ವಿತರಕರ ಕಪಿಮುಷ್ಟಿಯಲ್ಲಿ ಚಿತ್ರರಂಗ ಢಮಾರ್

By * ಮಹೇಶ್ ಎಂ.ಆರ್. ಬೆಂಗಳೂರು
<ul id="pagination-digg"><li class="previous"><a href="/gossips/07-non-kannada-film-release-dubbing-artists-kfcc-rules-aid0039.html">« Previous</a>

Distributors ruling KFI
ಕಾಗಕ್ಕ ಗುಬ್ಬಕ್ಕನ ಕಥೆ ಕೇಳಿ:"ಕನ್ನಡದ ಮಾರುಕಟ್ಟೆ ಸಣ್ಣದು. ಹೀಗಾಗಿ ಬಹುಕೋಟಿ ವೆಚ್ಚದ ಪರಭಾಷೆ ಚಿತ್ರಗಳು ಬಿಡುಗಡೆಯಾಗುತ್ತಿರುವಾಗ ಕನ್ನಡ ಚಿತ್ರಗಳನ್ನು ಬಿಡುಗಡೆಗೊಳಿಸುವುದರಿಂದ ಕನ್ನಡ ಚಿತ್ರಗಳಿಗೆ ಹಿನ್ನಡೆಯಾಗುತ್ತದೆ. ಪರಭಾಷೆಯ ತಾರಾಗಣ ಮತ್ತು ದೊಡ್ಡ ಚಿತ್ರಗಳು ಜನರನ್ನು ಆಕರ್ಷಿಸುತ್ತವೆ. ಹೀಗಾಗಿ ಪ್ರೇಕ್ಷಕ ಅವುಗಳಿಗೆ ಹೆಚ್ಚು ಮಹತ್ವ ಕೊಡುತ್ತಾನೆ." ಹೀಗಂತ ಕಾಗಕ್ಕ ಗುಬ್ಬಕ್ಕನ ಕಥೆ ಹೇಳಿದವರು ಬೇರೆ ಯಾರೂ ಅಲ್ಲ, ಸ್ವತ: ಒಬ್ಬ ಕನ್ನಡ ಚಿತ್ರಗಳ ನಿರ್ಮಾಪಕರು/ವಿತರಕರು.

ಕರ್ನಾಟಕದಲ್ಲಿ ಪರಭಾಷೆ ಚಿತ್ರಗಳ ಬಿಡುಗಡೆ ಸಮಯ ನೋಡಿಕೊಂಡು ಕನ್ನಡ ಚಿತ್ರಗಳ ಬಿಡುಗಡೆ ಮಾಡಬೇಕು ಎಂಬಂತಿದೆ ಇವರ ಮಾತುಗಳು. ಪರಭಾಷೆ ಚಿತ್ರಗಳನ್ನು ನಿಯಮ ಮೀರಿ ಬಿಡುಗಡೆ ಮಾಡುತ್ತಿರುವುದರಿಂದ ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗುತ್ತಿಲ್ಲ, ಇದರಿಂದ ಕನ್ನಡ ಚಿತ್ರಗಳಿಗೆ ಮಾರುಕಟ್ಟೆಯಲ್ಲಿ ಹಿನ್ನೆಡೆಯಾಗುತ್ತಿದೆ. ಇದರಿಂದ ಕನ್ನಡ ಚಿತ್ರಗಳ ವಿತರಣೆ ಹಕ್ಕನ್ನು ಪಡೆದುಕೊಂಡವರಿಗೆ, ನಿರ್ಮಾಪಕರಿಗೆ, ಆ ಮೂಲಕ ಕಲಾವಿದರಿಗೆ ನಷ್ಟವಾಗುತ್ತಿದೆ.

