»   » ಲಕ್ಷ್ನಿರೈ,ಧೋನಿ ನಡುವೆ ಆ ರೀತಿಯ ಸಂಬಂಧ ಇಲ್ಲವಂತೆ!

ಲಕ್ಷ್ನಿರೈ,ಧೋನಿ ನಡುವೆ ಆ ರೀತಿಯ ಸಂಬಂಧ ಇಲ್ಲವಂತೆ!

Subscribe to Filmibeat Kannada

ನನ್ನ ಮತ್ತು ಕ್ರಿಕೆಟಿಗ ಮಹೇಂದ್ರ ಸಿಂಗ್ ಧೊನಿ ನಡುವೆ ನೀವು ತಿಳಿದುಕೊಂಡಂತೆ ಯಾವುದೇ ವಿಧವಾದ ಸಂಬಂಧ ಇಲ್ಲ ಎಂದು ಬೆಳಗಾವಿ ಸುಂದರಿ ಲಕ್ಷ್ಮಿ ರೈ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.

ಲಕ್ಷ್ಮಿ ರೈ ಹಾಗೂ ಧೋನಿ ನಡುವೆ ಎಂಥದೋ ಅನ್ಯೋನ್ಯ ಸಂಬಂಧ ಇದೆ ಹಾಗೂ ವಾರದ ಹಿಂದೆ ಅವರಿಬ್ಬರೂ ಯಾವುದೋ ಸಮುದ್ರ ತೀರದ ಪಂಚತಾರಾ ಹೋಟೆಲ್‌ನಲ್ಲಿ ಕೆಲಕಾಲ ವಿಶ್ರಾಂತಿ ಸಹ ಪಡೆದಿದ್ದರು ಎಂದು ಮಾಧ್ಯಮಗಳು ಗುಸುಗುಸು ಸುದ್ದಿಗಳನ್ನು ಬಿತ್ತರಿಸಿದ್ದವು. ಹಾಗೆಯೇ ಲಕ್ಷ್ಮಿ ರೈ ಹುಟ್ಟುಹಬ್ಬಕ್ಕೆ ಧೋನಿ ಆಕೆಯ ಮನೆ ತನಕ ಹೋಗಿ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿ ಹೊತ್ತು ಮುಳುಗುವರೆಗೂ ಅವರ ಮನೆಯಲ್ಲೇ ಇದ್ದರೆಂದು ಬಂದ ಬಿಸಿಬಿಸಿ ಸುದ್ದಿ ಬಗ್ಗೆ ಲಕ್ಷ್ಮಿ ರೈ ಹೀಗೆ ಪ್ರತಿಕ್ರಿಯಿಸಿ ತಣ್ಣೀರೆರಚಿದ್ದಾರೆ.

ಚೆನ್ನೈನ ಎಂಎಸಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್‌ನ ಸಾರಥಿ ಧೋನಿ ಆಡಿದ ಅಷ್ಟೂ ಆಟಗಳನ್ನು ಲಕ್ಷ್ಮಿರೈಖುದ್ದು ಬಂದು ನೋಡಿ ಧೋನಿ ಮತ್ತು ಆತನ ತಂಡವನ್ನ್ನು ಹುರಿದುಂಬಿಸಿದ್ದಾರೆ. ಕದ್ದೂ ಮುಚ್ಚಿಯಲ್ಲದಿದ್ದರೂ ಬಹಿರಂಗವಾಗಿ ಹೀಗೆ ಇವರಿಬ್ಬರನ್ನೂ ನೋಡಿದ ಮಾಧ್ಯಮಗಳ ಪಂಚೇಂದ್ರಿಯಗಳು ಸುಮ್ಮನಿರಲು ಸಾಧ್ಯವೆ? ಹಾಗಾಗಿ ಇವರಿಬ್ಬರ ನಡುವಿನ ಅನ್ಯೋನ್ಯ ಸಂಬಂಧವನ್ನು ಆಗಿಂದಾಗ್ಗೆ ವರದಿ ಮಾಡಿದವು.

ಮಾಧ್ಯಮಗಳು ಸದಾ ನನ್ನ ಬಗ್ಗೆ ಪಕ್ಷಪಾತದ ಧೋರಣೆ ತಾಳುತ್ತಿವೆ. ಮೊದಲೆಲ್ಲಾ ನನ್ನ ಹಾಗೂ ನನ್ನ ಸಹ ನಟರ ಬಗ್ಗೆ ವಿಶೇಷ ಲೇಖನಗಳನ್ನು ಪ್ರಕಟಿಸಿ ಏನೇನೋ ಸಂಬಂಧಗಳನ್ನು ಹುಟ್ಟುಹಾಕಿದ್ದವು. ಈಗ ಆ ಸ್ಥಾನದಲ್ಲಿ ಕ್ರಿಕೆಟಿಗ ಧೋನಿಯನ್ನು ತಂದು ನಿಲ್ಲಿಸಿದ್ದಾರೆ. ಈ ರೀತಿಯ ಗುಸುಗುಸು ಸುದ್ದಿಗಳು ಮಾಧ್ಯಮಗಳಿಗೆ ಹೇಗೆ ದೊರೆಯುತ್ತವೆ ಎನ್ನ್ನುವುದು ನನಗಂತೂ ಗೊತ್ತಿಲ್ಲ. ಧೋನಿಯಂತಹ ಉತ್ತಮ ಕ್ರೀಡಾಪಟುಗಳೊಂದಿಗೆ ಗೆಳೆತನ ಗಳಿಸುವುದು ತಪ್ಪಲ್ಲ. ನನ್ನಂತಹ ಕ್ರೀಡಾಭಿಮಾನಿಗೆ ಧೋನಿಯೊಂದಿಗಿನ ಗೆಳೆತನ ಹೆಮ್ಮೆಯ ವಿಚಾರ ಎಂದು ಲಕ್ಷ್ಮಿರೈ ಮಾಧ್ಯಮಗಳ ಗುಸುಗುಸು ಸುದ್ದಿಗಳಿಗೆ ಸದ್ಯಕ್ಕೆ ಬ್ರೇಕ್ ಹಾಕಿದ್ದಾರೆ.

(ದಟ್ಸ್‌ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada