವರನ್ನು ಬಂಧಿಸಬೇಕು. ಅವರು ದೈವದ್ರೋಹಿ’ ಎಂಬ ಹೇಳಿಕೆಗಳು ಭಕ್ತರ ಸಮುದಾಯದಲ್ಲಿ ಮತ್ತು ಕೇರಳ ಸರ್ಕಾರದ ಪ್ರಮುಖರಿಂದ ಕೇಳಿಬಂದಿದ್ದವು. ಅವರ ಬಂಧನಕ್ಕೆ ಪ್ರಯತ್ನಗಳು ನಡೆದಿದ್ದವು. ಹೈಕೋರ್ಟ್ ನಿರ್ಧಾರ, ಈ ಪ್ರಕರಣಕ್ಕೆ ಸದ್ಯಕ್ಕೆ ತೆರೆ ಎಳೆದಿದೆ.
(ಏಜನ್ಸೀಸ್)


Click it and Unblock the Notifications











