For Quick Alerts
  ALLOW NOTIFICATIONS  
  For Daily Alerts

  ಸಿದ್ದಾರ್ಥ್ ಮಲ್ಯಗೆ ಬೆಂಡೆತ್ತಿ ಬ್ರೇಕು ಹಾಕಿದ ಆಯೇಷಾ

  By Rajendra
  |

  ಬಾಲಿವುಡ್ ಹಾಟ್ ಬೆಡಗಿ ಆಯೇಷಾ ಟಕಿಯಾಗೆ ಕಿಂಗ್ ಫಿಶರ್ ಏರ್‌ಲೈನ್ಸ್‌ನಿಂದ ಒಂದು ಕೆಟ್ಟ ಅನುಭವವಾಗಿದೆಯಂತೆ. ಈಕೆಯ ತಂಗಿ ನಟೇಶಾಳೊಂದಿಗೆ ಕಿಂಗ್ ಫಿಶರ್ ಸಿಬ್ಬಂದಿ ದೆಹಲಿ ಏರ್‌ಪೋರ್ಟ್‌ನಲ್ಲಿ ನಡೆದುಕೊಂಡ ರೀತಿ ಆಯೇಷಾಗೆ ಸಿಕ್ಕಾಪಟ್ಟೇ ಕೋಪ ತರಿಸಿದೆ. ರಾಂಗ್ ಆದ ಆಕೆ ಸಿದ್ಧಾರ್ಥ್ ಮಲ್ಯಗೆ ಬೆಂಡಿತ್ತಿದ್ದಾರೆ.

  ಕಿಂಗ್ ಫಿಶರ್ ಏರ್‌ಲೈನ್ಸ್ ಸಿಬ್ಬಂದಿ ನಟೇಶಾರ ಬೋರ್ಡಿಂಗ್ ಟಿಕೆಟನ್ನು ಹರಿದು ಬಿಸಾಕಿದರಂತೆ. ಅವರ ನಡೆನುಡಿ ಬಗ್ಗೆ ಆಯೇಷಾ ಟ್ವಿಟ್ಟರ್‌ನಲ್ಲಿ ಕೆಂಡಕಾರಿದ್ದು ಹೀಗೆ, "ಅತ್ಯಂತ ಕಳಪೆ ಏರ್‌ಲೈನ್ಸ್ ಕಿಂಗ್‌ಫಿಶರ್!!! ದೆಹಲಿ ಏರ್‌ಪೋರ್ಟ್‌ನಲ್ಲಿ ನನ್ನ ಸಹೋದರಿಯೊಂದಿಗೆ ಸಿಬ್ಬಂದಿಯ ವರ್ತನೆ ತೀರಾ ಕೆಟ್ಟದಾಗಿತ್ತು. ಈ ಸಂಬಂಧ ನಾನು ಕೋರ್ಟ್ ಮೆಟ್ಟಿಲೇರುತ್ತೇನೆ. ನನ್ನ ತಂಗಿಗೆ ಆದ ಕೆಟ್ಟ ಅನುಭವ ಬೇರಾರಿಗೂ ಆಗಬಾರದು" ಎಂದಿದ್ದಾರೆ.

  ಏರ್‌ಪೋರ್ಟ್‌ನಲ್ಲಿ ಒಂಟಿ ಹುಡುಗಿ ಸಿಕ್ಕಿದರೆ ಹೇಗೆಲ್ಲಾ ಮಾಡ್ತಾರೆ ಎಂದು ನಟೇಶಾ ಮಾತಿನಲ್ಲೇ ಕೇಳಿ,"ಯಾರನ್ನು ಬೇಕಾದರೂ ನಾವು ಇಲ್ಲಿಂದ ಹೊರಗೆ ತಳ್ಳಬಹುದು, ಬೋರ್ಡಿಂಗ್ ಪಾಸು ಹರಿದು ಹಾಕುತ್ತೇನೆ ಎಂದು ಕಿಂಗ್ ಫಿಶರ್‌ನ ವಿನಯ್ ಪೋವೆಲ್" ಬೆದರಿಸಿದ್ದಾಗಿ ಹೇಳಿದ್ದಾರೆ ನಟೇಶಾ. ಆಕೆಯ ಬೋರ್ಡಿಂಗ್ ಪಾಸು ಹರಿದು ಹಾಕಿದ್ದು ಈತನೇನಂತೆ.

  ಈ ಬಗ್ಗೆ ತಕ್ಷಣ ಪ್ರತಿಕ್ರಿಯಿಸಿರುವ ಸಿದ್ಧಾರ್ಥ್ ಮಲ್ಯ, "ಆಯೇಷಾ ಯಾಕೆ ಇಷ್ಟೊಂದು ಎಗರಾಡುತ್ತಿದ್ದಾರೋ ಗೊತ್ತಾಗುತ್ತಿಲ್ಲ. ಇಷ್ಟಕ್ಕೂ ಆಕೆ ಸ್ಥಳದಲ್ಲಿ ಇರಲೇ ಇಲ್ಲ. ಯಾವುದೇ ಕತೆಗೆ ಎರಡು ಮುಖಗಳಿರುತ್ತದೆ" ಎಂದಿದ್ದಾನೆ. ಇದಕ್ಕೆ ಪ್ರತಿಯಾಗಿ ಆಯೇಷಾ, "ಮೊದಲು ಮ್ಯಾನರ್ಸ್ ಹಾಗೂ ರೆಸ್ಪೆಕ್ಟ್ ಹೇಗೆ ಕೊಡಬೇಕು ಎಂಬುದನ್ನು ಕಲಿತುಕೊಳ್ಳಿ" ಎಂದಿದ್ದಾರೆ. (ಏಜೆನ್ಸೀಸ್)

  English summary
  Bollywood actress Ayesha Takia’s sister Natasha was humiliated by Kingfisher staff at Delhi airport and the staff even tore her boarding pass. Ayesha tweeted, “The worst airline, Kingfisher!!!shockingly baddddddddddd airport staff behavior at Delhi airport with my sister. We are going to take serious action against this and go to court with it, let the law handle it, so that this does not happen to any girl again (sic).”

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X