For Quick Alerts
  ALLOW NOTIFICATIONS  
  For Daily Alerts

  ಜಯಮಾಲಾ ಬಂಧನ : ಕೇರಳ ವಿಧಾನಸಭೆ ನಿರ್ಣಯ

  By Staff
  |


  ವಿಚಾರಣೆಗೆ ಕ್ಷಣಗಣನೆ, ಕರ್ನಾಟಕದಲ್ಲಿ ಪ್ರಗತಿಪರ ಸಂಘಟನೆಗಳಿಂದ ವ್ಯಾಪಕ ವಿರೋಧ.

  ತಿರುವನಂತಪುರಂ : ಶಬರಿಮಲೆ ಅಯ್ಯಪ್ಪ ಸ್ವಾಮಿಯ ಪಾದಸ್ಪರ್ಶ ಮಾಡಿರುವುದಾಗಿ ಹೇಳಿದ್ದ ಕನ್ನಡ ಚಿತ್ರನಟಿ ಜಯಮಾಲಾರನ್ನು ಬಂಧಿಸಿ, ವಿಚಾರಣೆಗೊಳಪಡಿಸಬೇಕೆಂದು ಕೇರಳ ವಿಧಾನಸಭೆ ನಿರ್ಧರಿಸಿದೆ.

  ವಿಧಾನಸಭೆಯಲ್ಲಿ ಈ ಕುರಿತು ವಿಷಯ ಪ್ರಸ್ತಾಪಗೊಂಡಿತು. ಜಯಮಾಲಾ ಬಂಧನಕ್ಕೆ ಸರ್ವಸಮ್ಮತ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ನಿರ್ಣಯವೊಂದನ್ನು ಅಂಗೀಕರಿಸಲಾಯಿತು.

  ಕರ್ನಾಟಕದಲ್ಲಿ ತಳಮಳ : ಜಯಮಾಲಾರನ್ನು ಬಂಧಿಸಿ ವಿಚಾರಣೆಗೊಳಪಡಿಸಲು, ಕೇರಳ ಪೊಲೀಸರು ಯಾವುದೇ ಕ್ಷಣ ಬೆಂಗಳೂರಿಗೆ ಆಗಮಿಸುವ ನಿರೀಕ್ಷೆ ಇದೆ. ಈ ಮೊದಲು ಜಯಮಾಲಾರಿಂದ ಮಾಹಿತಿ ಪಡೆಯಲು ಬಂದಿದ್ದ ಕೇರಳ ಪೊಲೀಸರ ತಂಡ ಬರಿಗೈಯಿಂದ ತೆರಳಿದ್ದನ್ನು ಇಲ್ಲಿ ಸ್ಮರಿಸಬಹುದು.

  ಜಯಮಾಲಾ ಪಾದಸ್ಪರ್ಶ ಮಾಡಿದ್ದಾರೋ, ಬಿಟ್ಟಿದ್ದಾರೋ ಎನ್ನುವುದನ್ನು ಅವರ ಆತ್ಮಸಾಕ್ಷಿಗೆ ಬಿಡೋಣ. ಆದರೆ ಈ ಪ್ರಕರಣದಿಂದ ಧಾರ್ಮಿಕ ಸಮಾನತೆ, ಲಿಂಗಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯ ಸೇರಿದಂತೆ ಪ್ರಜಾಪ್ರಭುತ್ವಕ್ಕೇ ಸಂಚಕಾರ ಬಂದಂತಾಗಿದೆ ಎಂದು ಪ್ರಗತಿಪರ ಸಂಘಟನೆಗಳು ಹೇಳಿವೆ.

  (ಏಜನ್ಸೀಸ್‌)

  Post your views

  ಪಾದಸ್ಪರ್ಶ ಪ್ರಕರಣದ ಸುತ್ತ :
  ಅಯ್ಯಪ್ಪ ಕ್ಷಮಿಸಪ್ಪ.. ಜಯಮಾಲಾರ ಪ್ರಾಯಶ್ಚಿತ್ತ ಪೂಜೆ
  ಜಯಮಾಲಾ ಸುಳ್ಳಿಯಾ? : ಕೇರಳ ಪೊಲೀಸರಿಂದ ವಿಚಾರಣೆ
  ಬ್ರಹ್ಮಚಾರಿ ದೇವರು ಅಯ್ಯಪ್ಪನಿಗೆ ಜಯಮಾಲಾರಿಂದ ಅಪಚಾರ?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X