ಆದ್ದರಿಂದ ಪರಭಾಷೆ ಚಿತ್ರಗಳಿಗಿರುವ ಬಿಡುಗಡೆ ನಿಯಮವನ್ನು ಆಯಾ ಚಿತ್ರಗಳ ವಿತರಕರು ಕಟ್ಟುನಿಟ್ಟಾಗಿ ಲಿಸಬೇಕು. ಪಾಲಿಸದವರ ವಿರುದ್ದ ಕ್ರಮ ಕೈಗೊಳ್ಳಬೇಕು ಅಂತೆಲ್ಲ ಹೇಳಬೇಕಾದವರು, ಆ ಸಮಯದಲ್ಲಿ ಕನ್ನಡ ಚಿತ್ರಗಳನ್ನು ಬಿಡುಗಡೆ ಮಾಡುವುದು ಸರಿಯಲ್ಲ, ನಮ್ಮ ಮಾರುಕಟ್ಟೆ ಸಣ್ಣದು ಹಾಗೆ ಹೀಗೆ ಅಂತ ಸ್ಪರ್ಧೆಯಿಂದ ಹಿಂದೆ ಸರಿಯೊ ಮಾತುಗಳನ್ನು ಕೇಳಿದಾಗ ನಗಬೇಕೋ ಅಳಬೇಕೊ ಎಂಬುದೇ ಗೊತ್ತಾಗುತ್ತಿಲ್ಲ.

ಇದು ಪರೋಕ್ಷವಾಗಿ ಆ ಪರಭಾಷೆ ಚಿತ್ರಗಳ ನಿಯಮ ಮೀರಿದ ಬಿಡುಗಡೆಗೆ ಬೆಂಬಲ ಕೊಡುವುದಲ್ಲದೇ ತಮಗೆ ಸ್ಪರ್ಧೆ ಎದುರಿಸುವ ಯೋಗ್ಯತೆ ಇಲ್ಲ, ಅಥವಾ ತಾಕತ್ತಿಲ್ಲ ಎಂದು ಆಡಿದಂತಾಗುತ್ತದೆ.

ಕೊನೆ ಮಾತು: ಪರಭಾಷೆ ಚಿತ್ರಗಳಿಗೆ ಸೆಡ್ಡು ಹೊಡೆದು ಕನ್ನಡ ಚಿತ್ರಗಳು ನಿಲ್ಲಬೇಕೇ ಹೊರತು ಹಚ್ಚ ಹಸಿರಾದ ಭೂಮಿಯನ್ನು ಮೊದಲು ಅವುಗಳಿಗೆ ಮೆಯ್ಯಲು ಬಿಟ್ಟು ಆಮೇಲೆ ನಮ್ಮ ವ್ಯಾಪ್ತಿ ಸಣ್ಣದು ಎಂದು ಅಳುವುದು ಮಾರುಕಟ್ಟೆ ಜಗತ್ತಿನಲ್ಲಿ ಖಂಡಿತ ಒಪ್ಪಲು ಸಾಧ್ಯವಿಲ್ಲ. ಇನ್ನು ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಹೆಚ್ಚಿಸುವ ಜವಾಬ್ದಾರಿ ಹೊತ್ತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೇ ಎದ್ದು ಕನ್ನಡ ಚಿತ್ರರಂಗ ಮೈಯುವುದನ್ನು ನೋಡುವಂಥ ದುಸ್ಥಿತಿ ಕನ್ನಡ ಪ್ರೇಕ್ಷಕರಿಗೆ ಮುಂದಿನ ದಿನಗಳಲ್ಲಿ ಬಾರದಿರಲಿ.!

<ul id="pagination-digg"><li class="previous"><a href="/gossips/07-non-kannada-film-release-dubbing-artists-kfcc-rules-aid0039.html">« Previous</a>

More from Filmibeat

English summary
KFCC is supporting many producers and distributors in Kannada Film Industry to release more non Kannada films release there by breaking all rules and regulations. KFCC is not allowing dubbing and making artists to suffer. Cinema Distributors and Producers are ruling the KFI.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X