ನಾಯಕಿಯಾಗಿ ಮತ್ತೆ ಬಣ್ಣಹಚ್ಚಲಿರುವ ರಾಧಿಕಾ

ಚಿತ್ರರಂಗದಿಂದ ದೂರವಿದ್ದ ನನಗೆ ಐದು ವರ್ಷ ತುಂಬಾ ಕಷ್ಟವಾಗಿತ್ತು. ಲೈಫ್ ಸೆಟ್ಲ್ ಮಾಡ್ಕೊಂಡ್ರೂ, ಬಣ್ಣದ ಬದುಕಿನ ಮೋಹವಿತ್ತು. ಇತರರ ಚಿತ್ರಗಳನ್ನು ನೋಡುವಾಗ, ನಾನೂ ನಟಿಸಬೇಕು, ಕುಣಿಯಬೇಕು ಎಂನಿಸುತ್ತಿತ್ತು. ಆದರೆ ಸಾಧ್ಯವಾಗುತ್ತಿರಲಿಲ್ಲ. ಈಗ ಚಿತ್ರರಂಗಕ್ಕೆ ಮತ್ತೆ ಹತ್ತಿವಾಗುತ್ತಿದ್ದೇನೆ. ಲಕ್ಕಿ ಚಿತ್ರ ನಿರ್ಮಿಸುವ ಮೂಲಕ ಆತ್ಮವಿಶ್ವಾಸ ಮರಳಿ ಪಡೆದಿದ್ದೇನೆ.
ಇದೀಗ ಇನ್ನೊಂದು ಹೊಸ ಚಿತ್ರವನ್ನು ನನ್ನದೇ ಬ್ಯಾನರ್ ನಲ್ಲಿ ಮಾಡುವ ಸಿದ್ಧತೆಯಲ್ಲಿದ್ದೇನೆ. ಅದಕ್ಕೆ ನಾನೇ ನಾಯಕಿ. ಇದು ಚಿತ್ರರಂಗಕ್ಕೆ ನನ್ನ ರೀ ಎಂಟ್ರಿಯೂ ಹೌದು. ಕಾರಣ, ನಾನು ಹೋದಲ್ಲೆಲ್ಲಾ ನನ್ನ ಅಭಿಮಾನಿಗಳು ಮುತ್ತಿಗೆ ಹಾಕುತ್ತಾರೆ, ಯಾವಾಗ ನಟಿಸ್ತೀರಿ ಎಂದು ಪ್ರಶ್ನಿಸುತ್ತಾರೆ. ಅವರಿಗೆ ಶೀಘ್ರದಲ್ಲೇ ಸಿಹಿಸುದ್ದಿ ನೀಡುತ್ತಿದ್ದೇನೆ. ನನ್ನ ಈ ನಿರ್ಧಾರಕ್ಕೆ ಗಂಡನ ಸಮ್ಮತಿಯೂ ಇದೆ" ಎಂದಿದ್ದಾರೆ. ಒಟ್ಟಿನಲ್ಲಿ ಮತ್ತೆ ರಾಧಿಕಾ ಬಣ್ಣ ಹಚ್ಚುತ್ತಿದ್ದಾರೆ, ಪ್ರೇಕ್ಷಕರು ಕಣ್ಣುಬಾಯಿ ಬಿಟ್ಟು ನೋಡಲಿದ್ದಾರೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Actress Radhika told that she and her husband HD Kumaraswamy are good in their relationship. Radhika has denied rumours about breakup with HD Kumaraswamy.


Click it and Unblock the Notifications











