ರಾಂಗ್ ಆಗಿದ್ದಾರೆ ರಿಯಲ್ 'ರಾಗಿಣಿ' ದೀಪಿಕಾ

By Prasad

ನೈಜ ಘಟವಾವಳಿ ಬಿಂಬಿಸುವ ನೆಪದಲ್ಲಿ ಹಸಿಹಸಿ ಲೈಂಗಿಕ ದೃಶ್ಯಗಳನ್ನು ಅಳವಡಿಸಲಾಗಿದೆ ಎಂಬ ಆರೋಪ ಹೊತ್ತಿರುವ 'ರಾಗಿಣಿ ಎಮ್ಎಮ್ಎಸ್'ಮತ್ತೊಂದು ವಿವಾದದ ಕೇಂದ್ರ ಬಿಂದುವಾಗಿದೆ. ದೆಹಲಿಯ ನಿವಾಸಿಯಾಗಿರುವ ದೀಪಿಕಾ ಎಂಬುವವರ ನಿಜ ಜೀವನದಲ್ಲಿ ನಡೆದ ಘಟನೆಯನ್ನು ಆಧರಿಸಿ ಚಿತ್ರಕಥೆಯನ್ನು ನೇಯಲಾಗಿದ್ದು, ಬಿಡುಗಡೆಗೆ ಮುನ್ನ ತಮಗೆ ತೋರಿಸದಿದ್ದರೆ ಕಾನೂನು ಕ್ರಮ ಜರುಗಿಸುವುದಾಗಿ 'ರಿಯಲ್ ರಾಗಿಣಿ' ದೀಪಿಕಾ ಬೆದರಿಕೆ ಹಾಕಿದ್ದಾರೆ.

ಏಕ್ತಾ ಕಪೂರ್ ನಿರ್ಮಾಣದ, ಅನಿಲ್ ಕೃಪಲಾನಿ ನಿರ್ದೇಶನದ ಚಿತ್ರ ಇದೇ ಮೇ 13ರಂದು ದೇಶದಾದ್ಯಂತ ತೆರೆಯ ಮೇಲೆ ಅಪ್ಪಳಿಸಲಿದೆ. ಚಿತ್ರದ ಪ್ರಿವ್ಯೂ ತೋರಿಸುವಂತೆ ದೀಪಿಕಾ ಬಾಲಾಜಿ ಸಂಸ್ಥೆಯ ಕಚೇರಿಗೆ ಎಡತಾಕುತ್ತಿದ್ದರೂ, ಚಿತ್ರ ಇನ್ನೂ ಪೂರ್ತಿಯಾಗೇ ಇಲ್ಲ ಎಂದು ಏಕ್ತಾ ಕಪೂರ್ ತಿಪ್ಪೆ ಸಾರಿಸುತ್ತಿದ್ದಾರಂತೆ. ಚಿತ್ರ ಪೂರ್ತಿಯಾಗದಿರುವಾಗ ಇನ್ನೊಂದೇ ವಾರದಲ್ಲಿ ಚಿತ್ರ ಬಿಡುಗಡೆ ಮಾಡಲು ಹೇಗೆ ಸಾಧ್ಯ? ಎಂದು 22 ವರ್ಷದ ದೀಪಿಕಾ ಅನುಮಾನದ ನೋಟ ಬೀರುತ್ತಿದ್ದಾರೆ.

ಚಿತ್ರದ ನಾಯಕಿ ತನ್ನ ಇನಿಯನ ಜೊತೆ ಏಕಾಂಗಿಯಾಗಿದ್ದಾಗ ಗೌಪ್ಯವಾಗಿ ಮೊಬೈಲ್ ನಲ್ಲಿ ಅಶ್ಲೀಲ ದೃಶ್ಯ ಚಿತ್ರೀಕರಿಸಿದ ಘಟನೆಯನ್ನು ಆಧರಿಸಿ ಚಿತ್ರಕಥೆಯನ್ನು ಹೆಣೆಯಲಾಗಿದೆ. ಅವರಿದ್ದ ಮನೆಯಲ್ಲಿ ಅಲೌಕಿಕ ಸಂಗತಿಗಳು ಸಂಭವಿಸಿ ರೋಚಕ ತಿರುವು ಪಡೆಯುತ್ತದೆ. ಮುಂದೇನಾಗುತ್ತದೆ ಎಂಬುದನ್ನು ಈ ಸಸ್ಪೆನ್ಸ್ ಥ್ರಿಲ್ಲರ್ ನೋಡಿಯೇ ಅನುಭವಿಸಬೇಕು. [ರಾಗಿಣಿ ಎಮ್ಎಮ್ಎಸ್ ಟ್ರೇಲರ್ ನೋಡಿರಿ]

ಚಿತ್ರೀಕರಣಕ್ಕೆ ಮುನ್ನ ಕಥೆಯನ್ನು ಹೇಳಲಾಗಿತ್ತು. ಆದರೆ ಕಥೆಗೂ ದೃಶ್ಯರೂಪದಲ್ಲಿ ಅಳವಡಿಸುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ನನ್ನ ಪಾತ್ರ ಹೇಗೆ ಬಂದಿದೆ ಎಂದು ನೋಡಲೇಬೇಕು. ತೀರಾ ಅಶ್ಲೀಲವಾಗಿದ್ದರೆ ನನ್ನ ಜೀವನವೇ ಸರ್ವನಾಶವಾಗುವ ಸಾಧ್ಯತೆಯೂ ಇರುತ್ತದೆ ಎಂಬುದು ದೀಪಿಕಾ ಅವರ ಅಳಲು. ಏಕ್ತಾ ಕಪೂರ್ ಅವರ ವರ್ಷನ್ ಬೇರೆಯೇ ಇದೆ. ಚಿತ್ರದ ಶೇ.30ರಷ್ಟು ಭಾಗ ಮಾತ್ರ ನೈಜ ಘಟನೆಯನ್ನು ಆಧರಿಸಿದೆ. ಉಳಿದದ್ದು ಕಾಲ್ಪನಿಕ ಕಥೆಯಾಗಿದೆ ಎಂಬುದು ಏಕ್ತಾ ಅವರ ನುಡಿ.

More from Filmibeat

English summary
22-year-old Deepika from Delhi, whose real life story has inspired Ekta Kapoor to make Ragini MMS movie, is contemplating taking legal action against the producer if the movie is not shown to her before the release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X