»   » ಈ ಚಿತ್ರವನ್ನು ಹೈಸ್ಕೂಲು ಹುಡುಗಿಯರು ನೋಡಿದರೆ ಗತಿ?

ಈ ಚಿತ್ರವನ್ನು ಹೈಸ್ಕೂಲು ಹುಡುಗಿಯರು ನೋಡಿದರೆ ಗತಿ?

Subscribe to Filmibeat Kannada


ನಿಮ್ಮ ಮನೆ ಹೆಣ್ಣು ಮಕ್ಕಳು ಚೆಲುವಿನ ಚಿತ್ತಾರ ಸಿನಿಮಾ ನೋಡದಂತೆ ಎಚ್ಚರವಹಿಸಿ!ಮಾನ್ಯರೇ,

ನಮ್ಮಂತೆಯೇ ನೀವೂ ಚೆಲುವಿನ ಚಿತ್ತಾರ ಸಿನಿಮಾದ ದೃಶ್ಯಗಳನ್ನು ಟೀವಿಯಲ್ಲಿ ನೋಡಿರಬಹುದು. ಅದರಲ್ಲೊಬ್ಬ ಯುವಕ ಅಪ್ರಾಪ್ತ ಬಾಲಕಿಯನ್ನು ನೀನು ನಿಜವಾಗ್ಯೂ ನನ್ನನ್ನು ಪ್ರೀತಿ ಮಾಡ್ತೀಯಾ? ಅಂತ ಕೇಳುತ್ತಾನೆ. ಅದಕ್ಕೆ ಆ ಹುಡುಗಿ ಹೌದು ಕಣೋ, ನಿಜವಾಗಿಯೂ ನಿನ್ನ ಪ್ರೀತಿಸ್ತೀನಿಅನ್ನುತ್ತಾಳೆ.

ಮತ್ತೊಂದು ದೃಶ್ಯದಲ್ಲಿ ಶಾಲೆಗೆ ಹೋಗುವಾಗ ಫ್ಲೈಯಿಂಗ್ ಕಿಸ್ ಕೊಡುತ್ತಾಳೆ. ಆ ದೃಶ್ಯಗಳಲ್ಲಿ ನಟಿಸಿದವರು ಮುಂಗಾರು ಮಳೆಖ್ಯಾತಿಯ ಗಣೇಶ್ ಮತ್ತು ಅಮೂಲ್ಯ ಎಂಬ 14ವರ್ಷದ ಬಾಲಕಿ. ಇವುಗಳನ್ನು ನೋಡಿದಾಗ ಮನಸ್ಸಿಗೆ ಬೇಸರವಾಯಿತು.

ಹದಿನಾಲ್ಕು ವಯಸ್ಸಿನ ಮುಗ್ಧ ಹುಡುಗಿಯರನ್ನು ಹೀಗೆ ಪ್ರೀತಿ ಪ್ರೇಮ ಅಂತ ಚಿತ್ರಿಸಿದರೆ ಹೈಯರ್ ಪ್ರೈಮರಿ ಮತ್ತು ಹೈಸ್ಕೂಲಿನಲ್ಲಿ ಕಲಿಯುತ್ತಿರುವ ಲಕ್ಷಾಂತರ ಹೆಣ್ಣು ಮಕ್ಕಳಿಗೆ ಕೆಟ್ಟ ಸಂದೇಶ ಕೊಟ್ಟಂತಾಗುವುದಿಲ್ಲವೇ?

ಚಿತ್ರದ ನಾಯಕಿ ಅಮೂಲ್ಯಳ ಸ್ಥಾನದಲ್ಲಿ ತನ್ನನ್ನು ಕಲ್ಪಿಸಿಕೊಂಡು ಒಬ್ಬ ಹುಡುಗಿ, ತಲೆಮಾಸಿದ ಯಾವನನ್ನೋ ಗಣೇಶ್ ಅಂತ ಭ್ರಮಿಸಿ ಪ್ರೀತಿಸಲು ಹೊರಟರೆ ಗತಿ? ಇದು ನನ್ನಂತೆಯೇ ನನ್ನ ಸ್ನೇಹಿತರನ್ನೂ ಕಾಡಿದ ಪ್ರಶ್ನೆ. ಇದನ್ನು ಯಾರಲ್ಲಿ ಹೇಳಿಕೊಳ್ಳಬೇಕು ಅನ್ನಿಸಿದಾಗ ತಕ್ಷಣ ನೆನಪಾದದ್ದು ನೀವು.

ಗಂಭೀರವಾಗಿ ತೆಗೆದುಕೊಳ್ಳುತ್ತೀರೆಂದು ಭಾವಿಸಿದ್ದೇವೆ.

-ರಮಾನಂದ ಕರ್ಕೇರಾ ಮತ್ತು ಗೆಳೆಯರು.

ಪೂರಕ ಓದಿಗೆ:
ಚೆಲುವಿನ ಚಿತ್ತಾರ : ಚಿತ್ರ ವಿಮರ್ಶೆ
ಚೆಲುವಿನ ಚಿತ್ತಾರದ ಹಾಡುಗಳು ಹೀಗಿವೆ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada