For Quick Alerts
  ALLOW NOTIFICATIONS  
  For Daily Alerts

  ಪ್ರಿಯಾಮಣಿಗೆ ಮನೆಯಿಂದ ಗೇಟ್ ಪಾಸ್ ಗೆ ಯತ್ನ

  |

  ಪ್ರಿಯಾಮಣಿ ಕನ್ನಡದ ಹುಡುಗಿ, ಪಂಚಭಾಷಾ ಬೆಡಗಿ. ಕನ್ನಡದ ಹುಡುಗಿಯಾದರೂ ಮೊದಲು ತೆಲುಗು, ತಮಿಳು, ಮಲಯಾಳಂನಲ್ಲಿ ಅಭಿನಯಿಸಿ ನಂತರ ಪಕ್ಕದ ಬಾಲಿವುಡ್ ಗೂ ಎಂಟ್ರಿ ಕೊಟ್ಟು ಪಂಚಭಾಷಾ ತಾರೆ ಎನಿಸಿಕೊಂಡವರು. ಈ ಪ್ರಿಯಾಮಣಿ 'ರಾಮ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದರು.

  ತಾನು ನಟಿಸುವ ಎಲ್ಲಾ ಭಾಷೆಯನ್ನೂ ಕಲಿತು ಸರಾಗವಾಗಿ ಮತನಾಡಬಲ್ಲ ಪ್ರವೀಣೆ ಈ ಜಾಣೆ. ರವಿತೇಜ, ನಾಗಾರ್ಜುನ್, ಅಭಿಷೇಕ್ ಬಚ್ಚನ್ ಹೀಗೆ ಸ್ಟಾರ್ ನಟರ ಜೊತೆ ನಟಿಸಿರುವ ಪ್ರಿಯಾ ಕನ್ನಡಕ್ಕೂ ಅಷ್ಟೇ ಮಹತ್ವ ಕೊಡುತ್ತಾಳೆ. ಬಂದ ಅವಕಾಶಗಳನ್ನೆಲ್ಲ ಒಪ್ಪಿಕೊಳ್ಳದೇ ಪಾತ್ರದಲ್ಲಿ ಚ್ಯೂಸಿಯಾಗಿರುವ ಈಕೆ ಸದ್ಯಕ್ಕೆ ಕಿಟ್ಟಿ ಜೊತೆ 'ಕೋ ಕೋ' ಹಾಗೂ ಸುದೀಪ್ ಜೊತೆ ವಿಷ್ಣುವರ್ಧನದಲ್ಲಿ ಅಭಿನಯಿಸಿದ್ದಾರೆ.

  ಇಂತಹ ಪ್ರಿಯಾಮಣಿಗೆ ಈಗ ಆಕೆಯ ತಂದೆಯೇ ವಿಲನ್ ಎನ್ನುವಂತಾಗಿದೆ. "ಚಿತ್ರರಂಗದಲ್ಲಿ ಹೆಸರು ಮಾಡಿದ್ದು ಸಾಕು. ಮದುವೆ ಬಗ್ಗೆ ಯೋಚನೆ ಮಾಡು" ಎಂದಿದ್ದಾರೆ. ಇದಕ್ಕೆ ಪ್ರಿಯಾ "ಇಷ್ಟು ಬೇಗ ನನಗೆ ಮನೆಯಿಂದ ಗೇಟ್ ಪಾಸ್ ಕೊಡಲು ರೆಡಿಯಾಗಿದ್ದೀರಾ? ನಾನಿನ್ನೂ ಸಾಧಿಸುವುದು ತುಂಬಾ ಇದೆ" ಎಂದು ಅಪ್ಪನ ಬಾಯಿ ಮುಚ್ಚಿಸಿದ್ದಾರಂತೆ. (ಒನ್ ಇಂಡಿಯಾ ಕನ್ನಡ)

  English summary
  Actress Priyamani father told her to get marry. But Priyamani did not agree that and told, she has to achieve more. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X