»   » ಭಟ್ಟರ ಮೇಲೆ ರಾಕ್‌ಲೈನ್ ಮುನಿಸು ಹೊಸದಲ್ಲ

ಭಟ್ಟರ ಮೇಲೆ ರಾಕ್‌ಲೈನ್ ಮುನಿಸು ಹೊಸದಲ್ಲ

Subscribe to Filmibeat Kannada
producer rockline venkatesh
ಲಗೋರಿ' ಆಟ ರದ್ದಾಗಿದ್ದು ಯಾಕೆ ಅನ್ನೋದಕ್ಕೆ ದಿನೇದಿನೇ ಹೊಸ ಕಾರಣ ಇಣುಕುತ್ತಿದೆ. ಸತ್ಯಾಸತ್ಯತೆಗಳ ಕುರಿತ ಜಿಜ್ಞಾಸೆಯಂತೂ ಇದ್ದೇಇದೆ. ಇಲ್ಲಿಯವರೆಗೆ ಬಹಿರಂಗವಾಗದ ಸತ್ಯವೊಂದು ಈಗ ಬಿಚ್ಚಿಕೊಂಡಿದೆ. ಅದೇನೆಂದರೆ ಗಾಳಿಪಟ ಚಿತ್ರೀಕರಣ ಪ್ರಾರಂಭವಾದಾಗಲೇ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ನಿರ್ದೇಶಕರ ಸಂಘಕ್ಕೆ ಯೋಗರಾಜ ಭಟ್ಟರ ವಿರುದ್ಧ ದೂರು ಕೊಟ್ಟಿದ್ದರು!

ಮುಂಗಾರುಮಳೆ ನಂತರ ಭಟ್ಟರು ರಾಕ್‌ಲೈನ್‌ಗೆ ಸಿನಿಮಾ ಮಾಡಿಕೊಡಬೇಕಿತ್ತು. ಆದರೆ ಅವರು ಹಾರಿಸಿದ್ದು ಗಾಳಿಪಟ. ಆಡಿದ ಮಾತಿನಂತೆ ತಮ್ಮ ಸಿನಿಮಾ ಮುಗಿಸದೆ ಗಾಳಿಪಟ ಮಾಡಕೂಡದು ಎಂದು ರಾಕ್‌ಲೈನ್ ಆಗ ಪಟ್ಟು ಹಿಡಿದಿದ್ದರು. ನಿರ್ದೇಶಕರ ಸಂಘ ಇಬ್ಬರನ್ನೂ ಕೂರಿಸಿಕೊಂಡು ಮಾತನಾಡಿ ತಾತ್ಕಾಲಿಕ ಪರಿಹಾರ ಹೇಳಿತ್ತು. ಅದರಂತೆ ಗಾಳಿಪಟ ಮುಗಿಸಿದ ಮೇಲೆ ರಾಕ್‌ಲೈನ್ ಸಿನಿಮಾ ಮಾಡಿಕೊಡಬೇಕು ಎಂದು ಮಾತಾಗಿತ್ತು.

ತಿಂಗಳುಗಟ್ಟಲೆ ಕೂತು ಸ್ಕ್ರಿಪ್ಟ್ ಮಾಡಿದ ಮೇಲೆ ಈಗ ಯೋಗರಾಜ ಭಟ್ಟರಿಗೆ ರಾಕ್‌ಲೈನ್ ತಾರತಮ್ಯ ಮಾಡಿದ್ದಾರೆ. ಬಜೆಟ್ ಎಂಟ್ಹತ್ತು ಕೋಟಿ ಜಾಸ್ತಿಯಾಯಿತು ಅನ್ನೋದು ಅವರ ಸಬೂಬು. ಮೇಲುನೋಟಕ್ಕೆ ಈ ಕಾರಣ ಎದ್ದುಕಾಣುತ್ತಿದ್ದರೂ ರಾಕ್‌ಲೈನ್ ಬೇಕೆಂದೇ ಭಟ್ಟರ ವಿರುದ್ಧ ಸೇಡುತೀರಿಸಿಕೊಳ್ಳಲೇ ಹೀಗೆ ಮಾಡಿದ್ದಾರೆ. ಗಾಂಧಿನಗರದ ಮಂದಿ ದ್ವೇಷಕ್ಕಾಗಿ ಒಂದಷ್ಟು ದುಡ್ಡು ಕಳೆದುಕೊಳ್ಳಲೂ ಸಿದ್ಧ ಎಂದೂ ಕೆಲವರು ಪಿಸುನುಡಿಯುತ್ತಿದ್ದಾರೆ. ಒಂದು ಅತಿ ನಿರೀಕ್ಷಿತ ಚಿತ್ರಕ್ಕೆ ಕನ್ನಡದಲ್ಲಿ ಇತ್ತೀಚೆಗೆ ಈ ಗತಿಯಂತೂ ಬಂದಿರಲಿಲ್ಲ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada